Udayavni Special

ಸಂಕಷ್ಟದಲ್ಲಿ ಬಡವರಿಗೆ ಬಂಧುವಾದ “ಬೆನಕೆ’

ಹಸಿದವರಿಗೆ ಅನ್ನದ ಸೇವೆ! ­ರೋಗಿಗಳಿಗೆ ಎರಡೊತ್ತು ಊಟ­! ಸಾವಿರಾರು ಜನರಿಗೆ ದಿನಸಿ ಕಿಟ್‌

Team Udayavani, May 28, 2021, 7:49 PM IST

273626bgv-11a

ವರದಿ: ಭೈರೋಬಾ ಕಾಂಬಳೆ

ಬೆಳಗಾವಿ: ಲಾಕ್‌ಡೌನ್‌ನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಕ್ಷೇತ್ರದ ಜನರಿಗೆ ಶಾಸಕ ಅನಿಲ್‌ ಬೆನಕೆ ಅವರು ಸಹಾಯ ಮಾಡುತ್ತ ಬಂದಿದ್ದು, ಕಷ್ಟ ಎಂದು ಹೇಳಿಕೊಂಡು ಯಾರೇ ಬಂದರೂ ಸ್ಪಂದಿಸಿದ್ದಾರೆ.

ಹಗಲಿರುಳೆನ್ನದೇ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದ ತುಂಬೆಲ್ಲಾ ಸುತ್ತುತ್ತಿದ್ದಾರೆ. ಜನರಿಗೆ ಒಂದಿಲ್ಲೊಂದು ಸಹಾಯ ಮಾಡುತ್ತಿದ್ದಾರೆ. ಕೊರೊನಾ ಮೊದಲನೇ ಅಲೆ ಅಪ್ಪಳಿಸಿದಾಗ ಸರ್ಕಾರದ ನೆರವು ಕೇಳುವ ಮೊದಲು ತಾವೇ ನಿಂತು ಸಂಕಷ್ಟದಲ್ಲಿ ಭಾಗಿಯಾಗಿದ್ದರು. ಸಾವಿರಾರು ಬಡ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್‌ ಹಂಚಿದ್ದ ಅವರು ಈ ಬಾರಿಯೂ ಮತ್ತಷ್ಟು ಮುಂಚೂಣಿಯಲ್ಲಿ ನಿಂತುಕೊಂಡು ಕೊರೊನಾ ವಾರಿಯರ್‌ ಆಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ತಮ್ಮದೇ ಆದ ಯುವ ಪಡೆ ಕಟ್ಟಿಕೊಂಡು ಕ್ಷೇತ್ರದ ತುಂಬೆಲ್ಲಾ ಸುತ್ತುತ್ತಿದ್ದಾರೆ. ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಿ ಪರಿಹಾರ ನೀಡುತ್ತಿದ್ದಾರೆ.

ಹಸಿದವರಿಗೆ ಅನ್ನ ಸೇವೆ: ಉತ್ತರ ಕ್ಷೇತ್ರದಲ್ಲಿ ಜಿಲ್ಲಾಸ್ಪತ್ರೆ ಸೇರಿ ಅತಿ ಹೆಚ್ಚು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ಬರುತ್ತವೆ. ಜಿಲ್ಲೆಯ ಅನೇಕ ಕೊರೊನಾ ಸೋಂಕಿತರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರೊಂದಿಗೆ ಬರುವ ಸಂಬಂಧಿ ಕರು ಲಾಕ್‌ಡೌನ್‌ದಿಂದ ಊಟವಿಲ್ಲದೇ ನಿತ್ಯ ಪರಿತಪಿಸುವಂತಾಗಿದೆ. ಹೀಗಾಗಿ ಇವರ ನೆರವಿಗೆ ನಿಂತಿರುವ ಶಾಸಕ ಅನಿಲ್‌ ಬೆನಕೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ರೋಗಿಗಳ ಸಂಬಂಧಿಕರಿಗೆ ಅನ್ನ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ನಿರ್ಗತಿಕರಿಗೆ, ಬಡವರಿಗೆ ನಿಗದಿತ ವೇಳೆಗೆ ಆಹಾರ ಪಾಕೆಟ್‌ ತಲುಪಿಸುತ್ತಿದ್ದಾರೆ. ಚವಾಟ ಗಲ್ಲಿ, ಭಡಕಲ್‌ ಗಲ್ಲಿ, ಶಾಹೂ ನಗರ, ಕಣಬರ್ಗಿ, ಕಾಂಗಲಿ ಗಲ್ಲಿಯಲ್ಲಿ ಆಹಾರ ತಯಾರಿಸುತ್ತಿದ್ದಾರೆ. ತಮ್ಮ ಕಾರ್ಯಕರ್ತರ ಮೂಲಕ ವಾಹನದಲ್ಲಿ ತೆರಳಿ ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿನ ಉಟದ ಪಾಕೆಟ್‌ಗಳನ್ನು ನೀಡುತ್ತಿದ್ದಾರೆ.

ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಸಹಾಯ: ಸೋಂಕಿತರ ನೆರವಿಗೆ ನಿಂತು ನೊಂದವರ ಬಾಳಿಗೆ ಬೆಳಕಾಗಿರುವ ಶಾಸಕ ಅನಿಲ್‌ ಬೆನಕೆ ಐದು ಕಡೆಗೆ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆದಿದ್ದಾರೆ. ದೇವರಾಜ್‌ ಅರಸ್‌ ಹಾಸ್ಟೆಲ್‌, ಕುಮಾರಸ್ವಾಮಿ ಲೇಔಟ್‌, ಕೊಲ್ಲಾಪುರ ಸರ್ಕಲ್‌ ಬಳಿಯ ನ್ಪೋರ್ಟ್ಸ್ ಕ್ಲಬ್‌ನ ಎರಡು ಕೇಂದ್ರ ಹಾಗೂ ಕ್ಯಾಂಟೋನ್ಮೆಂಟ್‌ ಬೋರ್ಡ್‌ದಲ್ಲಿ ಕೋವಿಡ್‌ ಕೇರ್‌ ಕೇಂದ್ರ ತೆರೆದಿದ್ದು, ಇಲ್ಲಿ ಸೋಂಕಿತರಿಗೆ ಅಗತ್ಯ ಇರುವ ಸೌಲಭ್ಯ ಒದಗಿಸುತ್ತಿದ್ದಾರೆ. ಆಮ್ಲಜನಕ ಕೊರತೆಯಿಂದ ಬಳಲುವವರಿಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. 25 ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್‌ ಕಾನ್ಸಂಟ್ರೇಟರ್‌ ನೀಡಿದ್ದಾರೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಇದು ಅನುಕೂಲಕರವಾಗಿದೆ. 50 ಆಕ್ಸಿಜನ್‌ ಜಂಬೋ ಸಿಲಿಂಡರ್‌ಗಳನ್ನು ವಿತರಿಸಿದ್ದಾರೆ. ಕ್ಷೇತ್ರದ ತುಂಬೆಲ್ಲ ಒಟ್ಟು ಆರು ಆಂಬ್ಯುಲೆನ್‌ Õಗಳನ್ನು ನೀಡಿದ್ದಾರೆ. ಜತೆಗೆ 3-4 ತಂಡಗಳು ಕ್ಷೇತ್ರದ ಎಲ್ಲ ಪ್ರದೇಶಗಳಲ್ಲೂ ನಿತ್ಯವೂ ಸ್ಯಾನಿಟೈಸ್‌ ಮಾಡುತ್ತಿವೆ.

10 ಸಾವಿರ ಔಷಧ ಬಾಟಲಿ: ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕನೇರಿ ಮಠದಿಂದ ತಯಾರಿಸಿರುವ ಔಷ ಧ ಬಾಟಲಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕ್ಷೇತ್ರದ ತುಂಬೆಲ್ಲ 30 ಸಾವಿರ ಔಷ ಧ ಬಾಟಲಿಗಳನ್ನು ನೀಡುವ ಗುರಿ ಇಟ್ಟುಕೊಂಡಿರುವ ಶಾಸಕರು, ಈಗಾಗಲೇ 10 ಸಾವಿರ ಬಾಟಲಿಗಳನ್ನು ಹಂಚಿದ್ದಾರೆ. ಜತೆಗೆ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಇತರೆ ಸಣ್ಣಪುಟ್ಟ ಕಾಯಿಲೆ ಇರುವವರಿಗೆ ಈವರೆಗೆ 10 ಸಾವಿರ ಮಾತ್ರೆಗಳನ್ನು ನೀಡಿದ್ದಾರೆ. ಸಮರ್ಥ ನಗರ, ತಾನಾಜಿ ಗಲ್ಲಿ, ಫುಲಬಾಗ ಗಲ್ಲಿ, ಮಹದ್ವಾರ ರೋಡ್‌, ಸಂಭಾಜಿ ಗಲ್ಲಿ, ತಹಶೀಲ್ದಾರ ಗಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 6-7 ಸಾವಿರ ಜನರಿಗೆ ಮೊದಲ ಡೋಸ್‌ ಲಸಿಕೆ ಹಾಕಿಸುವಲ್ಲಿ ಶ್ರಮಿಸಿದ್ದಾರೆ. ಲಸಿಕೆ ನೀಡುವ ಜಾಗೃತಿ ಕಾರ್ಯ ನಿರಂತರವಾಗಿ ನಡೆಸಿದ್ದಾರೆ. ಕ್ಷೇತ್ರದಲ್ಲಿ ಕೋವಿಡ್‌ ಸಹಾಯವಾಣಿ ಕೇಂದ್ರದ ಮೂಲಕ ಜನರಿಗೆ ಸಹಾಯ ಮಾಡುತ್ತಿದ್ದಾರೆ. 4-5 ನಂಬರ್‌ಗಳ ಮೂಲಕ ಕ್ಟದಲ್ಲಿದ್ದವರ ನೆರವಿಗೆ ನಿಲ್ಲುತ್ತಿದ್ದಾರೆ.

