ಪತಿ-ಪತ್ನಿಯ ಹೊಂದಾಣಿಕೆಯೇ ಜೀವನ: ಕುಲಕರ್ಣಿ

ಸ್ವಪ್ರತಿಷ್ಠೆಯಿಂದ ಕೇಳದವರಂತೆ ನಟನೆ ಮಾಡುತ್ತಾರೆ ಅಷ್ಟೇ

Team Udayavani, Nov 16, 2022, 6:36 PM IST

ಪತಿ-ಪತ್ನಿಯ ಹೊಂದಾಣಿಕೆಯೇ ಜೀವನ: ಕುಲಕರ್ಣಿ

ಬೆಳಗಾವಿ: ನಾನೇಕೆ ಮಡದಿ ಮಾತನ್ನು ಕೇಳಬೇಕೆಂಬ ಅಹಂ ಬಿಟ್ಟು. ಸಾಮರಸ್ಯದ ಬದುಕಿಗೆ ಬೇಕಾಗುವಷ್ಟು ಮಡದಿ ಮಾತನ್ನು ಕೇಳಬೇಕು. ಯಾವ ಮಾತನ್ನು ಕೇಳಬೇಕು, ಕೇಳಬಾರದೆಂಬ ಪ್ರಜ್ಞೆ ಪತಿಯಲ್ಲಿರಬೇಕು. ಪತ್ನಿಯೂ ಸಹ ಎಲ್ಲ ಮಾತನ್ನು ಪತಿ ಕೇಳಲೇಬೇಕೆಂಬ ಹಠವಿರಬಾರದು ಒಟ್ಟಿನಲ್ಲಿ ಪತಿ, ಪತ್ನಿಯರ ನಡುವಿನ ಹೊಂದಾಣಿಕೆಯೇ ಜೀವನ ಎಂದು ಪ್ರೊ. ಜಿ. ಕೆ. ಕುಲಕರ್ಣಿ ಹೇಳಿದರು.

ನಗರದ ಹಾಸ್ಯಕೂಟದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಿಂದವಾಡಿಯ ಐ.ಎಮ್‌.ಇ.ಆರ್‌. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಡದಿ ಮಾತು ಕೇಳಬೇಕೆ? ಎಂಬ ಹರಟೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಲ್‌. ಎಸ್‌. ಶಾಸ್ತ್ರಿ ಅವರು, ಮಡದಿ ಮಾತು ಕೇಳಬೇಕೆ ಎನ್ನುವ ಹರಟೆಯಲ್ಲಿ ನಮಗೆ ಸಿಗುವುದು ಅರ್ಧಸತ್ಯ. ಪತಿ ಪತ್ನಿ ನಡುವಿನ ನಗೆಹನಿಗಳು ನಮಗೆ ಧಾರಾಳವಾಗಿ ಸಿಗುತ್ತವೆ. ಪತಿ ಪತ್ನಿಯರ ನಡುವಿನ ನಂಬಿಕೆಯೇ ಜೀವನ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಎಂ. ಎಸ್‌ .ಇಂಚಲ ಮಾತನಾಡಿ, ಸಂಸಾರ ಸಾಗರ ಸುಗಮವಾಗಿ ಸಾಗಲು ಸಂಸಾರ ಸಸಾರವಾಗಲು ತೆಪ್ಪಗಿರಬೇಕು, ಮಡದಿ ಮಾತನ್ನು ಕೇಳಲೇ ಬೇಕು ಎಂದು ಹೇಳಿದರು.

