Udayavni Special

ಜಿಪಂ ನೂತನ ಅಧ್ಯಕ್ಷ ಪ್ರಸಾದ್‌

2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ, ಸಹಿ ಹಾಕಿ 17 ಸದಸ್ಯರ ಬೆಂಬಲ

Team Udayavani, Nov 21, 2020, 1:39 PM IST

ಜಿಪಂ ನೂತನ ಅಧ್ಯಕ್ಷ ಪ್ರಸಾದ್‌

ದೇವನಹಳ್ಳಿ: ಜಿಲ್ಲಾ ರಾಜಕಾರಣದಲ್ಲಿ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಪಂ ನೂತನ ಅಧ್ಯಕ್ಷರಾಗಿ ಸೂಲಿಬೆಲೆ ಕ್ಷೇತ್ರದ ಸದಸ್ಯ ವಿ.ಪ್ರಸಾದ್‌ ಅವಿರೋಧವಾಗಿ ಆಯ್ಕೆಯಾದರು.

ಜಿಪಂನ 21 ಸದಸ್ಯ ಬಲದಲ್ಲಿ ಕಾಂಗ್ರೆಸ್‌ 13, ಜೆಡಿಎಸ್‌ 5, ಬಿಜೆಪಿ 3 ಸ್ಥಾನ ಹೊಂದಿದೆ. ಜಿಪಂ ಅಧ್ಯಕ್ಷರಾಗಿದ್ದ ಜಯಮ್ಮ ಲಕ್ಷ್ಮೀ ನಾರಾಯಣ್‌ ವಿರುದ್ಧ 17 ಸದಸ್ಯರು ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಿದ್ದರು. ಗೊತ್ತುವಳಿ ನಿರ್ಣಯಕ್ಕೂ ಮೊದಲೇ ಜಯಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡರು.

ಕೆಲವರು ಪಕ್ಷಾಂತರ: ಕಾಂಗ್ರೆಸ್‌ನಿಂದ ಗೆದ್ದಿದ್ದ ನಂದಗುಡಿ ಜಿಪಂ ಕ್ಷೇತ್ರದ ಸದಸ್ಯ ನಾಗ ರಾಜು, ಎಂಟಿಬಿ ನಾಗರಾಜ್‌ ಅವರ ಜತೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.ಜಯಮ್ಮ ಸಹ ಕಾಂಗ್ರೆಸ್‌ನಲ್ಲಿ ಗೆದ್ದು, ಈಗ ಬಿಜೆಪಿ ಸೇರಿದ್ದಾರೆ. ಹೊಸಕೋಟೆ ತಾಲೂಕಿನ ಜಿಪಂ ಸದಸ್ಯರಾದ ಕೃಷ್ಣಮೂರ್ತಿ, ಜಯಕುಮಾರಿ ಬಿಜೆಪಿಯಿಂದ ಗೆದ್ದು, ಈಗ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಜತೆ ಗುರುತಿಸಿಕೊಂಡಿದ್ದಾರೆ.

ಕಾಂಗ್ರೆಸ್‌ನ 11, ಜೆಡಿಎಸ್‌ನ 5, ಶರತ್‌ ಬಚ್ಚೇಗೌಡ ಜತೆ ಗುರ್ತಿಸಿಕೊಂಡಿರುವ ಇಬ್ಬರು ಸೇರಿ 17 ಸದಸ್ಯರು ವಿ.ಪ್ರಸಾದ್‌ ಅವರ ಪರ ಸಹಿ ಹಾಕುವುದರ ಮೂಲಕ ಬೆಂಬಲ ಸೂಚಿಸಿದರು. ಜಿಪಂ ಸದಸ್ಯರಾದ ಚನ್ನಸಂದ್ರ ಸಿ.ನಾಗರಾಜು, ಜಯಮ್ಮ, ನಂಜುಂಡಪ್ಪ, ಜೆಡಿಎಸ್‌ನ ಸದಸ್ಯೆಪುಷ್ಪ ಸಂಪತ್‌ ಗೈರು ಹಾಜರಿಯಾಗಿದ್ದರು.ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ವಿ.ಪ್ರಸಾದ್‌ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಯಾರು ಸಹ ನಾಮಪತ್ರ ಸಲ್ಲಿಸದ ಕಾರಣ ವಿ.ಪ್ರಸಾದ್‌ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿಆಯ್ಕೆಗೊಂಡಿದ್ದಾರೆಎಂದು ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‌ ರಾಜ್‌ ಸಿಂಗ್‌ ಘೋಷಿಸಿದರು.

