ಮೊದಲ, 3ನೇ ಮದುವೆ ಬಚ್ಚಿಟ್ಟದ್ದಕ್ಕೆ 2ನೇ ಹೆಂಡತಿಯಿಂದಲೇ ಗಂಡನ ಕೊಲೆಗೆ ಸುಪಾರಿ


Team Udayavani, Mar 23, 2022, 2:17 PM IST

16murder

ಬೆಳಗಾವಿ: ಮೊದಲ ಹಾಗೂ ಮೂರನೇ ಮದುವೆ ಬಚ್ಚಿಟ್ಟಿದ್ದಕ್ಕೆ ಕುಪಿತಗೊಂಡ ಎರಡನೇ ಹೆಂಡತಿ 10 ಲಕ್ಷ ರೂ. ಸುಪಾರಿ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸಮೇತ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗೀಡಾದ ರಾಜು ದೊಡ್ಡಬೊಮ್ಮನವರನ ಪತ್ನಿ ಬೆಳಗಾವಿಯ ಕಿರಣ ರಾಜು ದೊಡ್ಡಬೊಮ್ಮನವರ(26), ಹಿಂದವಾಡಿಯ ಶಶಿಕಾಂತ ಪಾಟೀಲ, ಖಾಸಬಾಗದ ಧರಣೇಂದ್ರ ಕಂಠಿ, ಸಂಜಯ ರಜಪೂತ ಹಾಗೂ ವಿಜಯ ಜಾಗೃತ ಎಂಬಾತರನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಕೊಲೆ ಮಾಡಿದ್ದು ಏಕೆ?

ರಿಯಲ್‌ ಎಸ್ಟೇಟ್‌ ಉದ್ಯಮಿ ಆಗಿದ್ದ ರಾಜು ದೊಡ್ಡಬೊಮ್ಮನವರ ಮೊದಲ ಮದುವೆ ಹಾಗೂ ಮೂರನೇ ಮದುವೆ ಆಗಿರುವ ಬಗ್ಗೆ ಎರಡನೇ ಹೆಂಡತಿ ಕಿರಣಗೆ ಹೇಳದೇ ಬಚ್ಚಿಟ್ಟಿದ್ದನು. ಮೊದಲ ಹೆಂಡತಿ ಇದ್ದರೂ ಎರಡನೇ ಮದುವೆ ಆಗಿರುವ ಬಗ್ಗೆ ಕಿರಣಗೆ ಸಿಟ್ಟಿತ್ತು. ನಂತರದಲ್ಲಿ ರಾಜು, ದೀಪಾ ಎಂಬವರೊಂದಿಗೆ ಮೂರನೇ ಮದುವೆಯನ್ನೂ ಮಾಡಿಕೊಂಡಿದ್ದನು. ಇದರಿಂದ ಕಿರಣ ನೊಂದಿದ್ದಳು. ಆಗ ಕಿರಣ ತನ್ನ ಪರಿಚಯಸ್ಥರಿಗೆ ಈ ವಿಷಯ ತಿಳಿಸಿದ್ದಳು. ಜತೆಗೆ ಸಂಜಯ ರಜಪೂತ ಎಂಬಾತನೊಂದಿಗೆ ಕಿರಣ ಸಲುಗೆಯಿಂದ ಇದ್ದಿದ್ದು ರಾಜುಗೆ ಆಗಿ ಬರುತ್ತಿರಲಿಲ್ಲ. ಈ ಬಗ್ಗೆ ಕಿರಣನೊಂದಿಗೆ ರಾಜು ಆಗಾಗ ಜಗಳವಾಡುತ್ತಿದ್ದನು ಎಂದು ತಿಳಿದು ಬಂದಿದೆ.