ಟಾಪ್ ನ್ಯೂಸ್

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

tokyo olympics 2020 pv sindu wins bronze medal in tokyo olympics badminton

ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

j

ಪುರುಷರ ತಪ್ಪಿಗೆ ಮಹಿಳೆಯರಿಗೇಕೆ ಶಿಕ್ಷೆ? ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತ ನಟಿ ರಿಚಾ ಚಡ್ಡಾ

Pegasus is a spyware developed by NSO Group, an Israeli surveillance firm, that helps spies hack into phones.

ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಪೆಗಾಸಸ್ ಸ್ಪೈವೇರ್ ಕುರಿತು ನಿಮಗೆಷ್ಟು ತಿಳಿದಿದೆ..?

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನಾವಿಸ್ ಸಲಹೆ

ಹಾಲು ಖರೀದಿಗೆ ಕರ್ನಾಟಕದ ಮಾದರಿಯನ್ನೇ ಮಹಾರಾಷ್ಟ್ರದಲ್ಲೂ ಅನುಸರಿಸಲು KMFಗೆ ಫಡ್ನವೀಸ್ ಸಲಹೆ

fe

ಶಿಲ್ಪಾ ಶೆಟ್ಟಿ ಜೊತೆ ನಿಲ್ಲದ ಬಾಲಿವುಡ್ ಮಂದಿ ವಿರುದ್ಧ ನಿರ್ದೇಶಕ ಮೆಹ್ತಾ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

1-19

ರಸ್ತೆ ಒತ್ತುವರಿ ತೆರವಿಗೆ ಸೂಚನೆ

1-18

ಈಶ್ವರಪ್ಪ-ಸೋಮಲಿಂಗಪ್ಪ ಸಚಿವರಾಗಲಿ

1-16

ಮಾರ್ಗಸೂಚಿ ಉಲ್ಲಂಘನೆಗೆ ಕಠಿಣ ಕ್ರಮ

fgh

ಯಮಕನಮರಡಿಯಲ್ಲಿ ಮೂಕ ಜೋಡಿ ಗಟ್ಟಿ ಮೇಳ

MUST WATCH

udayavani youtube

ತನ್ನದೇ ಶಾಲೆ ಮುಂದೆ ವಿದ್ಯಾರ್ಥಿ ಹಸುಗಳ ಮಧ್ಯೆ! |

udayavani youtube

ಜುಲೈ ಮುಗಿದಿದೆ,ಇನ್ನೂ ಲಸಿಕೆ ಕೊರತೆ ನೀಗಿಲ್ಲ: ರಾಹುಲ್

udayavani youtube

ಭಾರತೀಯ ದೈನಂದಿನ ಚಟುವಟಿಕೆಯಲ್ಲಿ ಸಾಗಣಿ ಪಾತ್ರ ಅಮೂಲ್ಯವಾದದ್ದು ಹೇಗೆ ಗೋತ್ತಾ

udayavani youtube

ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

ಹೊಸ ಸೇರ್ಪಡೆ

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

1-19

ರಸ್ತೆ ಒತ್ತುವರಿ ತೆರವಿಗೆ ಸೂಚನೆ

1-18

ಈಶ್ವರಪ್ಪ-ಸೋಮಲಿಂಗಪ್ಪ ಸಚಿವರಾಗಲಿ

tokyo olympics 2020 pv sindu wins bronze medal in tokyo olympics badminton

ಕಂಚಿನ ಪದಕಕ್ಕೆ ಮುತ್ತಿಟ್ಟ ಸಿಂಧು

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

ಟೋಕಿಯೊ ಒಲಿಂಪಿಕ್ಸ್ : ಪಿವಿ ಸಿಂಧುಗೆ ಕಂಚಿನ ಪದಕ : ಪ್ರಧಾನಿ ಅಭಿನಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.