
ಸಾರಿಗೆ ನೌಕರರ ಪ್ರತಿಭಟನೆಗೆ ಇತರೆ ಸಂಘಟನೆಗಳ ಬೆಂಬಲ
Team Udayavani, Apr 13, 2021, 3:38 PM IST

ನೆಲಮಂಗಲ: 6ನೇ ವೇತನ ಆಯೋಗದ ಶಿಫಾ ರಸು ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಲ ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸೋಮವಾರ ಕುಟುಂಬ ಸದಸ್ಯರು, ಕರವೇ, ಮತ್ತಿತರ ಸಂಘಟನೆಗಳುಕೈಜೋಡಿಸಿ, ತಾಲೂಕು ಕಚೇರಿ ಮುಂದೆ ತಟ್ಟೆ-ಲೋಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದವು.
ಪಟ್ಟಣದ ಮುಖ್ಯರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ತಮ್ಮ ಕುಟುಂಬಸಮೇತವಾಗಿ ಲಗ್ಗೆ ಯಿಟ್ಟ ಸಾರಿಗೆ ಸಿಬ್ಬಂದಿ ಸರ್ಕಾರ ಮತ್ತು ನಿಗಮದ ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರ ಕೂಗುವುದ ರೊಂದಿಗೆ ನಮ್ಮಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಬಳಿಕ ಸಾರಿಗೆ ಸಿಬ್ಬಂದಿ ತಾಲೂಕು ಕಚೇರಿವರೆಗೂ ಸಾಗಿ ತಹಸೀಲ್ದಾರ್ ಕೆ.ಮಂಜು ನಾಥ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶಿಫಾರಸಿನಂತೆ ವೇತನ ನೀಡಿ: ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನೂ ಸರ್ಕಾರಿ ನೌಕರರೆಂದು ಘೋಷಿಸುವುದರೊಂದಿಗೆ ತಮಗೂ ಎಲ್ಲಾಸೌಲಭ್ಯ ನೀಡಬೇಕು ಎಂದು ಕಳೆದ ಡಿ.20ರಂದು ಸಾರಿಗೆ ಸಚಿವರನ್ನುಒಳಗೊಂಡ ಸಂಧಾನ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಸಾರಿಗೆನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬೇಡಿಕೆ ಹೊರತುಪಡಿಸಿ, ಉಳಿದ 8 ಬೇಡಿಕೆ ಈಡೇರಿಸಲು ಮೂರುತಿಂಗಳ ಗಡುವು ನೀಡಲಾಗಿತ್ತು. ಆದರೂ, ಬೇಡಿಕೆಗಳಲೂ ಈಡೇರಿಲ್ಲ, ಈಗ ನಮಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನವನ್ನು ನಿಗದಿಪಡಿಸಬೇಕು, ಕಣ್ಣೋರೆಸುವ ಸರ್ಕಾರದ ತಂತ್ರಗಾರಿಕೆಗೆ ನಾವು ಬಗ್ಗುವುದಿಲ್ಲ ಎಂದು ಪ್ರತಿಭಟನಾನಿರತರು ಹೇಳಿದರು.
ಸಮಸ್ಯೆ ಬಗೆಹರಿಸಲು ಚಿಂತನೆ: ಮನವಿ ಸ್ವೀಕರಿ ಸಿದ ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಪ್ರಸ್ತುತ ಕೋವಿಡ್ ಸೋಂಕಿನಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತಮಸೇವಾ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸಾರಿಗೆ ಸಂಪರ್ಕ ಜನರನಿತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ಕೋವಿಡ್, ಯುಗಾದಿಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಸಮಸ್ಯೆ ಎದುರಾಗಬಾರದು,ತಾವುಗಳು ಕೆಲಸಕ್ಕೆ ಮುಂದಾಗಿ ಸರ್ಕಾರ ನಿಮ್ಮ ಸಮಸ್ಯೆ ಬಗೆ ಹರಿಸುವನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
ಕರವೇ (ಪ್ರವೀಣ್‌ಶೆಟ್ಟಿ ಬಣ) ರಾಜ್ಯ ಉಪಾಧ್ಯಕ್ಷಉಮೇಶ್‌ಗೌಡ, ಕಾಂಗ್ರೆಸ್ ಮುಖಂಡ ಮಿಲ್ಟ್ರಿ ಮೂರ್ತಿ, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾ ಧ್ಯಕ್ಷ ಬಿ.ಆರ್.ಭಾಸ್ಕರ್ ಪ್ರಸಾದ್, ಬೊಮ್ಮನಹಳ್ಳಿ ನಾರಾಯಣಸ್ವಾಮಿ ಇತರರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bannerghatta Park: ಬನೇರುಘಟ್ಟದಲ್ಲಿ ಕಿತ್ತಾಡಿಕೊಂಡು 15 ಜಿಂಕೆ ಸಾವನ್ನಪ್ಪಿರುವ ಶಂಕೆ

Saxophone; ಸತತ 23 ತಾಸು ಸ್ಯಾಕ್ಸೋಫೋನ್ ನುಡಿಸಿ ಗಿನ್ನೆಸ್ ದಾಖಲೆ ಬರೆದ ಗರ್ಭಿಣಿ

Ganesh Chaturthi: ದೊಡಬಳ್ಳಾಪುರ ಗಣೇಶೋತ್ಸವಕ್ಕೆ 8 ದಶಕಗಳ ಇತಿಹಾಸ

Crime: ರಸ್ತೆ ವಿಚಾರಕ್ಕೆ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

Arebommanahalli Village: ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷರ ಹೈಡ್ರಾಮಾ!
MUST WATCH
ಹೊಸ ಸೇರ್ಪಡೆ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್