ಅಲ್ಪಾವಧಿಯಲ್ಲೇ ಅಭಿವೃದ್ಧಿಗೆ ಶ್ರಮ: ನೂತನ ಅಧ್ಯಕ್ಷ ವಿ.ಪ್ರಸಾದ್‌ ಮಾತನಾಡಿ, ಸ್ಪಷ್ಟ ಬಹುಮತ ಹಾಗೂ ಸದಸ್ಯರ ಬೆಂಬಲ ಇದ್ದಿದ್ದರಿಂದ ಎರಡನೇ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಅಲ್ಪಾವಧಿಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಜಿಲ್ಲೆಯಲ್ಲಿ ಜನಾರೋಗ್ಯ, ಶಿಕ್ಷಣ, ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇರುವ ಕಡಿಮೆ ಅವಧಿಯಲ್ಲಿ ವೇಗ ಹೆಚ್ಚಿಸಲು ಶಕ್ತಿ ಮೀತಿ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ಬೆಂಬಲಿಸಿದವರಿಗೆ ಚಿರಋಣಿ: ಜಿಲ್ಲೆಯ ಆಡಳಿತಯಂತ್ರವನ್ನು ಚುರುಕುಗೊಳಿಸಲಾಗುವುದು. ಜಿಲ್ಲೆಯ ಅಭಿವೃದ್ಧಿ ಕುಂಠಿತ ವಾಗಿರುವುದನ್ನು ತ್ವರಿತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕೋವಿಡ್ ಗೆ ಔಷಧಿ ಬಂದಿಲ್ಲ. ಅದನ್ನು ತಡೆ ಗಟ್ಟಲು ಇರುವಂತಹ ಮಾರ್ಗೋಪಾಯಗಳಪಾಲಿಸುವಂತೆ ಎಲ್ಲಾ ರೀತಿಯಲ್ಲಿ ಸಹಕಾರನೀಡಲಾಗುತ್ತದೆ. ನನ್ನನ್ನು ಬೆಂಬಲಿಸಿ, ಅಧ್ಯಕ್ಷರನ್ನಾಗಿ ಮಾಡಿದ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಮತ್ತೆ ಅಧ್ಯಕ್ಷರಾಗಲು ಸಹಕಾರ ನೀಡಿದ್ದರಿಂದ ಅವರನ್ನು ಅಭಿನಂದಿಸುತ್ತೇನೆ ಎಂದರು.ಶಾಸಕರಾದ ಕೃಷ್ಣಬೈರೇಗೌಡ, ವೆಂಕಟರಮಣಯ್ಯ, ಬೈರತಿ ಸುರೇಶ್‌, ಶರತ್‌ ಬಚ್ಚೇಗೌಡ, ಮಾಜಿ ಶಾಸಕ ಮುನಿನರಸಿಂಹಯ್ಯ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ.ಮುನೇಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮುನಿಶಾಮಪ್ಪ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್‌, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್‌, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಕನ್ಯಾಕುಮಾರಿ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಂಪುಟ‌ ವಿಸ್ತರಣೆ: ಬಹಿರಂಗವಾಗಿ ಮಾತನಾಡುವುದನ್ನು ಪಕ್ಷ‌ ಗಂಭೀರವಾಗಿ ಪರಿಗಣಿಸುತ್ತದೆ

