ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು
Team Udayavani, Jan 2, 2021, 1:59 PM IST
ಬೆಳಗಾವಿ: ಬಿಜೆಪಿಯ ಮೂವರು ಸಚಿವರಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಕಮಲಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾಂಗ್ರೆಸ್ ಪಕ್ಷದ ಚಿಕ್ಕೋಡಿಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಚಿಕ್ಕೋಡಿ,ಅಥಣಿ ಸೇರಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 218 ಗ್ರಾಪಂಗಳಿದ್ದು, ಅವುಗಳಲ್ಲಿ ಕಾಂಗ್ರೆಸ್113 ಪಂಚಾಯಿತಿಯಲ್ಲಿ ಬಹುಮತಪಡೆದರೆ, ಬಿಜೆಪಿ 79 ಗ್ರಾಪಂಗಳಲ್ಲಿ ಅಧಿಕಾರ ಪಡೆದಿದೆ. ಇನ್ನೂ 26 ಗ್ರಾಪಂಗಳಲ್ಲಿ ತಟಸ್ಥರುಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ . ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 35 ಗ್ರಾಪಂನಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎಂದು ಹೇಳಿದರು.
ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗ್ರಾಪಂಗಳಲ್ಲಿ, ಬಿಜೆಪಿ ಏಳರಲ್ಲಿ ಹಾಗೂಐದರಲ್ಲಿ ತಟಸ್ಥರು ಬಹುಮತ ಪಡೆದಿದ್ದಾರೆ.ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್ 18ಹಾಗೂ ಬಿಜೆಪಿ ಏಳರಲ್ಲಿ ಬಹುಮತ ಪಡೆದಿದೆ. ಅಥಣಿಯಲ್ಲಿ ಕಾಂಗ್ರೆಸ್ 11 ರಲ್ಲಿ ಬಿಜೆಪಿ12 ರಲ್ಲಿ ಹಾಗೂ ತಟಸ್ಥರು 7 ಗ್ರಾಪಂ ಗಳಲ್ಲಿಬಹುಮತ ಪಡೆದಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಆರು ಗ್ರಾಪಂದಲ್ಲಿ ಮತ್ತು ಬಿಜೆಪಿ 14ರಲ್ಲಿ ಬಹುಮತ ಗಳಿಸಿವೆ. ರಾಯಬಾಗದಲ್ಲಿಕಾಂಗ್ರೆಸ್ ಮತ್ತು ಬಿಜೆಪಿ ತಲಾ ಎಂಟರಲ್ಲಿಬಹುಮತ ಪಡೆದಿದ್ದರೆ ತಟಸ್ಥರು 10 ರಲ್ಲಿಹೆಚ್ಚಿನ ಸ್ಥಾನ ಗಳಿಸಿದ್ದಾರೆ. ಕುಡಚಿಯಲ್ಲಿಕಾಂಗ್ರೆಸ್ 11 ಗ್ರಾಪಂನಲ್ಲಿ ಮತ್ತು ಬಿಜೆಪಿ ಏಳರಲ್ಲಿ ಅಧಿಕಾರ ಹಿಡಿಯಲಿದೆ. ಮೂರು ಗ್ರಾಪಂದಲ್ಲಿ ತಟಸ್ಥರು ಮೇಲುಗೈ ಸಾಧಿಸಿದ್ದಾರೆ. ಹುಕ್ಕೇರಿಯಲ್ಲಿ ಕಾಂಗ್ರೆಸ್ 10 ರಲ್ಲಿ ಅಧಿಕಾರಹಿಡಿಯಲಿದ್ದರೆ ಬಿಜೆಪಿ 23 ಕಡೆ ಬಹುಮತಗಳಿಸಿದೆ. ಯಮಕನಮರಡಿಯಲ್ಲಿ ಎಲ್ಲ 35ಗ್ರಾ ಪಂಗಳು ಕಾಂಗ್ರೆಸ್ ಪಾಲಾಗಿವೆ ಎಂದು ಚಿಂಗಳೆ ಮಾಹಿತಿ ನೀಡಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 3837 ಅಭ್ಯರ್ಥಿಗಳು ಗ್ರಾಪಂಗೆಸ್ಪರ್ಧಿಸಿದ್ದರು. ಈ ಪೈಕಿ ಕಾಂಗ್ರೆಸ್ 1889ಬಿಜೆಪಿ 1738, ಪಕ್ಷೇತರ 210 ಜನರು ಆಯ್ಕೆಗೊಂಡಿದ್ದಾರೆ ಎಂದು ಚಿಂಗಳೆ ಹೇಳಿದರು.ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿಬೆಳಗಾವಿ ಗ್ರಾಮೀಣ ಕ್ಷೇತ್ರದ 44ಗ್ರಾಪಂಗಳಲ್ಲಿ 33 ಗ್ರಾಪಂ. ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಖಾನಾಪುರದಲ್ಲಿ 51 ಗ್ರಾ.ಪಂ ಪೈಕಿ 26 ಪಂಚಾಯಿತಿಯಲ್ಲಿ ಕಾಂಗ್ರೆಸ್‌ಬಹುಮತ ಪಡೆದುಕೊಂಡಿದೆ. ಕಿತ್ತೂರುವಿಧಾನಸಭಾ ಕ್ಷೇತ್ರದಲ್ಲಿ 32 ಪಂಚಾಯಿತಿಗಳಪೈಕಿ 17 ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದಿದ್ದಾರೆ.
