ಎಸ್ಟಿ ಸಮಾಜಕ್ಕೆ ಘೋರ ಅನ್ಯಾಯ; ನಿಜವಾದ ಸಮಾಜಗಳಿಗೆ ನಷ್ಟ: ಶ್ರೀ
ಪರಿವಾರ ಮತ್ತು ವಾಲ್ಮೀಕಿ ಸಮಾಜ ಮಾತ್ರ ಎಸ್ಟಿ ಮೀಸಲಾತಿ ಪಡೆಯಲು ಅರ್ಹರಿದ್ದಾರೆ.
Team Udayavani, Nov 16, 2022, 6:40 PM IST
ಅಡಹಳ್ಳಿ: ರಾಜ್ಯ ಸರ್ಕಾರ ಮತ ಬ್ಯಾಂಕ್‌ಗಾಗಿ ಇನ್ನೂ ಅನೇಕ ಸಮಾಜಗಳಿಗೆ ಎಸ್ಟಿ ಮೀಸಲಾತಿ ಪ್ರಮಾಣ ಪತ್ರ ನೀಡುತ್ತಿರುವುದು ನಿಜವಾದ ಎಸ್ಟಿ ಸಮಾಜಕ್ಕೆ ಮಾಡುವ ಘೋರ ಅನ್ಯಾಯ ಎಂದು ರಾಜನಹಳ್ಳಿ ವಾಲ್ಮೀಕಿ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಸಮೀಪದ ರಡ್ಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರ ರಾಜನಹಳ್ಳಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಅಥಣಿ ತಾಲೂಕಾ ಮಟ್ಟದ ವಾಲ್ಮೀಕಿ ಸಮುದಾಯ ಜನಜಾಗೃತಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿ ತಳವಾರ, ಪರಿವಾರ ಮತ್ತು ವಾಲ್ಮೀಕಿ ಸಮಾಜ ಮಾತ್ರ ಎಸ್ಟಿ ಮೀಸಲಾತಿ ಪಡೆಯಲು ಅರ್ಹರಿದ್ದಾರೆ.
ಆದರೆ ಇತ್ತೀಚೆಗೆ ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಥಣಿ ತಾಲೂಕಿನ ಹಲ್ಯಾಳದ ಕೃಷ್ಣಾ ರೈತಸಭಾ ಭವನದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಎಸ್ಟಿಗೆ ಯೋಗ್ಯರಲ್ಲದ ಸಮಾಜಗಳಾದ ಕೋಳಿ, ಕಬ್ಬಲಿಗ, ಗಂಗಾಮತ ಹಾಗೂ ಅಂಬಿಗರಿಗೂ ಕೂಡ ತಳವಾರ ಮತ್ತು ಪರಿವಾರ ಸಮಾಜಕ್ಕೆ ಸೇರಿದವರೆಂದು ಪ್ರಮಾಣ ಪತ್ರ ನೀಡುತ್ತಿರುವುದು ನೈಜ ಎಸ್ಟಿಗಳಿಗೆ ತುಂಬಲಾರದ ನಷ್ಟವಾಗುತ್ತಿದೆ.
ಈ ತಾರತಮ್ಯ ಸರಿಪಡಿಸಬೇಕೆಂದು ಆಗ್ರಹಿಸಿ ಇದೇ ನ. 27 ರಂದು ರಾಜನಹಳ್ಳಿ ವಾಲ್ಮೀಕಿ ಸಭಾ ಭವನದಲ್ಲಿ ಎಸ್ಟಿಗೆ ಸೇರಿದ 15 ಶಾಸಕರು, ಇಬ್ಬರು ಸಂಸದರನ್ನು ಸೇರಿ ಸಭೆ ನಡೆಸುವದಲ್ಲದೇ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು, ಎಸ್ಟಿ ಸಮಾಜದವರು ಸಂಘಟಿತರಾಗಬೇಕು, ರಾಜಕಾರಣಿಗಳ ಬಣ್ಣದ ಮಾತಿಗೆ ಯಾರೂ ಮರುಳಾಗದೇ ಜಾಗ್ರತರಾಗಬೇಕು. ವಾಲ್ಮೀಕಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶೋಭೆ ತರಬೇಕು ಎಂದು ತಿಳಿಸಿದರು.
ವಾಲ್ಮೀಕಿ ಸಮುದಾಯ ಮುಖಂಡ ರಮೇಶ ಸಿಂದಗಿ ಮಾತನಾಡಿದರು, ವಾಲ್ಮೀಕಿ ಸಮುದಾಯದ ಮುಖಂಡರಾದ ಬಾಬು ಹುಲ್ಯಾಳ, ನಾಗಪ್ಪ ದಳವಾಯಿ, ಮುದಕಪ್ಪ ಗಸ್ತಿ, ಜಿಪಂ ಮಾಜಿ ಸದಸ್ಯ ಶ್ರೀಶೈಲ ಗಸ್ತಿ, ಲಕ್ಕಪ್ಪ ನಾಯಿಕ, ಹಣಮಂತ ಚಿಗರಿ, ಬಸಪ್ಪ ಜನವಾಡ, ಬಸಪ್ಪ ಹುಲ್ಯಾಳ, ಅಪ್ಪಾಜಿ ನಡುವಿನಮನಿ, ಧರ್ಮಪ್ಪ ಗಲಗಲಿ, ಶ್ರೀಧರ ಭುಜಣ್ಣವರ, ಶಿವಾನಂದ ನಾಯಿಕ, ಶೈಲಜಿರಾವ್ ನಾಯಕ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2025ರೊಳಗೆ ಕ್ಷಯರೋಗ ಮುಕ್ತ ಭಾರತಕ್ಕೆ ಶ್ರಮಿಸಿ: ಡಿಸಿ
ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ
ಮುಸ್ಲಿಂ ಬೃಹತ್ ಸಮಾವೇಶ ಮಾಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಈ ದೇಶ ಯಾರೋ ಒಬ್ಬರ, ಅದಾನಿ ಸ್ವತ್ತಲ್ಲ : ಬೆಳಗಾವಿಯಲ್ಲಿ ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ
ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ
ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ
ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್