ಜನರ ಸಹ ಭಾಗಿತ್ವದಲ್ಲಿ ಜಲ ಆಂದೋಲನ

Team Udayavani, May 14, 2019, 3:00 AM IST

ದೇವನಹಳ್ಳಿ: ಜನರ ಸಹ ಭಾಗಿತ್ವದಲ್ಲಿ ಜಲ ಆಂದೋಲನವೇ ನಡೆಯುತ್ತಿದೆ ಜನರ ಬದುಕು ಹಸನಾಗಲಿದೆ ಎಂದು ಜಿಲ್ಲಾಧಿಕಾರಿ ಸಿ ಎಸ್‌ ಕರೀಗೌಡ ಹೇಳಿದರು.

ತಾಲೂಕಿನ ಕೊಯಿರಾ ಗ್ರಾಮದಲ್ಲಿ ಸಾರ್ವಜನಿಕರ ಸಹಕಾರದಿಂದ 19.05 ಎಕರೆ ಪ್ರದೇಶದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಮಾತನಾಡಿ, ಕೆರೆಯ ನೀರು ಮತ್ತು ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿತ್ತು, ಆದರೆ ಈಗ ಜಿಲ್ಲೆಯಲ್ಲಿ ಸ್ಥಾಪನೆ ಆಗಿರುವ ಕಂಪನಿಗಳು, ಕೈಗಾರಿಗಳಿಗೂ ಸಹ ಎಲ್ಲಾ ರೀತಿಯ ಬಳಕೆಗೆ ಅಂರ್ತ ಜಲ ನೀರನ್ನೇ ಅವಲಂಭಿಸಿದೆ ಎಂದರು.

ಮಳೆ ನೀರು ಸಂಗ್ರಹಕ್ಕೆ ನೋಟಿಸ್‌: ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆ ಮಾಡಲು ಜಿಲ್ಲೆಯಲ್ಲಿನ ಎಲ್ಲಾ ಕೈಗಾರಿಕೆಗಳು , ವಾಣಿಜ್ಯ ಪ್ರದೇಶಗಳು ಸೇರಿದಂತ ಮನೆಗಳು ಸಹ ಮಳೆ ನೀರು ಸಂಗ್ರಹ ಮಾಡುವಂತೆ ನೋಟಿಸ್‌ ಮಾಡಲಾಗಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದಲ್ಲಿ ಕುಟುಂಬದ ಅಗತ್ಯಕ್ಕೆ ತಕ್ಕಂತೆ ಮಳೆ ನೀರನ್ನು ಸಂಗ್ರಹಿಸಿ ಇಡೀ ವರ್ಷ ಬಳಸುವ ನಿವೇಶನ ವಿದೆ. ಇದರಿಂದ ಆರೋಗ್ಯ ಸುಧಾರಣೆ ಜೊತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹರಿಯಲಿದೆ. ಜಿಲ್ಲೆಯಲ್ಲಿ 25 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದರು.

ನೀರಿನ ಮೂಲಗಳ ಹೆಚ್ಚಿಸಿ: ಕೊಯಿರಾ ಗ್ರಾಮದಲ್ಲಿರುವ 19.05 ಎಕರೆ ಪ್ರದೇಶದಲ್ಲಿ ಕೆರೆ ಯನ್ನು ಸರ್ವೇ ಹಾಗೂ ಸ್ಮಶಾನವನ್ನು ಸಹ ಸರ್ವೇ ಕಾರ್ಯ ಮಾಡಿಸಲಾಗುವುದು. ನೀರಿನ ಮೂಲಗಳು ಹೆಚ್ಚಿಸಲು, ಮನುಷ್ಯರಿಗೆ, ರೈತಾಪಿ ವರ್ಗಕ್ಕೆ ಪ್ರಾಣಿ ಸಂಕುಲಗಳಿಗೆ ನೀರು ಉಪಯುಕ್ತವಾಗಲು ಅನುಕೂಲವಾಗುತ್ತದೆ.

ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರೇ ಮುಂದೆ ಬಂದಿದ್ದರಿಂದ ಸಾರ್ವಜನಿಕರ ಸಹಕಾರ ಪಡೆದು ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದೇವೆ. ಸಾರ್ವಜನಿಕ ಸಹಕಾರ ಇರುವುದರಿಂದ ಹಲವಾರು ವರ್ಷಗಳಿಂದ ಹೂಳೆತ್ತದೇ ಇರುವ ಕೆರೆಗಳನ್ನು ಹೂಳೆತ್ತುವಂತೆ ಆಗಿದೆ.

