Udayavni Special

ಎಸ್‌ಎಪಿ ಕಾನೂನು ಬಲಪಡಿಸಲು ಆಗ್ರಹ

•ಹಲ್ಲಿಲ್ಲದ ಹಾವಿನಂತಾದ ಕಾನೂನು: ಕೋಡಿಹಳ್ಳಿ ಟೀಕೆ•ಕಂಪನಿಗಳಿಗೆ ಮಾತ್ರ ಲಾಭದಾಯಕ ಬೆಳೆ ವಿಮೆ

Team Udayavani, Jul 31, 2019, 11:49 AM IST

bg-tdy-2

ಗೋಕಾಕ: ನಗರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು.

ಗೋಕಾಕ: ಜಗದೀಶ ಶೆಟ್ಟರ ಅವರು ರಾಜ್ಯದ ಮುಖ್ಯಮಂತ್ರಿಗಳಿದ್ದಾಗ ರೈತರ ಹಿತಕ್ಕಾಗಿ ಜಾರಿಗೊಳಿಸಿದ್ದ ಎಸ್‌ಎಪಿ ಕಾನೂನಿಗೆ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ಶಕ್ತಿ ತುಂಬಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಹಲ್ಲಿಲ್ಲದ ಹಾವಿನಂತಾಗಿರುವ ಎಸ್‌ಎಪಿ ಕಾನೂನಿಗೆ ಹೆಚ್ಚಿನ ಅಧಿಕಾರ ನೀಡಿ ಸಬಲಗೊಳಿಸಬೇಕೆಂದು ಹೇಳಿದರು.

ಕೇಂದ್ರ ಸರಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಿದಾಗ ಅದು ರೈತರಿಗೆ ಹಾನಿ ಮಾಡುತ್ತಿದ್ದರೆ ಎಸ್‌ಎಪಿ ಪ್ರಕಾರ ಅದನ್ನು ಸರಿದೂಗಿಸಲು ಸಾಧ್ಯ. ಸರಕಾರಕ್ಕೆ ರೈತರ ಬೆಳೆಗಳ ಸಂಬಂಧಿಸಿದಂತೆ ವೈಜ್ಞಾನಿಕ ಮಾನದಂಡವೇ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿನ ಇಳುವರಿ 12 ನೀಡಿದರೂ ಕಡಿಮೆ ಬೆಲೆ ನೀಡಲಾಗುತ್ತಿದೆ. ಇಳುವರಿ ಪ್ರಕಾರ ಕಬ್ಬಿಗೆ ಯೋಗ್ಯ ನೀಡುತ್ತಲೇ ಇಲ್ಲ. ಜಿಲ್ಲೆಯ ಕೆಲ ಸಕ್ಕರೆ ಕಾರಖಾನೆಗಳು ರೈತರ ಬಿಲ್ ಬಾಕಿ ಉಳಿದಿದ್ದರೂ ಸರಕಾರದ ವರದಿಯಲ್ಲಿ ಎಲ್ಲ ಸಕ್ಕರೆ ಕಾರಖಾನೆಗಳು ರೈತರ ಬಿಲ್ ಬಾಕಿ ಇಲ್ಲವೆಂದು ಹೇಳುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಅಧಿಕಾರಿ ವರ್ಗ ಹಾಗೂ ಉದ್ಯೋಗಪತಿಗಳು ಒಂದಾಗಿ ರೈತರನ್ನು ವಂಚಿಸುತ್ತಿದ್ದಾರೆ ಎಂದೂ ದೂರಿದರು.

ಮಹದಾಯಿ ಯೋಜನೆ ಕುರಿತು ಮಾತನಾಡಿದ ಅವರು, ಮಹದಾಯಿ ಯೋಜನೆ ಬಗ್ಗೆ ನ್ಯಾಯ ಮಂಡಳಿ ತೀರ್ಪು ನೀಡಿದ್ದು ರಾಜ್ಯದ ಪಾಲಿನ ನೀರಿನ ಬಳಕೆಗಾಗಿ ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ನಂತರ ಮೇಲ್ಮನವಿ ಸಲ್ಲಿಸಬೇಕಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ಸತತ ಬರಗಾಲ ಬಿದ್ದರೂ ಬೆಳೆ ವಿಮೆ ಯೋಜನೆಯಿಂದ ರೈತರಿಗೆ ಏನೂ ಉಪಯೋಗವಿಲ್ಲ. ಅದು ವಿಮಾ ಕಂಪನಿಗಳಿಗೆ ಮಾತ್ರ ಲಾಭದಾಯಕ ಎಂದು ಹೇಳಿದ ಕೋಡಿಹಳ್ಳಿ, ಪ್ರಸ್ತುತ ರಾಜ್ಯ ರಾಜಕಾರಣದ ಬಗ್ಗೆ ಉತ್ತರಿಸಿ, ಇಡೀ ದೇಶವೇ ಕರ್ನಾಟಕದ ಬಗ್ಗೆ ಹೇಸಿಗೆ ಪಡುವಂತಾಗಿದ್ದು, ಇಂಥ ಹೀನ ರಾಜಕೀಯ ನಡೆಯಬಾರದು ಎಂದು ಉತ್ತರಿಸಿದರು.