ಎಲ್ಲರೂ ಮಡದಿ ಮಾತನ್ನು ಕೇಳುವವರೇ, ಸ್ವಪ್ರತಿಷ್ಠೆಯಿಂದ ಕೇಳದವರಂತೆ ನಟನೆ ಮಾಡುತ್ತಾರೆ ಅಷ್ಟೇ. ಮನೆ ನಂದಾದೀಪ ಬೆಳಗಲು ಬಂದಿರುವ ಮಡದಿ ಮಾತು ಕೇಳುವುದು ಅತ್ಯವಶ್ಯ. ವರನಟ ಡಾ. ರಾಜಕುಮಾರು, ಇನ್ಫೊಧೀಸಿಸ್‌ ನಾರಾಯಣಮೂರ್ತಿ ಮುಂತಾದ ಖ್ಯಾತನಾಮರ ಯಶಸ್ಸಿನ ಹಿಂದಿರುವ ಶಕ್ತಿಯೆಂದರೆ ಅವರ ಪತ್ನಿಯರು. ಇವರು ಯಾವ ಅಹಂಗೆ ಒಳಗಾಗದೇ ಮಡದಿ ಮಾತು ಕೇಳಿದ್ದರಿಂದಲೇ ಇಷ್ಟೆಲ್ಲ ಸಾಧಿ ಸಲು ಸಾಧ್ಯವಾಯಿತು ಎಂದು
ಗುಂಡೇನಟ್ಟಿ ಮಧುಕರ, ಎಂ. ಬಿ. ಹೊಸಳ್ಳಿ, ಅನುರಾಧಾ ಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಗಂಡನಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಮಡದಿ ಮಾತು ಕೇಳಿ ತನ್ನ ವ್ಯಕ್ತಿತ್ವ ಏಕೆ ಹಾಳು ಮಾಡಿಕೊಳ್ಳಬೇಕು. ಮಾತು ಕೇಳುವುದರಿಂದ ಮನೆಯಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯೇ ಹೆಚ್ಚು. ಜೀವನದಲ್ಲಿ ಸಾಧಿಸಲು ಮಡದಿ ಮಾತು ಕೇಳಲೇಬೇಕೆಂದಿಲ್ಲ ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮೋದಿ, ವಾಜಪೆಯಿ, ಕಲಾಂ ಮುಂತಾದವರು. ಅದಕ್ಕಾಗಿ ಮಡದಿ ಮಾತನ್ನು ಕೇಳಬಾರದೆಂದು ಜಿ. ಎಸ್‌. ಸೋನಾರ, ಅಶೋಕ ಮಳಗಲಿ, ಡಾ. ಶೈಲಜಾ ಕುಲಕರ್ಣಿ ತಮ್ಮ ವಾದ ಮಂಡಿಸಿದರು. ಧನಲಕ್ಷ್ಮೀ ಪಾಟೀಲ ಪ್ರಾರ್ಥಿಸಿದರು. ವಿಜಯಕುಮಾರ ಹಣ್ಣಿಕೇರಿ ಸ್ವಾಗತಿಸಿದರು. ಅರವಿಂದ ಹುನಗುಂದ ನಿರೂಪಿಸಿದರು.

ಟಾಪ್ ನ್ಯೂಸ್

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

1-scsad

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ

police crime

Shivamogga ಬಂಧಿಸಲು ತೆರಳಿದ್ದ ವೇಳೆ ದಾಳಿ; ಆರೋಪಿಗೆ ಪೊಲೀಸರ ಗುಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsdasd

Belagavi-ದೆಹಲಿ, ಶಿರಡಿಗೆ ವಿಮಾನ ಸಂಚಾರ ಆರಂಭಿಸಿ

3-sathish-jarakoholi

Congress Guarantee ಘೋಷಣೆಯಿಂದ ಬಿಜೆಪಿಗೆ ಆತಂಕ: ಸಚಿವ ಸತೀಶ್‌ ಜಾರಕಿಹೊಳಿ

ಉಗರಗೋಳ: ಸಂಪ್ರದಾಯ-ಸಂಸ್ಕೃತಿ ಉಳಿಸುವ ಜಾತ್ರೆಗಳು

ಉಗರಗೋಳ: ಸಂಪ್ರದಾಯ-ಸಂಸ್ಕೃತಿ ಉಳಿಸುವ ಜಾತ್ರೆಗಳು

ಬೆಳಗಾವಿ: 2000 ನೋಟು ಬದಲಿಸಿ ವಂಚಿಸುವ ಗ್ಯಾಂಗ್‌ ಬಂಧನ

ಬೆಳಗಾವಿ: 2000 ನೋಟು ಬದಲಿಸಿ ವಂಚಿಸುವ ಗ್ಯಾಂಗ್‌ ಬಂಧನ

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್‌

ಬೆಳಗಾವಿ: ತೆಲಸಂಗ ಆಸತ್ರೆಯಲ್ಲಿ ಉಪಯೋಗಕ್ಲಿಲ್ಕ ಬೋರ್‌ವೆಲ್‌

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