ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ
Team Udayavani, Dec 22, 2020, 1:20 PM IST
ದೊಡ್ಡಬಳ್ಳಾಪುರ: ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‌ನ ವತಿಯಿಂದ 47ನೇ ವರ್ಷದ ವಾರ್ಷಿಕ ಮಂಡಲ ಪೂಜಾಕಾರ್ಯಕ್ರಮಗಳು ಶ್ರದ್ಧಾ ಭಕ್ತಿ ಸಂಭ್ರಮದಿಂದ ನೆರವೇರಿದವು. ಮಂಡಲ ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ಶ್ರೀ ಗಣ ಹೋಮ ನಡೆಯಿತು.
ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಗಣೇಶ ಹಾಗೂ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಯ್ಯಪ್ಪ ವ್ರತಾಧಾರಿಗಳಿಂದ ಸಾಮೂಹಿಕ ಭಜನೆ ನಡೆಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್ ಹೊರತಂದಿರುವ 2021ನೇ ವರ್ಷದ ಕ್ಯಾಲೆಂಡರ್ ಅನ್ನು ಬೆಂಗಳೂರು ಉತ್ತರದ ಉಪವಿಭಾಗಾಧಿಕಾರಿ ರಂಗನಾಥ್ ಬಿಡುಗಡೆ ಮಾಡಿ, ನಮ್ಮ ಧಾರ್ಮಿಕ ಆಚರಣೆಗಳು ಮಾನವ ಸಂಬಂಧಗಳನ್ನು ಗಾಢಗೊಳಿಸುತ್ತವೆ ಎನ್ನುವುದಕ್ಕೆ ಅಯ್ಯಪ ³ಸ್ವಾಮಿ ವ್ರತಾಚರಣೆ ಹಾಗೂ ಪೂಜಾ ಕಾರ್ಯಕ್ರಮ ನಿದರ್ಶನ ಎಂದರು.
ಸಂಜೆ ಸಾಂಕೇತಿಕವಾಗಿ ನಡೆದ ಅಯ್ಯಪ್ಪ ಸ್ವಾಮಿ ಉತ್ಸವ ಈ ಬಾರಿ ಅಯ್ಯಪ್ಪಸ್ವಾಮಿ ದೇವಾಲಯದಿಂದ ಹೊರಟು, ಮಾರುತಿ ನಗರ,ಅಶ್ವತ್ಥಕಟ್ಟೆ, ಪೈ ಎಲೆಕ್ಟ್ರಾನಿಕ್ಸ್ ಪಕ್ಕದ ರಸ್ತೆಯಿಂದ ದೇವಾಲಯವನ್ನು ಪ್ರದಕ್ಷಿಣೆ ಹಾಕಿತು.
ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಅಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಅಧ್ಯಕ್ಷ ಟಿ.ಎಸ್. ಮಹದೇವಯ್ಯ, ಬಿ.ವಿ.ಬಸವರಾಜು, ನಿರ್ದೇಶಕರಾದ ಪಲಾವ್ ರಾಮಣ್ಣ, ಸೂರ್ಯನಾರಾಯಣ್ ಸಮಿತಿ ಸದಸ್ಯರು, ಭಕ್ತಾದಿಗಳು ಮಂಡಲ ಪೂಜೆಯಲ್ಲಿ ಭಾಗವಹಿಸಿದ್ದರು.
ಗೋಹತ್ಯೆ ಕಾಯ್ದೆ ಹಿಂಪಡೆಯಿರಿ :
ದೊಡ್ಡಬಳ್ಳಾಪುರ: ಗೋಹತ್ಯೆ ನಿಷೇಧಕಾಯ್ದೆ2020 ಅನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಬಿಎಸ್‌ಪಿ ವತಿಯಿಂದ ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಎಸ್‌ಪಿ ಮುಖಂಡ ಪುರುಷೋತ್ತಮ ಮಾತನಾಡಿ, ಬಿಜೆಪಿಸರ್ಕಾರದ ಜನವಿರೋಧಿ ನೀತಿಗಳ ಸಾಲಿಗೆ ಈಗ ಗೋಹತ್ಯೆ ನಿಷೇಧ ಕಾಯ್ದೆ ಸೇರ್ಪಡೆಯಾಗಿದೆ. ಬಹುಜನರ ಆಹಾರ ಪದ್ಧತಿ ಮೇಲೆ ಗೋಹತ್ಯೆ ನಿಷೇಧ ಕಾಯ್ದೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ರಾಜ್ಯ ಸರ್ಕಾರ ವಿಧಾನ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವ ಗೋಹತ್ಯೆ ಕಾಯ್ದೆ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಬಿಎಸ್‌ಪಿ ಮುಖಂಡರಾದ ಅಂಜಿನಪ್ಪ, ಎನ್.ಎಂ.ದಾಳಪ್ಪ, ಕೆ.ವಿ.ಮುನಿಯಪ್ಪ, ನರೇಂದ್ರಮೂರ್ತಿ, ಕಮಲಮ್ಮ, ಸುರೇಶ್, ಶೋಯೇಬ್, ರವಿ, ಗೋವಿಂದರಾಜು ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444