
ಬಿಜೆಪಿ ಶಾಸಕರಿಗೆ ಡಿಕೆ ಶಿವಕುಮಾರ್ ಟಿಕೆಟ್ ಆಮಿಷ: ಸಿಎಂ ಬೊಮ್ಮಾಯಿ
Team Udayavani, Mar 28, 2023, 5:27 PM IST

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಳೆದ ಎರಡು ಮೂರು ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡುತ್ತಿದ್ದಾರೆ. ಟಿಕೆಟ್ ಭರವಸೆ ನೀಡುತ್ತಿದ್ದಾರೆ. ಹತಾಶೆಯಿಂದ ನಮ್ಮ ಪಕ್ಷದವರನ್ನು ಸಂಪರ್ಕಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಎನ್ನುವುದಕ್ಕೆ ಇದೆ ಸಾಕ್ಷಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಡಿಪಿಐ ಸಂಘಟನೆಯಿಂದ ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿ, ಎಸ್ ಡಿಪಿಐನವರು ನನನ್ನು ಹೊಗಳಲು ಸಾಧ್ಯನಾ? ಎಸ್ ಡಿಪಿಐ ಒಂದು ದೇಶದ್ರೋಹಿ ಸಂಘಟನೆ. ಅವರು ದೇಶದ ವಿರುದ್ಧ ಚಟುವಟಿಕೆ ಮಾಡುವವರು. ಭಾರತದ ದೇಶದ ಅಲ್ಪಸಂಖ್ಯಾತರ ವಿರೋಧಿಗಳೇ ಎಸ್ ಡಿಪಿಐ ನವರು. ಅವರಿಂದ ನಾನೇನು ಹೊಗಳಿಕೆ ಬಯಸಲ್ಲ. ಯಾವಾಗಲು ನಮ್ಮ ವಿರೋಧಿಗಳು ಇದ್ದಾರೆ. ಅವರ ಹೇಳಿಕೆಗೆ ಸೊಪ್ಪು ಹಾಕುವುದಿಲ್ಲ. ಖಂಡಿತವಾಗಿಯೂ ಕಾನೂನು ಕ್ರಮ ಆಗುತ್ತದೆ. ಜನ ತೀರ್ಮಾನ ಮಾಡುತ್ತಾರೆ ಎಂದರು.
ಇದನ್ನೂ ಓದಿ:ಉತ್ತರ ಜಪಾನ್ ನಲ್ಲಿ ಭೂಕಂಪನ: ರಿಕ್ಟರ್ ಮಾಪನದಲ್ಲಿ 6.1 ತೀವ್ರತೆ ದಾಖಲು
ಅಥಣಿ ಟಿಕೆಟ್ ಗೊಂದಲ ವಿಚಾರಕ್ಕೆ ಮಾತನಾಡಿ, ಗೆಲ್ಲುವಂಥ ಪಕ್ಷಕ್ಕೆ ಎಲ್ಲಾ ಕಡೆ ಫೈಟ್ ಇರುತ್ತದೆ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

ಕರ್ನಾಟಕದಲ್ಲಿ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

Belagavi: ಕೂದಲೆಳೆ ಅಂತರದಲ್ಲಿ ನಾಗರಹಾವಿನಿಂದ ಬಾಲಕಿ ಬಚಾವ್!

ಕಷ್ಟ ಕಾಲದಲ್ಲಿ ಸವದಿ, ಶೆಟ್ಟರ್ ನಮ್ಮ ಪಕ್ಷಕ್ಕೆ ಬಂದು ಶಕ್ತಿ ತುಂಬಿದ್ದಾರೆ: ಡಿಕೆಶಿ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