ರೈತರು ಹನಿ ನೀರಾವರಿ ಕೈಗೊಳ್ಳುವ ಜೊತೆಗೆ ಬರಿಯ ಕಬ್ಬು ಬೆಳೆಯದೇ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಪ್ರೇರೇಪಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಶಿ ಗದಾಡಿ, ಗಣಪತಿ ಇಳಿಗೇರ, ಮಂಜುನಾಥ ಪೂಜೇರಿ, ಮುತ್ತೆಪ್ಪ ಬಾಗನ್ನವರ, ಅಬ್ಬಣ್ಣಿ ಶಿವಪ್ಪ, ಭಕ್ತರಹಳ್ಳಿ ಭೈರೇಗೌಡ, ಗೋಪಾಲ ಕುಕನೂರ, ಭರಮು ಖೆಮಲಾಪೂರೆ, ಇರ್ಫಾನ್‌ ಜಮಾದಾರ ಇದ್ದರು.

ಕಬ್ಬು ಬಿಲ್ ಬಾಕಿ: ವಿಚಾರಣೆ ಮುಂದೂಡಿಕೆ:

 ಜು. 31 ರಂದು ನಿಗದಿ ಪಡಿಸಿದ ಹಿಂದಿನ ವರ್ಷದ ಕಬ್ಬು ಬಾಕಿ ಪಾವತಿ ಮಾಡದಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಬ್ಬು ಬೆಳೆಗಾರರು ಸಲ್ಲಿಸಿರುವ ಅರ್ಜಿಗಳ ಶಾಸನ ಬದ್ಧ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕ ಕೆ.ಜಿ. ಶಾಂತರಾಮ್‌ ತಿಳಿಸಿದ್ದಾರೆ. ಜೂ.25 ರಂದು ಪ್ರಥಮ ಶಾಸನಬದ್ಧ ವಿಚಾರಣೆಯನ್ನು ನಡೆಸಲಾಗಿದೆ. ನಂತರದ ವಿಚಾರಣೆಯನ್ನು ಜು. 31 ರಂದು ನಿಗದಿಗೊಳಿಸಲಾಗಿತ್ತು. ಆದರೆ ಕರ್ನಾಟಕ ವಿಧಾನ ಮಂಡಲದ ಅಧಿವೇಶನ ನಡೆದಿರುವುದರಿಂದ ಜು.31 ರಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಲಾಗಿದ್ದು, ಮುಂದಿನ ವಿಚಾರಣೆ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಸಕ್ಕರೆ ನಿರ್ದೇಶಕರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

10-18

ಸಾಂತರಸರ ಕಾಲದ ವೀರಗಲ್ಲು ಪತ್ತೆ

auto

ವಾಹನ ತಪಾಸಣೆ ವೇಳೆ ಕಾನ್ಸ್‌ಟೇಬಲ್‌ ಸಮೇತ ಆಟೋ ಚಾಲಕ ಎಸ್ಕೇಪ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

Lockdown rules Breaked by  peaple of Belagavi, 679 Bikes are seazed by Police

ಕೋವಿಡ್ 19 : ಲಾಕ್ ಡೌನ್ ಉಲ್ಲಂಘಿಸಿದ 679 ಬೈಕ್ ಸೀಜ್

yhtyhhfghg

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕನ ಬೈಕ್ ಸೀಜ್

ತಮಿಳುನಾಡು ಮಾದರಿಯಲ್ಲಿ ಜನರಿಗೆ ಪರಿಹಾರ ನೀಡಿ: ಸತೀಶ್ ಜಾರಕಿಹೊಳಿ

ತಮಿಳುನಾಡು ಮಾದರಿಯಲ್ಲಿ ಜನರಿಗೆ ಪರಿಹಾರ ನೀಡಿ: ಸತೀಶ್ ಜಾರಕಿಹೊಳಿ

ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಸವಾರರಿಗೆ ಪೊಲೀಸರ ಲಾಠಿ ರುಚಿ

ಅನಗತ್ಯವಾಗಿ ರಸ್ತೆಗಿಳಿದ ಬೈಕ್ ಸವಾರರಿಗೆ ಪೊಲೀಸರ ಲಾಠಿ ರುಚಿ

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

10-20

ಅನಗತ್ಯವಾಗಿ ಓಡಾಡಿದವರಿಗೆ ಪೊಲೀಸರಿಂದ ಲಾಠಿ ಬಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.