
“ಬಂಟ್ವಾಳದ ನೀರಾ ಘಟಕ ಶೀಘ್ರ ಪುನರಾರಂಭ’:ಸಚಿವ ಮುನಿರತ್ನ
Team Udayavani, Dec 24, 2022, 12:02 AM IST

ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ತುಂಬೆಯಲ್ಲಿ ತೋಟಗಾರಿಕೆ ಇಲಾಖೆಯ ನೀರಾ ಘಟಕವನ್ನು ಪುನಾರಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.
ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಹರೀಶ್ ಕುಮಾರ್ ಆವರ ಪ್ರಶ್ನೆಗೆ ಉತ್ತರಿಸಿದ ಅವರು, ತುಂಬೆ ನೀರಾ ಘಟಕ ಪುನಃಶ್ಚೇತನಗೊಳಿಸಲು ಕೇರಳದ ಪಾಲಾಕ್ಕಾಡ್ ತೆಂಗು ಉತ್ಪಾದಕ ಕಂಪೆನಿ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರ ಉತ್ಪನ್ನ ಮಾರಾಟದಲ್ಲಿ ತೊಂದರೆಯಾಗಿ ನೀರಾ ಉತ್ಪಾದನೆ ನಿಂತಿದೆ. ಇದೀತ ರೈತ ಉತ್ಪಾದಕ ಕೇಂದ್ರಗಳಿಗೆ ಇದನ್ನು ವಹಿಸಿಕೊಡಲು ಚಿಂತಿಸಲಾಗಿದೆ. ಇದಕ್ಕೆ ಡಿಪಿಆರ್ ಸಿದ್ದಪಡಿಸುತ್ತಿದ್ದು, ಬರುವ ಮಂಗಳವಾರ ಈ ಕುರಿತು ಸಭೆ ನಡೆಸಿ ಇದನ್ನು ಮತ್ತೆ ಪುನರಾಂಭಿಸಲಾಗುವುದು ಎಂದು ಭರವಸೆ ನೀಡಿದರು.
“ಭಾಗ್ಯಲಕ್ಷ್ಮೀ ಯೋಜನೆ ವಿಳಂಬವಾಗದು’
ಬೆಳಗಾವಿ: ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ವಿಳಂಬವಿಲ್ಲದೆ ಸೌಲಭ್ಯ ನೀಡಲಾಗುತ್ತಿದೆ. ಬಂಟ್ವಾಳದಲ್ಲಿ 561 ಫಲಾನುಭವಿಗಳಿಗೆ ಸಿಗದೇ ಇರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಬಿಜೆಪಿಯ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾಗ್ಯಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳಿಗೆ ವಿಳಂಬ ಇಲ್ಲದೆ ಸೌಲಭ್ಯ ಸಿಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಾಗಿದೆ. 2020-21, 2021-22ನೇ ಸಾಲಿನಿಂದ 561 ಮಂದಿಗೆ ಸೌಲಭ್ಯ ಸಿಗದೆ ಇರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
“ಸುರತ್ಕಲ್ ಮಾರುಕಟ್ಟೆ ಕಾಮಗಾರಿ ಶೀಘ್ರ’
ಬೆಳಗಾವಿ: ಸುರತ್ಕಲ್ ಮಾರುಕಟ್ಟೆಯ ಕಾಮಗಾರಿಗೆ 82 ಕೋ.ರೂ. ಅನುಮೋದನೆ ನೀಡಲಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಬಿಜೆಪಿಯ ಡಾ| ಭರತ್ ಶೆಟ್ಟಿಯವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 6 ಮಹಡಿಯ ಸಂಕೀರ್ಣ ಇದಾಗಿದ್ದು, 3.5 ಎಕರೆ ಜಾಗದಲ್ಲಿ ನಿರ್ಮಾಣವಾಗಲಿದೆ. ಜಾಗದ ಅಲಭ್ಯತೆ ಹಾಗೂ ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಕೂಡಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ನಡೆಸಲಾಗುವುದು ಎಂದರು. 2018ರಲ್ಲಿ ಕಾರ್ಯಾದೇಶವಾಗಿದ್ದರೂ, ಮಾರುಕಟ್ಟೆ ಸಂಕೀರ್ಣದ ಕಾಮಗಾರಿ ಶುರುವಾಗಿಲ್ಲ. ಯಾವಾಗ ಕಾಮಗಾರಿ ಶುರುವಾಗಲಿದೆ ಎಂದು ಡಾ| ಭರತ್ ಶೆಟ್ಟಿ ಪ್ರಶ್ನಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karwar ನೌಕಾನೆಲೆ :ಯುದ್ಧ ನೌಕೆಯ ರನ್ ವೇನಲ್ಲಿ ಯುದ್ಧ ವಿಮಾನ ಸಾಮರ್ಥ್ಯ ಪ್ರದರ್ಶನ

Tourism ಬೆಳವಣಿಗೆಗೆ ವಿಶೇಷ ಒತ್ತು:ಸಚಿವ ಎಚ್.ಕೆ.ಪಾಟೀಲ್

CM ಗರಂ; ಬಂದಿರೋರು ಹತ್ತತ್ತು ವೋಟ್ ಹಾಕ್ಸಿದ್ರೆ ನಿಮ್ ಮಂಜಣ್ಣ ಮಂತ್ರಿಯಾಗ್ತಿದ್ದ

Congress ಸರಕಾರದಿಂದ ಗುತ್ತಿಗೆದಾರರಿಗೆ LOC ಕೊಡಲು 5% ಫಿಕ್ಸ್!! : ಹೆಚ್ ಡಿಕೆ ಆರೋಪ

Siddaramaiah ಅವರಿಗೆ ರುದ್ರಾಕ್ಷಿ ಮಾಲೆ ಹಾಕಿ ಆಶೀರ್ವದಿಸಿದ ಸುತ್ತೂರು ಶ್ರೀಗಳು