ಬೀಜ-ಗೊಬ್ಬರ ಹಂಚಿಕೆಯಲ್ಲಿ ಲೋಪವಾಗದಿರಲಿ: ಡಾ|ವಿಶಾಲ್


Team Udayavani, May 9, 2019, 12:31 PM IST

bel-1

ಬೆಳಗಾವಿ: ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ಅಗತ್ಯ ಗೊಬ್ಬರವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು. ಒಂದು ವೇಳೆ ಇದಕ್ಕೆ ಸಂಬಂಧಿಸಿದಂತೆ ದೂರುಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್‌. ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬೀಜ-ಗೊಬ್ಬರಗಳ ಲಭ್ಯತೆ, ಕೃಷಿ ವಿಮಾ ಯೋಜನೆ ಅನುಷ್ಠಾನ ಹಾಗೂ ಕೃಷಿ ಅಭಿಯಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಯಾದ ನಂತರ ಬಿತ್ತನೆ ಬೀಜಗಳು ಮತ್ತು ಗೊಬ್ಬರಕ್ಕಾಗಿ ರೈತರಿಂದ ದಿಢೀರ್‌ ಬೇಡಿಕೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಯಾವುದೇ ಅನಾನುಕೂಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುಂಚಿತವಾಗಿಯೇ ಬೀಜ-ಗೊಬ್ಬರಗಳ ಸಮರ್ಪಕ ದಾಸ್ತಾನು ಮಾಡಿಕೊಳ್ಳಬೇಕು. ರೈತರಿಗೆ ಮಾಹಿತಿ ಒದಗಿಸಲು ಅಥವಾ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿ ಕೇಂದ್ರ ಸ್ಥಾಪಿಸಬೇಕು. ಬಿತ್ತನೆ ಬೀಜ ವಿತರಿಸುವಾಗ ಗುಣಮಟ್ಟ ಖಾತ್ರಿಪಡಿಸಿಕೊಂಡು ರೈತರಿಗೆ ಪೂರೈಸಬೇಕು. ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ನೀರಿನ ಕೊರತೆಯಿಂದಾಗಿ ರೈತರು ಕಬ್ಬಿನ ಬದಲಾಗಿ ಪರ್ಯಾಯ ಬೆಳೆ ಬೆಳೆಯಲು ಮುಂದಾದರೆ ಅಗತ್ಯವಾಗಿರುವ ಪರ್ಯಾಯ ಬೀಜಗಳ ದಾಸ್ತಾನು ಮಾಡಿಕೊಳ್ಳಬೇಕು. ಭೂಮಿಯ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಶಾಲ್ ಆರ್‌. ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಕೊರತೆ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಶೇ. 67ರಷ್ಟು ಮಳೆಯ ಕೊರತೆ ಉಂಟಾಗಿದೆ. ಪ್ರಸಕ್ತ ಸಾಲಿನ ಜನೇವರಿ ತಿಂಗಳಿನಿಂದ ಇಲ್ಲಿಯವರೆಗೆ 48 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಇದುವರೆಗೆ ಕೇವಲ 16 ಮಿ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ಮುಂಗಾರು ಹಂಗಾಮಿಗಾಗಿ ಜಿಲ್ಲೆಗೆ ಅಗತ್ಯವಿರುವ ಬೀಜ-ಗೊಬ್ಬರಗಳ ಸಮರ್ಪಕ ದಾಸ್ತಾನು ಇರುತ್ತದೆ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ-ಗೊಬ್ಬರಗಳ ವಿತರಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ರೈತರಿಗೆ ಅಗತ್ಯವಿರುವ ಬೀಜ-ಗೊಬ್ಬರಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಸಹಕಾರ ನೀಡಬೇಕು ಎಂದು ಬೀಜ-ಗೊಬ್ಬರ ಮಾರಾಟಗಾರರಿಗೂ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಬಿತ್ತನೆ ಬೀಜ, ಗೊಬ್ಬರ-ಕೀಟನಾಶಕಗಳನ್ನು ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್‌. ಬಿಡುಗಡೆಗೊಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಉಪನಿರ್ದೇಶಕರಾದ ಡಾ.ಎಚ್.ಡಿ.ಕೋಳೇಕರ್‌, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಹಕಾಟಿ, ಕೃಷಿ, ಸಹಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಕೃಷಿ ಅಭಿಯಾನ

ಕೃಷಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆಯ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಘೋಷಣೆಯೊಂದಿಗೆ ಮೇ ತಿಂಗಳಿನಲ್ಲಿ ಜಿಲ್ಲಾದ್ಯಂತ ಕೃಷಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಈ ಅಭಿಯಾನದ ಆಶಯದ ಪ್ರಕಾರ ಪ್ರತಿ ರೈತರಿಗೂ ಮಾಹಿತಿ ಒದಗಿಸುವ ಕೆಲಸವಾಗಬೇಕು. ಮೂರು ದಿನಗಳ ಕೃಷಿ ಅಭಿಯಾನದಲ್ಲಿ ಮೊದಲ ಎರಡು ದಿನಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸಲಾಗುವುದು ಮೂರನೇ ದಿನ ಹೋಬಳಿ ಮಟ್ಟದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್‌. ತಿಳಿಸಿದರು.

Ad

ಟಾಪ್ ನ್ಯೂಸ್

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

Exam

PU;ನಕಲಿ ಪಠ್ಯ ಹಾವಳಿ! :ಎಚ್ಚೆತ್ತ ಕೆಬಿಟಿಎಸ್‌ ಅಧಿಕಾರಿಗಳು!

1-aa-aa-aa-RR

Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲದ ಗಟ್ಟಿಗಿತ್ತಿ

DKSHI (2)

Congress; ಡಿಸಿಎಂ ಡಿಕೆಶಿ ಮೌನ ದೀಕ್ಷೆ !: ಪಕ್ಷದ ಹಿತ ನನ್ನ ಆದ್ಯತೆ: ಸ್ಪಷ್ಟನೆ

siddu

Karnataka: “ಸಿದ್ದುವೇ ಸಿಎಂ’: ಆಪ್ತ ಸಚಿವರ ಒಕ್ಕೊರಲ ದನಿ

1-aa-aaa–aaa-mang

ಆಹಾರಪದ್ಧತಿ, ಜೀವನ ಶೈಲಿ ಬದಲಾಗಲಿ

Congress: ರಾಷ್ಟ್ರಮಟ್ಟದಲ್ಲಿ ಸಿಎಂಗೆ ಮತ್ತೊಂದು ಹುದ್ದೆೆ!

Congress: ರಾಷ್ಟ್ರಮಟ್ಟದಲ್ಲಿ ಸಿಎಂಗೆ ಮತ್ತೊಂದು ಹುದ್ದೆೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Kittur: ಶರಣೆ ತಿಗಡಿ ಕಲ್ಯಾಣಮ್ಮನವರ ಐಕ್ಯಸ್ಥಳ ನಿರ್ಲಕ್ಷ್ಯ

11-belagavi

Belagavi: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ: ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕ

14

Belagavi: ಬಿತ್ತನೆ ಕಾರ್ಯಕ್ಕೆ ಹೊಸ ಚೈತನ್ಯ ನೀಡಿದ ಮುಂಗಾರು

Ram Jarakiholi

BJP;ಜಾರಕಿಹೊಳಿ ಅಡ್ಡೆಯಲ್ಲಿ ಭಿನ್ನರ ಸಭೆ!: 13/14ರಂದು ಬೆಂಗಳೂರಲ್ಲಿ ಸಭೆ?

“ಬಿಜೆಪಿಗೆ ಯತ್ನಾಳ ಸೇರ್ಪಡೆ ಮಾಡಿಕೊಳ್ಳದಿದ್ದರೆ ತೊಂದರೆ’: ಮಹೇಶ ಕುಮಠಳ್ಳಿ

“ಬಿಜೆಪಿಗೆ ಯತ್ನಾಳ ಸೇರ್ಪಡೆ ಮಾಡಿಕೊಳ್ಳದಿದ್ದರೆ ತೊಂದರೆ’: ಮಹೇಶ ಕುಮಠಳ್ಳಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

Exam

PU;ನಕಲಿ ಪಠ್ಯ ಹಾವಳಿ! :ಎಚ್ಚೆತ್ತ ಕೆಬಿಟಿಎಸ್‌ ಅಧಿಕಾರಿಗಳು!

1-aa-aa-aa-RR

Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲದ ಗಟ್ಟಿಗಿತ್ತಿ

DKSHI (2)

Congress; ಡಿಸಿಎಂ ಡಿಕೆಶಿ ಮೌನ ದೀಕ್ಷೆ !: ಪಕ್ಷದ ಹಿತ ನನ್ನ ಆದ್ಯತೆ: ಸ್ಪಷ್ಟನೆ

siddu

Karnataka: “ಸಿದ್ದುವೇ ಸಿಎಂ’: ಆಪ್ತ ಸಚಿವರ ಒಕ್ಕೊರಲ ದನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.