ರಾಷ್ಟ್ರೀಯ ಹೆದ್ದಾರಿಯಲ್ಲಿಲ್ಲ ಪಾದಚಾರಿಗಳಿಗೆ ಸುರಕ್ಷತೆ!


Team Udayavani, Apr 3, 2023, 2:56 PM IST

TDY-12

ದೇವನಹಳ್ಳಿ: ತಾಲೂಕಿನ ಜಿಲ್ಲಾಡಳಿತ ಭವನದ ಬಳಿಯ ಚಪ್ಪರಕಲ್ಲು ಸರ್ಕಲ್‌ ನಲ್ಲಿ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಚಪ್ಪರಕಲ್ಲು-ಕೊಯಿರ- ಕುಂದಾಣ ಭಾಗಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುತ್ತಿ ರುವುದರಿಂದ ಪಾದಚಾರಿಗಳಿಗೆ ಸುರಕ್ಷತೆಯೇ ಇಲ್ಲದಂತಾಗಿದ್ದು, ಜಂಕ್ಷನ್‌ನಲ್ಲಿ ವಾಹನಗಳು ವೇಗಮಿತಿ ರಹಿತವಾಗಿ ಸಂಚರಿಸುವುದರಿಂದ ಸಾಕಷ್ಟು ಅನಾಹುತಗಳಿಗೆ ಕಾರಣವಾಗುತ್ತಿದೆ.

ಜಿಲ್ಲಾಡಳಿತ ಭವನದ ಕೂಗಳತೆಯ ದೂರದಲ್ಲಿ ಚಪ್ಪರಕಲ್ಲು ಸರ್ಕಲ್‌ನಲ್ಲಿ ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಸಂಚರಿಸುವ ವಾಹನಗಳು ಮತ್ತು ಪಾದಚಾರಿಗಳು ಕೊಯಿರ ಕಡೆಗೆ ಹೋಗಲು ಹಾಗೂ ದೊಡ್ಡಬಳ್ಳಾಪುರ ಮಾರ್ಗವಾಗಿ ದೇವನಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಮತ್ತು ಪಾದಚಾರಿಗಳು ಕುಂದಾಣ ರಸ್ತೆ ಮಾರ್ಗಕ್ಕೆ ಸಂಚರಿಸಬೇಕಾದರೆ ಹರಸಾಹಸ ಪಡುವಂತಾಗಬೇಕು. ಜತೆಗೆ ಜಿಲ್ಲಾಡಳಿತ ಭವನಕ್ಕೆ ಕೆಲಸಗಳಿಗೆ ಹೋಗುವ ಸಾಕಷ್ಟು ಸಿಬ್ಬಂದಿಗಳಿಗೂ ಇದು ಅನ್ವಯಿಸುತ್ತಿದ್ದು, ರಸ್ತೆ ಸುರಕ್ಷತೆ ಇಲ್ಲದೆ ಸಾರ್ವಜನಿಕರು ಪರದಾಡುವ ದುಸ್ಥಿತಿಯನ್ನು ರಾಹೆಯವರು ತಂದೊಡ್ಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಾದ ಮಂಜುನಾಥ್‌, ಮುನಿರಾಜು, ಆಟೋ ಮಾಲಿಕರಾದ ವೆಂಕಟೇಶ್‌, ಚನ್ನಪ್ಪ, ಸುರೇಶ್‌, ಕೊಯಿರ ಮುರಳಿ, ಬೀರಸಂದ್ರ ಲಕ್ಷ್ಮಣ, ಆನಂದ್‌ಮೂರ್ತಿ, ಕಾಂತರಾಜು, ಲಿಂಗೇಗೌಡ, ಸುತ್ತಮುತ್ತಲಿನ ಗ್ರಾಮಸ್ಥರು, ಸಾರ್ವಜನಿಕರು ಇದ್ದರು.

