ಜಿಲ್ಲೆಯ 11 ನ್ಯಾಯಬೆಲೆ ಅಂಗಡಿಗಳ ಲೈಸೆನ್ಸ್‌ ಅಮಾನತು


Team Udayavani, May 1, 2020, 6:07 PM IST

bg-tdy-2

ಬೆಳಗಾವಿ: ಎಪ್ರೀಲ್‌ ತಿಂಗಳ ವಿತರಣೆಯಲ್ಲಿ ಸರಿಯಾದ ತೂಕದ ಪಡಿತರ ನೀಡದ ಮತ್ತು ಹಣ ಪಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 11 ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರವನ್ನು ಅಮಾನತುಗೊಳಿಸಲಾಗಿದೆ.

ಹಾಗೂ 35 ನ್ಯಾಯಬೆಲೆ ಅಂಗಡಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್‌ಅಅದೇ ರೀತಿ ಮೇ ತಿಂಗಳ ಪಡಿತರ ವಿತರಣೆಯಲ್ಲಿ ಪಡಿತರ ಚೀಟಿದಾರರಿಗೆ ಸರಿಯಾದ ತೂಕದ ಪಡಿತರ ನೀಡದ, ಹಣ ಪಡೆದಿರುವ ಮತ್ತು ಪಡಿತರೇತರ ವಸ್ತುಗಳನ್ನು(ಮುಕ್ತ ಮಾರುಕಟ್ಟೆಯ ವಸ್ತುಗಳು) ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡುವ ಪ್ರಕರಣಗಳು ಕಂಡುಬಂದರೆ ಅಂತಹ ಅಂಗಡಿಕಾರರ ಲೈಸೆನ್ಸ್‌ ಪ್ರಾಧಿಕಾರ ಅಮಾನತುಗೊಳಿಸುವುದಲ್ಲದೇ ಕ್ರಿಮಿನಲ್‌ ಮೊಕದ್ದಮೆ ಸಹ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪಡಿತರ ಚೀಟಿದಾರರು ಯಾವುದಾದರೂ ದೂರುಗಳಿದ್ದರೆ ಬೆಳಗಾವಿ ನಗರಕ್ಕೆ ಸಂಬಂಧಿಸಿದಂತೆ ಸಹಾಯಕ ನಿರ್ದೇಶಕರು ಮತ್ತು ಆಹಾರ ನಿರೀಕ್ಷಕರಲ್ಲಿ ಹಾಗೂ ಆಯಾ ತಾಲೂಕುಗಳಲ್ಲಿ ತಹಶೀಲ್ದಾರರು ಮತ್ತು ಸಂಬಂಧಪಟ್ಟ ಆಹಾರ ನಿರೀಕ್ಷಕರಲ್ಲಿ ದೂರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 1 ರಿಂದ ಪಡಿತರ ವಿತರಣೆ: ಕೋವಿಡ್‌ -19 ವೈರಾಣು ಜಿಲ್ಲೆಯ ಸಾರ್ವಜನಿಕರನ್ನು ಕಂಗೆಡಿಸಿದ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ ಕಲ್ಯಾಣ ಅನ್ನ ಯೋಜನೆಯ ಮೂಲಕ ಮೇ ಮೊದಲನೆಯ ತಾರೀಖೀನಿಂದ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್‌ ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ. ಮೇ 1 ರಿಂದ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಪಡಿತರ ವಿತರಣೆ ಕಾರ್ಯ ನಡೆಸಲಾಗುವುದು. ಅಕ್ಕಿಯೊಂದಿಗೆ ಕಡ್ಡಾಯವಾಗಿ ತೊಗರಿಬೇಳೆಯನ್ನು ವಿತರಿಸಬೇಕು. ಪಡಿತರವನ್ನು ಪಡೆಯಲು ಬರುವ ಸದಸ್ಯರು ಕಡ್ಡಾಯವಾಗಿ ಮಾಸ್ಕ(ಮುಖಗವಸು) ಧರಿಸಿರಬೇಕು. ಕೇಂದ್ರ ಸರ್ಕಾರದ ಗ್ರಾಹಕರ ಮತ್ತು ಆಹಾರ ನಾಗರಿಕ ಸರಬರಾಜು ಮಂತ್ರಾಲಯದ ಆದೇಶದ ಅನ್ವಯ ಓ.ಟಿ.ಪಿ ಮೂಲಕವೇ ಕಡ್ಡಾಯವಾಗಿ ಪಡಿತರ ವಿತರಿಸುವದರಿಂದ ಪಡಿತರ ಚೀಟಿದಾರರು ನೋಂದಾಯಿತ ಮೋಬೆ„ಲ್‌ ತರಬೇಕು ಎಂದು ಅವರು ಹೇಳಿದ್ದಾರೆ.