ಬೈಲಹೊಂಗಲ ಕ್ಷೇತ್ರದ 27 ಗ್ರಾಪಂ ಪೈಕಿ 15 ಪಂಚಾಯಿತಿ ಕಾಂಗ್ರೆಸ್ ಪಾಲಾಗಿವೆ. ಸವದತ್ತಿ ವಿಧಾನಸಭಾ ಕ್ಷೇತ್ರದ 28 ಗ್ರಾಪಂ ಪೈಕಿ 15ಪಂಚಾಯಿತಿಗಳು ಕಾಂಗ್ರೆಸ್ ತೆಕ್ಕೆಗೆ ಸೇರಿವೆ.ಮೂರು ಗ್ರಾಪಂಗಳಲ್ಲಿ ಸಮಾನ ಸ್ಥಿತಿ ಇದೆಎಂದು ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷವಿನಯ ನಾವಲಗಟ್ಟಿ ಮಾಹಿತಿ ನೀಡಿದರು. ರಾಮದುರ್ಗ ಕ್ಷೇತದ 33 ಪಂಚಾಯಿತಿಗಳಪೈಕಿ, 20 ಗ್ರಾಪಂ ಕೈ ಸೇರಿವೆ. ಗೋಕಾಕ ಮತ್ತುಅರಭಾವಿ ಕ್ಷೇತ್ರದಲ್ಲಿ ಯಾವುದೇ ಗ್ರಾಮಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬಹುಮತಪಡೆದಿಲ್ಲ. ಆದರೆ ಅಲ್ಲಿಯೂ ಕಾಂಗ್ರೆಸ್‌ಬೆಂಬಲಿತ ಎರಡು, ಮೂರರಂತೆ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ ಎಂದು ಹೇಳಿದರು.
ಗ್ರಾಪಂ ಸದಸ್ಯರು ಕಾಂಗ್ರೆಸ್ ಗೆ ಸೇರ್ಪಡೆ: ಇದೇ ಸಂದರ್ಭದಲ್ಲಿ ಬಂಬರಗಾ ಗ್ರಾಮಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಪಕ್ಷೇತರ ಸದಸ್ಯರು ಶಾಸಕ ಸತೀಶ ಜಾರಕಿಹೊಳಿನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಜಿಪಂ ಸದಸ್ಯ ಸಿದ್ದು ಸುಣಗಾರ, ರಾಮಣ್ಣ ಗುಳ್ಳಿ, ಸುರೇಶ ನಾಯ್ಕ, ಭೀಮಗೌಡ ಪಾಟೀಲ್ ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಡೂರಿನ ವ್ಯಕ್ತಿ ಮೃತಪಟ್ಟಿರುವುದು ಕೋವಿಡ್ ಲಸಿಕೆಯಿಂದಲ್ಲ, ಹೃದಯಾಘಾತದಿಂದ : ಸುಧಾಕರ್
ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ನಂ. 1 : ಸತೀಶ್ ಜಾರಕಿಹೊಳಿ
ಹುತಾತ್ಮ ದಿನಾಚರಣೆಗೆ ಆಗಮಿಸುತ್ತಿದ್ದ ಮಹಾರಾಷ್ಟ್ರ ಸಚಿವನ ವಾಪಸ್ ಕಳಿಸಿದ ಪೊಲೀಸರು
ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ
ಬೆಳಗಾವಿ : ಬಿಜೆಪಿ ಚಾಣಕ್ಯ ಅಮಿತ್ ಶಾಗೆ ಬೆಳ್ಳಿ ಗದೆ ನೀಡಿ, ರುದ್ರಾಕ್ಷಿ ಹಾರ ಹಾಕಿ ಸ್ವಾಗತ
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ
ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ
ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ
ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು
ಮುಂದಿನ ಐಪಿಎಲ್ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?