ಜೋಡಿ ರೈಲು ಮಾರ್ಗದಿಂದ ಅಭಿವೃದ್ಧಿ


Team Udayavani, Feb 22, 2021, 4:39 PM IST

ಜೋಡಿ ರೈಲು ಮಾರ್ಗದಿಂದ ಅಭಿವೃದ್ಧಿ

ರಾಯಬಾಗ: ಪಟ್ಟಣದ ರೈಲ್ವೆ ಸ್ಟೇಷನ್‌ದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಚಿಕ್ಕೋಡಿ ಮತ್ತು ರಾಯಬಾಗ ನಡುವೆ ನಿರ್ಮಿಸಿದ ಜೋಡಿ ರೈಲು ಮಾರ್ಗ ಹಾಗೂ ರಾಯಬಾಗ ರೈಲು ನಿಲ್ದಾಣದ ನೂತನ ಕಟ್ಟಡವನ್ನು ರವಿವಾರದಂದು ವಿಡಿಯೋ ಲಿಂಕ್‌ ಮೂಲಕ ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ಲೋಂಡಾ-ಮಿರಜ್‌ ನಡುವಿನ 186 ಕಿ.ಮೀಉದ್ದದ ಜೋಡಿ ರೈಲು ಮಾರ್ಗವನ್ನು ಮಾರ್ಚ್‌2023ರಲ್ಲಿ ಪೂರ್ಣಗೊಳಿಸಲಾಗುವುದು. ಜೋಡಿ ಮಾರ್ಗ ನಿರ್ಮಾಣದ ನಂತರ ಈ ಭಾಗ ಹೆಚ್ಚು ಅಭಿವೃದ್ಧಿಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿದ ನಂತರ ಕರ್ನಾಟಕದಲ್ಲಿ 6 ವರ್ಷಗಳಲ್ಲಿ 331 ಕಿ.ಮೀ ಹೊಸ ಮಾರ್ಗವನ್ನುನಿರ್ಮಿಸಲಾಗಿದೆ. ಭಾರತೀಯ ರೈಲ್ವೆಯುಬರುವ ಎರಡೂವರೆ ವರ್ಷದಲ್ಲಿ ಕರ್ನಾಟಕದ ಎಲ್ಲ ರೈಲ್ವೆ ಮಾರ್ಗವನ್ನು ವಿದ್ಯುದೀಕರಣ ಮಾಡಲು ಯೋಜನೆ ರೂಪಿಸಿದೆ ಎಂದರು.

ಇದೇಸಂದರ್ಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶಅಂಗಡಿ ಅವರನ್ನು ನೆನಪಿಸಿಕೊಂಡು, ಅವರು ಕರ್ನಾಟಕದಲ್ಲಿ ಜಾರಿಗೆ ತಂದ ರೈಲ್ವೆ ಯೋಜನೆಗಳ ಬಗ್ಗೆ ಮೆಲುಕು ಹಾಕಿದರು. ಕೇಂದ್ರ ರೈಲ್ವೆ ಸಚಿವರು ವಿಡಿಯೋ ಮೂಲಕ ಮಾತನಾಡುವ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಯಲುಪ್ರಾರಂಭಗೊಂಡಿದ್ದರಿಂದ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸುಮಾರು 750 ಕಿ,ಮೀ ಉದ್ದದಬೆಂಗಳೂರು-ಮಿರಜ್‌ ಜೋಡಿ ಮಾರ್ಗವನ್ನುತ್ವರಿತಗತಿಯಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದಕೇಂದ್ರ ರೈಲ್ವೆ ಸಚಿವರಿಗೆ ಅಭಿನಂದಿಸುವುದಾಗಿತಿಳಿಸಿದರು. ರಾಯಬಾಗ, ಅಥಣಿ, ಗೋಕಾಕ ಮತ್ತು ಬೆಳಗಾವಿ ರೈತರು ಬೆಳೆಯುವ ಬೆಳೆಗಳನ್ನುಗೋವಾ ರಾಜ್ಯಕ್ಕೆ ರವಾನಿಸಲು ಈ ಜೋಡಿ ರೈಲ್ವೆ ಮಾರ್ಗ ಅನುಕೂಲವಾಗಲಿದೆ. ಅಷ್ಟೇ ಅಲ್ಲದೇಬೆಳಗಾವಿ, ಬಾಗಲಕೋಟೆ, ವಿಜಯಪುರ ಸಕ್ಕರೆಕಾರ್ಖಾನೆಗಳು ಉತ್ಪಾದಿಸುವ ಸಕ್ಕರೆಯನ್ನುವಿದೇಶಗಳಿಗೆ ಸಾಗಿಸಲು ಹಾಗೂ ವಿವಿಧರಾಜ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಕಡಿಮೆ ಸಮಯದಲ್ಲಿ ಹೆಚ್ಚು ಸ್ಥಳಗಳನ್ನುತಲುಪಲು ಇದರಿಂದ ಅನುಕೂಲವಾಗಲಿದೆ ಎಂದರು.

ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳು ರಾಯಬಾಗ ರೈಲ್ವೆ ಸ್ಟೇಷನದಲ್ಲಿನಿಲುಗಡೆ ಮಾಡಲು ವಿನಂತಿಸಿಕೊಂಡಿರುವ ಶಾಸಕರ ಮನವಿಗೆ ಪೂರಕವಾಗಿ ಕೇಂದ್ರ ಸಚಿವರು ಸ್ಪಂದಿಸಿದ್ದಾರೆಂದರು.