ಸುತ್ತಮುತ್ತಲಿನ ಹಳ್ಳಿಗಳಿಗೆ ಕೇಂದ್ರಸ್ಥಾನ ಸರ್ಕಲ್‌: ಚಪ್ಪರಕಲ್ಲು ಸರ್ಕಲ್‌ ಸುತ್ತಮುತ್ತಲಿನ ನೂರಾರು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿರುವು ದರಿಂದ ಸರ್ಕಲ್‌ನಲ್ಲಿ ಅಂಡರ್‌ಪಾಸ್‌ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ಇದ್ದಕ್ಕಿ ದ್ದಂತೆ ಜೆಸಿಬಿ ಮೂಲಕ ಈ ಹಿಂದೆ ಸಂಚರಿಸುತ್ತಿದ್ದ ಡಿವೈಡರ್‌ ಅನ್ನು ಮಣ್ಣಿನಿಂದ ಮುಚ್ಚಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆ ಯಾಗುತ್ತಿದ್ದು, ಮೊನ್ನೆಯಷ್ಟೇ ದ್ವಿಚಕ್ರವಾಹನ ಸವಾರ ಮತ್ತು ಲಾರಿಗೆ ಡಿಕ್ಕಿಹೊಡೆದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯನ್ನು ದಾಟುವ ಸಂದರ್ಭದಲ್ಲಿ ಅಪಘಾತಗಳು ಆಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿರುವುದರಿಂದ ಕೂಡಲೇ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿಯವರು ಇಲ್ಲೊಂದು ಅಂಡರ್‌ಪಾಸ್‌ ನಿರ್ಮಿಸಿದರೆ ಹೆಚ್ಚಿನ ಅನಾಹುತ ಗಳು ತಪ್ಪಿಸಿದಂತಾಗುತ್ತದೆ ಎಂದು ವಾಹನ ಮಾಲೀಕರು ಮತ್ತು ಪ್ರಯಾಣಿಕರು ಆಗ್ರಹಿಸಿದ್ದಾರೆ.

ರಾಹೆ ಪಕ್ಕದಲ್ಲಿಯೇ ವಿಶ್ವನಾಥಪುರ ಕೆಪಿಎಸ್‌ ಶಾಲೆ ಇದ್ದು, ಸಾಕಷ್ಟು ವಿದ್ಯಾರ್ಥಿಗಳು, ಆಸ್ಪತ್ರೆಯೂ ಸಹ ಬರುವುದರಿಂದ ವೃದ್ಧರು, ರೋಗಿಗಳು ಹಾಗೂ ಸಾರ್ವಜನಿಕರಿಗೆ ರಸ್ತೆ ಕಂಟಕ ವಾಗುತ್ತಿದೆ. ಜಿಲ್ಲಾಡಳಿತ ಭವನ ಮುಂದೆಯೇ ಮೆಲ್ಸೇತುವೆ ಹಾದುಹೋಗುವುದರಿಂದ ವಾಹನ ಗಳು ವೇಗದಲ್ಲಿ ಸಂಚರಿಸುತ್ತವೆ. 100ಮೀಟರ್‌ ದೂರದಲ್ಲಿ ಅಂಡರ್‌ಪಾಸ್‌ ಕಲ್ಪಿಸಿಕೊಡಬೇಕು. ● ಶ್ರೀಧರ್‌ಗೌಡ, ಸ್ಥಳೀಯ ನಾಗರಿಕ, ಸೀಕಾಯನಹಳ್ಳಿ

ಜಿಲ್ಲಾಡಳಿತ ಭವನವಾಗಿರುವುದರಿಂದ ನಾಲ್ಕು ತಾಲೂಕಿನ ಜನರು ದಿನನಿತ್ಯ ಬಂದು ಹೋಗುತ್ತಿರುತ್ತಾರೆ. ಅವೈಜ್ಞಾನಿಕವಾಗಿ ಚಪ್ಪಕಲ್ಲು ಸರ್ಕಲ್‌ ಅನ್ನು ಮಾಡಿದ್ದು, ಯಾವುದೇ ಸಿಗ್ನಲ್‌ದೀಪವಾಗಲೀ ಸುರಕ್ಷತಾ ಫ‌ಲಕವಾಗಲೀ ಹಾಕಿಲ್ಲ. ● ಶಿವಾಜಿಗೌಡ, ಅಧ್ಯಕ್ಷರು, ಜೇಸಿಐ ಚಪ್ಪರಕಲ್ಲು ಚಂದನ ಘಟಕ

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.