ಸಂಪುಟ‌ ವಿಸ್ತರಣೆ: ಬಹಿರಂಗವಾಗಿ ಮಾತನಾಡುವುದನ್ನು ಪಕ್ಷ‌ ಗಂಭೀರವಾಗಿ ಪರಿಗಣಿಸುತ್ತದೆ

vivo

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

netflix

Netflix Stream Fest: ಡಿ. 5 ಮತ್ತು 6 ರಂದು ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ

15-best-apps,-games-of-2020-on-Apple-App-Store

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ

dk-shivakumar

ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ; ಡಿ.ಕೆ. ಶಿವಕುಮಾರ್ ಸ್ವಾಗತ

ct-ravi

ಹೈದರಾಬಾದ್ ಪಾಲಿಕೆ ಫಲಿತಾಂಶ ಬಿಜೆಪಿಯ ವಿಶ್ವಾಸವನ್ನು ಹೆಚ್ಚಿಸಿದೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಮಾನತೆ ಸಾರುವ ಮಕ್ಕಳ ಚಿತ್ರ : ಸಾಹಿತಿ

ಸಮಾನತೆ ಸಾರುವ ಮಕ್ಕಳ ಚಿತ್ರ : ಸಾಹಿತಿ

ಯುವ ಮತದಾರರ ನೋಂದಣಿಗೆ ಕ್ರಮ ಕೈಗೊಳ್ಳಿ

ಯುವ ಮತದಾರರ ನೋಂದಣಿಗೆ ಕ್ರಮ ಕೈಗೊಳ್ಳಿ

ಹಳ್ಳಿ ರಾಜಕೀಯಕ್ಕೆ ಸಜ್ಜಾದ ದೊಡ್ಡಬಳ್ಳಾಪುರ ರಣಾಂಗಣ

ಹಳ್ಳಿ ರಾಜಕೀಯಕ್ಕೆ ಸಜ್ಜಾದ ದೊಡ್ಡಬಳ್ಳಾಪುರ ರಣಾಂಗಣ

ಏಡ್ಸ್‌- ಎಚ್‌ಐವಿ ಸೋಂಕಿತರಿಗೂ ಬದುಕುವ ಹಕ್ಕಿದೆ

ಏಡ್ಸ್‌- ಎಚ್‌ಐವಿ ಸೋಂಕಿತರಿಗೂ ಬದುಕುವ ಹಕ್ಕಿದೆ

ಸಹಕಾರ ಸಂಘಕ್ಕೆ 15 ಕೋಟಿ ವಹಿವಾಟು ಏರಿಕೆ ಗುರಿ

ಸಹಕಾರ ಸಂಘಕ್ಕೆ 15 ಕೋಟಿ ವಹಿವಾಟು ಏರಿಕೆ ಗುರಿ

MUST WATCH

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

udayavani youtube

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

ಹೊಸ ಸೇರ್ಪಡೆ

ಸಂಪುಟ‌ ವಿಸ್ತರಣೆ: ಬಹಿರಂಗವಾಗಿ ಮಾತನಾಡುವುದನ್ನು ಪಕ್ಷ‌ ಗಂಭೀರವಾಗಿ ಪರಿಗಣಿಸುತ್ತದೆ

ಸಂಪುಟ‌ ವಿಸ್ತರಣೆ: ಬಹಿರಂಗವಾಗಿ ಮಾತನಾಡುವುದನ್ನು ಪಕ್ಷ‌ ಗಂಭೀರವಾಗಿ ಪರಿಗಣಿಸುತ್ತದೆ

vivo

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿ 8 ಜನರ ವಿರುದ್ಧ ಸಾಕ್ಷಿ ನಾಶ ಪ್ರಕರಣ ದಾಖಲು

netflix

Netflix Stream Fest: ಡಿ. 5 ಮತ್ತು 6 ರಂದು ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ

15-best-apps,-games-of-2020-on-Apple-App-Store

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.