ಶಾಸಕ ಡಿ.ಎಮ್‌.ಐಹೊಳೆ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ರೈಲ್ವೆ ಅಧಿಕಾರಿಗಳಾದಜೋಗೆಂದ್ರ ಯದವೆಂದು, ವಿಷ್ಣು ಭೂಷಣ, ಜೈದೀಪ ಪವಾರ, ಅರವಿಂದ ಎಚ್‌.ಜಿ. ವೇದಿಕೆಹಂಚಿಕೊಂಡಿದ್ದರು. ವಸಂತ ಹೊಸಮನಿ, ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಸುರೇಶ ಕುಂಬಾರ, ಅಣ್ಣಾಸಾಹೇಬಹೊನಕುಪ್ಪೆ ಇತರರಿದ್ದರು. ದಾದರ-ಪುದಚರಿ,ದಾದರ-ತಿರುನೆಲ್ವೆಲಿ ಹಾಗೂ ದಾದರ-ಮೈಸೂರರೈಲ್ವೆಗಳನ್ನು ರಾಯಬಾಗ ಸ್ಟೇಷನ್‌ದಲ್ಲಿ ನಿಲುಗಡೆಗೆ ಜನರು ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಟಾಪ್ ನ್ಯೂಸ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ಕಾಂಗ್ರೆಸ್ ಸೇರುವ ಜನರು ಎಷ್ಟು ಸಮರ್ಥರು?: ಡಿಕೆಶಿ ಗೆ ಬಿಜೆಪಿ ಪ್ರಶ್ನೆ

ನಾಳೆ ಪೂರ್ಣ ಸೂರ್ಯಗ್ರಹಣ

2021ರ ಕೊನೆಯ ಗ್ರಹಣ: ನವೆಂಬರ್ 4ರಂದು ಪೂರ್ಣ ಸೂರ್ಯಗ್ರಹಣ

1-fdsfds

ಹೊಂಡಗುಂಡಿ ರಸ್ತೆ; ಆ್ಯಂಬುಲೆನ್ಸ್‌ನಲ್ಲಿ ವಿಚಿತ್ರ ಹೆರಿಗೆ !

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಜನತಂತ್ರದ ಉಳಿವಿಗೆ ಗಂಭೀರ ಚಿಂತನೆ ಅಗತ್ಯ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕ

ಕೊನೆಗೂ ಪಂದ್ಯ ಆರಂಭ: ಭಾರತ ತಂಡದಲ್ಲಿ 3 ಬದಲಾವಣೆ, ಕಿವೀಸ್ ಗೂ ಹೊಸ ನಾಯಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸವಾಲು ಸ್ವೀಕರಿಸಿ ಬೆಳಗಾವಿ ಅಧಿವೇಶನ: ಸ್ಪೀಕರ್‌ ಕಾಗೇರಿ

ಸವಾಲು ಸ್ವೀಕರಿಸಿ ಬೆಳಗಾವಿ ಅಧಿವೇಶನ: ಸ್ಪೀಕರ್‌ ಕಾಗೇರಿ

ವಿಷಾಹಾರ ಸೇವನೆ  : 11ಕುರಿ ಸಾವು

ವಿಷಾಹಾರ ಸೇವನೆ  : 11ಕುರಿ ಸಾವು

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

ವಿರೋಧಿಗಳ ಆಸೆ-ಆಮಿಷಕ್ಕೆ ಒಳಗಾಗದಿರಿ: ಲಖನ್‌

ಅಂಬೇಡ್ಕರ್‌ ಕಟ್ಟೆ ಧ್ವಂಸ-ಪ್ರತಿಭಟನೆ

ಅಂಬೇಡ್ಕರ್‌ ಕಟ್ಟೆ ಧ್ವಂಸ-ಪ್ರತಿಭಟನೆ

ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯ: ಜಗತಾಪ್‌

ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯ: ಜಗತಾಪ್‌

MUST WATCH

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

ಹೊಸ ಸೇರ್ಪಡೆ

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

ಪಾಕಿಸ್ತಾನಕ್ಕೂ, ದೆಹಲಿ ವಾಯುಗುಣಮಟ್ಟ ಕಲುಷಿತಗೊಳ್ಳಲು ಏನು ಸಂಬಂಧ: ಸುಪ್ರೀಂಕೋರ್ಟ್

h vishwanath

7ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಪಾಠ ಮಾಡಿ: ಎಚ್.ವಿಶ್ವನಾಥ್

1-ggfdg-a

ಕೊಲ್ಲೂರು, ಕೃಷ್ಣಮಠಕ್ಕೆ ರಾಜ್ಯಪಾಲ ಗೆಹ್ಲೋಟ್ ಭೇಟಿ, ವಿಶೇಷ ಪ್ರಾರ್ಥನೆ

ಶ್ರೀ ಗಂಧ ಅಕ್ರಮ

ಶ್ರೀಗಂಧ ಚೋರರ ಮೇಲೆ ಗುಂಡಿನ ದಾಳಿ..!

shivaram karanda building

ಶಿವರಾಮಕಾರಂತ ಬಡಾವಣೆ 300 ಕಟ್ಟಡ ಸಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.