ಆದ್ಯತಾ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಿದ ಪ್ರತಿ ಕುಟುಂಬಕ್ಕೆ ಸರ್ಕಾರವು 10ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು 2019 ಮಾರ್ಚ ತಿಂಗಳಿನಿಂದ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಮೊಬೈಲ್‌ ಮತ್ತು ಆಧಾರ ಕಾರ್ಡನೊಂದಿಗೆ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಓ.ಟಿ.ಪಿ. ಮೂಲಕ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಅಂತ್ಯೋದಯ ಪಡಿತರ ಚೀಟಿಗಳು ಹೊಂದಿರುವ ಪ್ರತಿ ಸದಸ್ಯರಿಗೆ ಉಚಿತವಾಗಿ 10ಕೆಜಿ ಅಕ್ಕಿ ಮತ್ತು ಪ್ರತಿ ಪಡಿತರ ಚೀಟಿಗೆ(ಕುಟುಂಬಕ್ಕೆ) 1ಕೆಜಿ ತೊಗರಿ ಬೇಳೆ ನೀಡಲಾಗುವುದು. ಆದ್ಯತಾ ಕುಟುಂಬಗಳ ಪ್ರತಿ ಸದಸ್ಯರಿಗೆ 10ಕೆಜಿ ಅಕ್ಕಿ ಮತ್ತು ಪ್ರತಿ ಪಡಿತರ ಚೀಟಿಗೆ(ಕುಟುಂಬಕ್ಕೆ) 1ಕೆಜಿ ತೊಗರಿ ಬೇಳೆಯನ್ನು ಉಚಿತವಾಗಿ ವಿತರಿಸಲಾಗುವದು ಎಂದು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

bangla ire

ಐರ್ಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಸೋಲು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

e cigerette

ವಿದೇಶಿ ಸಿಗರೇಟ್‌ ವಶ

ಮತ ಜಾಗೃತಿ; ಟೀಕೆ ವೈಯಕ್ತಿಕ ಮಟ್ಟಕ್ಕೆ ಹೋಗಬಾರದು

ಮತ ಜಾಗೃತಿ; ಟೀಕೆ ವೈಯಕ್ತಿಕ ಮಟ್ಟಕ್ಕೆ ಹೋಗಬಾರದು

arrest

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಸೆರೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

sss

ತಂದೆಯ ಸಾವಿನ ದುಃಖದಲ್ಲೂ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದ ಮಗಳು

shashikala-jolle

ನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್

ಸ್ವಾತಂತ್ರ್ಯ ಹೋರಾಟದಲ್ಲಿ ರಂಗಭೂಮಿ ಪಾತ್ರ ಮುಖ್ಯ; ಅಜಿತ ವಾರಕರಿ

ಸ್ವಾತಂತ್ರ್ಯ ಹೋರಾಟದಲ್ಲಿ ರಂಗಭೂಮಿ ಪಾತ್ರ ಮುಖ್ಯ; ಅಜಿತ ವಾರಕರಿ

b-bommai

ಬಿಜೆಪಿ ಶಾಸಕರಿಗೆ ಡಿಕೆ ಶಿವಕುಮಾರ್ ಟಿಕೆಟ್ ಆಮಿಷ: ಸಿಎಂ ಬೊಮ್ಮಾಯಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

bangla ire

ಐರ್ಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಸೋಲು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

e cigerette

ವಿದೇಶಿ ಸಿಗರೇಟ್‌ ವಶ