ಸಹಕಾರಕ್ಕೆ ಶ್ಲಾಘನೀಯ: ಪ್ರತಿ ದಿನ ಜೆಸಿಬಿ, ಲಾರಿ, ಹಿಟಾಚಿ, ಟ್ರ್ಯಾಕ್ಟರ್‌ ನಿರ್ವಹಿಸಿದೆ ಹಾಗೂ ದಾನಿಗಳು ಎಷ್ಟು ಹಣ ನೀಡಿದ್ದಾರೆ ಮತ್ತು ಎಷ್ಟು ಖರ್ಚಾಗಿದೆ ಎಂಬ ಲೆಕ್ಕ ಪುಸ್ತಕವನ್ನು ಇಟ್ಟು ಅದರ ನಿರ್ವಹಣೆ ಮಾಡುತ್ತಿದ್ದೇವೆ. ಕೆರೆ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಿದ್ದಾರೆ. ಜನಪ್ರತಿನಿಧಿಗಳ ಸಹಕಾರದಿಂದ ಲಾರಿ, ಜೆಸಿಬಿ ತರಿಸಿ ಸರ್ಕಾರದ ಒಂದು ರೂ ಹಣವಿಲ್ಲದೆ. ಜನರೇ ಸ್ವಂತ ಖರ್ಚಿನಲ್ಲಿ ಕೆರೆ ಹೂಳೆತ್ತುವ ಕಾರ್ಯ ಮಾಡುವ ಸಹಕಾರ ನೀಡುತ್ತಿದ್ದಾರೆ ಎಂದ‌ು ಶ್ಲಾಘಿಸಿದರು.

ಹೊಳೆತ್ತುವ ಕೆಲಸ ಅಷ್ಟು ಸುಲಭದಲ್ಲ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ್‌ ಸಫೇಟ್‌ ಮಾತನಾಡಿ, ಗ್ರಾಮಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಕೆರೆ ಹೂಳೆತ್ತುವ ಕಾರ್ಯ ಮಾಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಮಳೆಯಿಲ್ಲದೆ ಬರಗಾಲದ ಸ್ಥಿತಿಯಲ್ಲಿ ನೀರಿಗೆ ಪರದಾಡುವ ಸ್ಥಿತಿ ಇದೆ.

ಸರ್ಕಾರದಿಂದ ಬಿಡಿಗಾಸು ನಿರೀಕ್ಷೆ ಮಾಡದೆ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಎತ್ತಿಸುವುದು ಅಷ್ಟು ಸುಲಭ‌ವಲ್ಲ. ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ಸಹಕಾರದೊಂದಿಗೆ ನೆರವು ಅತಿ ಮುಖ್ಯ ವಾಗಿದೆ ಜಿಲ್ಲಾಧಿಕಾರಿಗಳು ಕೆರೆ ಹೂಳೆತ್ತುವ ಕಾರ್ಯ ಮಾಡಿ ಸಾರ್ವಜನಿಕರ ಅನುಲಕೂಲ ವಾಗುವಂತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗೆ ಮನವಿ: ಗ್ರಾಮದ ಮುಖಂಡ ಚಿಕ್ಕೇಗೌಡ ಮಾತನಾಡಿ, ಸರ್ವೇ ನಂ 67/ಪಿ 3 ನಲ್ಲಿ 4.33 ಗುಂಟೆ ಸ್ಮಶಾನ ಜಾಗವಿದ್ದು ಆ ಜಾಗ ಒತ್ತುವರಿ ಯಾಗಿದೆ. ಸರ್ಕಾರ ಈ ಕೂಡಲೇ ಸರ್ವೇ ಕಾರ್ಯ ಮಾಡಿ ಒತ್ತುವರಿ ಯಾಗಿರುವ ಸ್ಮಶಾನ ಜಾಗವನ್ನು ತೆರವು ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಡಿವೈಎಸ್‌ಪಿ ಮೋಹನ್‌ ಕುಮಾರ್‌, ವೃತ್ತ ನಿರೀಕ್ಷಕ ಪ್ರಕಾಶ್‌, ವಿಶ್ವನಾಥ ಪುರ ಸಬ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌, ಕಾರ್ಮಿಕ ಇಲಾಖೆ ನಿರೀಕ್ಷಕ ರವಿಕುಮಾರ್‌, ಹಾಗೂ ಗ್ರಾಮಸ್ಥರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