10 ಲಕ್ಷ ರೂ. ಸುಪಾರಿ

ಎರಡನೇ ಹೆಂಡತಿ ಕಿರಣನೊಂದಿಗೆ ರಾಜು ಆಗಾಗ ಜಗಳ ಮಾಡುತ್ತಿದ್ದನು. ಈಕೆಯನ್ನು ಬಿಟ್ಟು ಮಂಡೋಳಿ ರಸ್ತೆಯಲ್ಲಿರುವ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್‌ ನಲ್ಲಿ ಇರುತ್ತಿದ್ದನು. ಕೆಲ ತಿಂಗಳಿಂದ ರಾಜುನನ್ನು ಕೊಲೆ ಮಾಡಲು ಕಿರಣ ಪ್ಲ್ಯಾನ್‌ ಮಾಡಿಕೊಂಡಿದ್ದಳು. ಹೀಗಾಗಿ ಪ್ರಮುಖ ಆರೋಪಿ ಸಂಜಯ ರಜಪೂತನಿಗೆ 10 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಅದರಂತೆ ಮೊದಲು 5 ಲಕ್ಷ ರೂ. ನಂತರ 5 ಲಕ್ಷ ರೂ. ಹಣ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಮಂಡೋಳಿ ರಸ್ತೆಯ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್‌ನ ಬಾಡಿಗೆ ಮನೆಯಲ್ಲಿದ್ದ ರಾಜು ಮಲ್ಲಪ್ಪ ದೊಡ್ಡಬೊಮ್ಮನ್ನವರ(41) ಎಂಬಾತನ ಕಣ್ಣಿಗೆ ಖಾರದ ಪುಡಿ ಎರಚಿ ಮಾ. 15ರಂದು ಬೆಳಗ್ಗೆ 6:30ರ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ಮೂರನೇ ಪತ್ನಿಯನ್ನು ನೋಡಲು ಕಾರಿನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಲಾಗಿತ್ತು. ರಕ್ತದ ಮಡವಿನಲ್ಲಿ ಬಿದ್ದು ಸ್ಥಳದಲ್ಲಿಯೇ ರಾಜು ಮೃತಪಟ್ಟಿದ್ದನು. ಪತ್ನಿ ದೀಪಾ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಕೊಲೆಯಾದ ನಾಲ್ಕೈದು ದಿನಗಳಲ್ಲಿಯೇ ಹಂತಕರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ : ಉರುಸ್​ನಲ್ಲಿ ಪ್ರಸಾದ ಸೇವಿಸಿ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಗುಡಾಜಿ, ಇನ್ಸಪೆಕ್ಟರ್‌ ಸುನೀಲಕುಮಾರ ಹಾಗೂ ಪೊಲೀಸರ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ರಾಜು ದೊಡ್ಡಬೊಮ್ಮನ್ನವರ ಕೆಲವು ವರ್ಷಗಳಿಂದ ರಿಯಲ್‌ ಎಸ್ಟೇಟ್‌ ಹಾಗೂ ಬಿಲ್ಡರ್‌ ಉದ್ಯೋಗದಲ್ಲಿ ತೊಡಗಿಕೊಂಡಿದ್ದನು. ಕೆಲವು ಕಡೆಗೆ ಮನೆ ಕಟ್ಟಿಸಿ ಕೊಡುತ್ತಿದ್ದನು. ಇದರಲ್ಲಿ ಹಲವಾರು ಮನೆಗಳು ಅರ್ಧಂಬರ್ಧ ಆಗಿವೆ. ಗ್ರಾಹಕರು ರಾಜುನ ಬಗ್ಗೆ ಅಸಮಾಧಾನ ಹೊಂದಿದ್ದರು. ಇನ್ನೂ ಕೆಲವರಿಂದ ಹಣ ಪಡೆದು ಜಾಗ ನೀಡುವುದಾಗಿ ಭರವಸೆ ನೀಡಿದ್ದನು. ಆದರೆ ಅನೇಕರಿಗೆ ಜಾಗ ನೀಡಿರಲಿಲ್ಲ ಎಂಬ ಆರೋಪವೂ ರಾಜು ಮೇಲಿದೆ.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.