ಸಿದ್ದು 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ: ಪ್ರಹ್ಲಾದ ಜೋಶಿ

Team Udayavani, Apr 1, 2023, 6:35 AM IST

ಸಿದ್ದು 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿ: ಪ್ರಹ್ಲಾದ ಜೋಶಿ

ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲಿಯೂ ಅವರು ಸ್ಪರ್ಧಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಇನ್ನೂ ಕ್ಷೇತ್ರ ಸಿಕ್ಕಿಲ್ಲ. ವರುಣಾದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಅಪ್ಪನಿಗಾಗಿ ಮಗ ದೊಡ್ಡ ತ್ಯಾಗ ಮಾಡಿದ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ. ವರುಣಾದಲ್ಲಿ ಸೋಲುವ ಭಯಕ್ಕೆ ಮತ್ತೂಂದು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಕೋಲಾರ ಸೇರಿದಂತೆ ಬೇರೆ ಬೇರೆ ಕಡೆ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಶಾಸಕರಿಗೆ ಡಿಕೆಶಿ ಕರೆ ಮಾಡಿ ಆಹ್ವಾನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್‌ನವರು ಭ್ರಮನಿರಸನಗೊಂಡಿದ್ದಾರೆ. ಕಾಂಗ್ರೆಸ್‌ ಬಳಿ ಚುನಾವಣೆಗೆ ನಿಂತು ಗೆಲ್ಲುವವರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅವರು ಈ ರೀತಿ ಮಾಡುತ್ತಿದ್ದಾರೆ. ಶಾಸಕ ಗೋಪಾಲಕೃಷ್ಣ ರಾಜೀನಾಮೆ ಕೊಟ್ಟಿದ್ದಾರೆಂದು ಕೇಳಿದ್ದೇನೆ. ಇನ್ನುಳಿದವರು ನನ್ನ ಸಂಪರ್ಕದಲ್ಲಿದ್ದಾರೆ ಎಂದರು.

ಯಾರಿಗೆ ಟಿಕೆಟ್‌ ನೀಡಬೇಕೆನ್ನುವುದರ ಬಗ್ಗೆ ಕೋರ್‌ ಸಮಿತಿಯಲ್ಲಿ ಚರ್ಚೆ ಆಗುತ್ತದೆ. ಯಾರಿಗೆ ಟಿಕೆಟ್‌ ಸಿಗುವುದಿಲ್ಲವೋ ಅವರಿಗೆ ಸಮಾಧಾನ ಮಾಡುವ ಬಗ್ಗೆಯೂ ಚರ್ಚೆ ಆಗುತ್ತದೆ. ಗೆಲ್ಲುವ ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಆಕಾಂಕ್ಷಿಗಳು ಇರುತ್ತಾರೆ ಎಂದರು. ಟಿಕೆಟ್‌ ಕುರಿತು ರಮೇಶ್‌ ಜಾರಕಿಹೊಳಿ, ಲಕ್ಷ್ಮಣ ಸವದಿ ಬಹಿರಂಗ ಹೇಳಿಕೆ ಬಗ್ಗೆ ಅವರು ಮಾತನಾಡಿ, ಅವರಿಬ್ಬರಿಗೂ ಬಹಿರಂಗವಾಗಿ ಮಾತಾಡದಂತೆ ತಾಕೀತು ಮಾಡಿ
ದ್ದೇವೆ. ಎಲ್ಲವನ್ನೂ ಗಮನಿಸುತ್ತಿದ್ದೇವೆ, ಎಲ್ಲವನ್ನೂ ಸರಿ ಮಾಡುತ್ತೇವೆ. ಬೆಳಗಾವಿಯಲ್ಲಿ ಟಿಕೆಟ್‌ ವಿಚಾರದಲ್ಲಿ ಗೊಂದಲ ಇಲ್ಲ ಎಂದರು.

ಟಾಪ್ ನ್ಯೂಸ್

1-w-wewqe

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

1-sadasd

ರೈಲು ದುರಂತ: ಕೋಲ್ಕತಾದಲ್ಲಿ ಸಂಕಷ್ಟ; ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ನೆರವು

train-track

Express train ಬರುವ ವೇಳೆ ಟ್ರ್ಯಾಕ್ ಮೇಲೆ ಲಾರಿ ಟೈರ್‌ ಗಳು; ಆರೋಪಿಗಳಿಗೆ ಶೋಧ

arrest-lady

NCB ಯಿಂದ ನಿಷೇಧಿತ ಮಾದಕವಸ್ತು ಸಹಿತ ಮಹಿಳೆಯ ಬಂಧನ

1-sadd

Odisha trains ಅವಘಡ: ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದದ್ದೇನು?

ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ನಿಲ್ಲಲಿದೆ ಹಸಿರುಮಕ್ಕಿ ಲಾಂಚ್

ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ಓಡಾಟ ನಿಲ್ಲಿಸಲಿದೆ ಹಸಿರುಮಕ್ಕಿ ಲಾಂಚ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಗರಗೋಳ: ಸಂಪ್ರದಾಯ-ಸಂಸ್ಕೃತಿ ಉಳಿಸುವ ಜಾತ್ರೆಗಳು

ಉಗರಗೋಳ: ಸಂಪ್ರದಾಯ-ಸಂಸ್ಕೃತಿ ಉಳಿಸುವ ಜಾತ್ರೆಗಳು

ಬೆಳಗಾವಿ: 2000 ನೋಟು ಬದಲಿಸಿ ವಂಚಿಸುವ ಗ್ಯಾಂಗ್‌ ಬಂಧನ

ಬೆಳಗಾವಿ: 2000 ನೋಟು ಬದಲಿಸಿ ವಂಚಿಸುವ ಗ್ಯಾಂಗ್‌ ಬಂಧನ

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್‌

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್‌

ಬೈಲಹೊಂಗಲ: ಎನ್‌ಎಸ್‌ಎಸ್‌ ವ್ಯಕ್ತಿತ್ವ ವಿಕಸನದ ಗರಡಿಮನೆ

ಬೈಲಹೊಂಗಲ: ಎನ್‌ಎಸ್‌ಎಸ್‌ ವ್ಯಕ್ತಿತ್ವ ವಿಕಸನದ ಗರಡಿಮನೆ

ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ;  ತ್ಯಾಜ್ಯ ವಸ್ತು ಎಸೆಯಬೇಡಿ

ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

1-werr

ಲಂಚ ನೀಡಬೇಡಿ, ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ: ಶಾಸಕ ಹರೀಶ್‌ಗೌಡ

1-qwrewq

ಸಿಡಿಲಿಗೆ ಬಲಿಯಾಗಿದ್ದ ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