
ಶಾಂತಿಸೇನ ಮುನಿ ಮಹಾರಾಜರೀಗ “ಆಚಾರ್ಯ’
ಶಾಂತಿಸೇನ ಮುನಿ ಮಹಾರಾಜರಿಗೆ ಆಚಾರ್ಯ ಪದವಿ ಪದಾರೋಹಣ ಮಾಡಲಾಯಿತು.
Team Udayavani, Nov 22, 2021, 3:20 PM IST

ಕಾಗವಾಡ: ಶೇಡಬಾಳದ ಆಚಾರ್ಯ ಶಾಂತಿಸಾಗರ ಜೈನ ಅನಾಥಾಶ್ರಮದಲ್ಲಿ ಆಚಾರ್ಯ ಪದವಿ ಪದಾರೋಹಣ ಕಾರ್ಯಕ್ರಮ ನಾಂದಣಿ ಜೈನಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ ಹಾಗೂ ಧರ್ಮಸೇನ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ರವಿವಾರ ಜರುಗಿತು.
ಬೆಳಗ್ಗೆ ಧರ್ಮ ಧ್ವಜಾರೋಹಣ, ಭಗವಾನ್ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಮಹಾ ಶಾಂತಿದಾರ ಕಾರ್ಯಕ್ರಮ ನೆರವೇರಿತು. ಗಣಧರ ವಲಯ ಆರಾಧನಾ ಪೂಜೆ, ಮಧ್ಯಾಹ್ನ ಆಚಾರ್ಯ ಪದವಿ ಪದಾರೋಹಣ ಕಾರ್ಯಕ್ರಮ, ಪ್ರತಿಷ್ಠಾಚಾರಿಗಳಿಂದ ಸಂಸ್ಕಾರ ಪೂಜೆ ನೆರವೇರಿತು. ಆಚಾರ್ಯರಾದ ಧರ್ಮಸೇನ ಮುನಿ ಮಹಾರಾಜರು, ಆಚಾರ್ಯ ನಿಶ್ಚಯಸಾಗರ್, ಆಚಾರ್ಯ ಸುರ್ಯಸಾಗರ್, ಜೀನಸೇನ ಭಟ್ಟಾರಕ, ಭಾನುಕೀರ್ತಿ ಭಟ್ಟಾರಕ, ಸೋಮತಿಮತಿ ಮಾತಾಜಿ, ಅಜಿತ್ ಮತಿ ಮಾತಾಜಿ, ಜಿನಮತಿ ಮಾತಾಜಿ, ಮುನಿ ಸಂಘದ ಮುನಿಗಳ ಸಾನ್ನಿಧ್ಯದಲ್ಲಿ ಶಾಂತಿಸೇನ ಮುನಿ ಮಹಾರಾಜರಿಗೆ ಆಚಾರ್ಯ ಪದವಿ ಪದಾರೋಹಣ ಮಾಡಲಾಯಿತು.
ಪ್ರತಿಷ್ಠಾಚಾರ್ಯ ಆನಂದ ಉಪಾಧ್ಯೆ ಮಾಹಿತಿ ನೀಡಿ, ದೇವಸೇನ ಮುನಿ ಮಹಾರಾಜರು ಸಲ್ಲೇಖನ ಪೂರ್ವ ಮರಣ ಹೊಂದಿದರು. ಮುನಿ ಸಂಘದ ಮುನಿಗಳಾದ ಶಾಂತಿಸೇನ ಮುನಿ ಮಹಾರಾಜರಿಗೆ ಆಚಾರ್ಯ ಪದವಿ ಪದಾರೋಹಣ ನೀಡುವ ಕಾರ್ಯಕ್ರಮ ನೆರವೇರಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು ಎಂದರು.
ಪೂಜಾವಿಧಿ ಕಾರ್ಯ ಕ್ರಮದ ಯಜಮಾನ ಪದ ಮುಂಬೈ ಉದ್ಯಮಿ ಸುದರ್ಶನ ದೋಟಿಯಾ ವಹಿಸಿ ಸುವರ್ಣ ಕಲಶ ಅರ್ಪಣ ಮಾಡಿದರು. ಆಚಾರ್ಯ ವಿಧಿ ಸ್ಥಾಪನೆ ವಿಜಯಪುರದ ಉದ್ಯಮಿ ಅಜಿತ್ ಕುಚನೂರೆ ನೆರವೇರಿಸಿದರು. ಪಿಂಚಿ ಪ್ರಧಾನ ಹೊರನಾಡು ಬಂಧುಗಳು ನೆರವೇರಿಸಿದರು.
ಟಾಪ್ ನ್ಯೂಸ್
