ಹಿಡಕಲ್ ಡ್ಯಾಂ ಪೈಪ್ ಒಡೆದು 50 ಅಡಿಗೂ ಎತ್ತರ ಚಿಮ್ಮಿದ ನೀರು…!
Team Udayavani, Apr 15, 2023, 12:30 PM IST
ಬೆಳಗಾವಿ: ಬೆಳಗಾವಿ ನಗರಕ್ಕೆ ಹಿಡಕಲ್ಡ್ಯಾಂದಿಂದ ಕುಡಿಯುವ ನೀರು ಪೂರೈಸುವ ಪೈಪ್ಲೈನ್ ಶನಿವಾರ ಬೆಳಗ್ಗೆ ಖನಗಾಂವ ಬಿ.ಕೆ. ಗ್ರಾಮದ ಬಳಿ ಒಡೆದು ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿದೆ.
ನೀರಿನ ಒತ್ತಡ ಹೆಚ್ಚಾಗಿ ಬ್ಲಾಕ್ ಆಗಿ ಪೈಪ್ಲೈನ್ ಒಡೆದಿದ್ದರಿಂದ ಸುಮಾರು 50 ಅಡಿಗೂ ಮೇಲೆ ನೀರು ಚಿಮ್ಮಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ನೀರು ಚಿಮ್ಮುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ದೊಡ್ಡ ಪ್ರಮಾಣದಲ್ಲಿ ನೀರು ಚಿಮ್ಮುತ್ತಿರುವುದರಿಂದ ಬೆಳಗಾವಿ-ಗೋಕಾಕರಾಜ್ಯ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನೀರಿನ ರಭಸಕ್ಕೆ ರಾಜ್ಯ ಹೆದ್ದಾರಿಯ ಡಾಂಬರ್ ರಸ್ತೆ ಕಿತ್ತು ಹೋಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಸುತ್ತಲಿನ ಹೊಲಗಳಿಗೆ ನುಗ್ಗಿ ಹಾನಿ ಉಂಟು ಮಾಡಿದೆ.