
ಮೂಡಲಗಿ: ಸಪ್ತಪದಿ ತುಳಿದ ಹತ್ತೆ ದಿನದಲ್ಲಿ ನವ ದಂಪತಿ ಅಪಘಾತದಲ್ಲಿ ಮೃತ್ಯು
ಬನಶಂಕರಿ ದೇವಿ ದರ್ಶನ ಪಡೆದು ಮರಳಿ ಮನೆಗೆ ತೆರಳುತ್ತಿದ್ದರು... !
Team Udayavani, Apr 1, 2023, 10:27 PM IST

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರ ಬಳಿ ಇರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿಗಗಳು ಸ್ಥಳದಲ್ಲೇ ಸಾವನ್ನಪಿದ್ದು, ಓರ್ವ ಮಹಿಳೆ ಹಾಗೂ ಓರ್ವ ಪುರಷ ಗಂಭೀರ ಗಾಯಗೊಂಡಿ ಘಟನೆ ಶನಿವಾರದ ಸಂಜೆ ನಡೆದಿದೆ.
ಮೃತರು ಮಹಾರಾಷ್ಟ್ರ ಮೂಲದವರಾಗಿದ್ದು ಇಂದ್ರಜೀತ್ ಮೋಹನ್ ಡಮ್ಮನಗಿ(27) ಕಲ್ಯಾಣಿ ಡಮ್ಮನಗಿ(24) ಎಂದು ಗುರುತಿಸಲಾಗಿದ್ದು, ಮೃತನ ತಂದೆ ತಾಯಿಯನ್ನು ಮೂಡಲಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹತ್ತು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಇಂದ್ರಜೀತ್ ಮತ್ತು ಕಲ್ಯಾಣಿ ಕುಟುಂಬದವರೊಂದಿಗೆ ಬದಾಮಿ ಬನಶಂಕರಿ ದೇವಿ ದರ್ಶನ ಪಡೆದು ಮರಳಿ ಮನೆಗೆ ತೆರಳುವಾಗ ಹಳ್ಳೂರ ಗ್ರಾಮದ ಗಾಂಧಿನಗರ ಬಳಿ ಸಕ್ಕರೆ ಕಾರ್ಖಾನೆಯ ಮಳ್ಳಿ ಸಾಗಿರುವ ಟ್ಯಾಂಕರ್ ಹಾಗೂ ಕಾರ್ ಮಧ್ಯೆ ಅವಘಡ ಸಂಭವಿಸಿದೆ.
ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.ಸ್ಥಳಕ್ಕೆ ಸಿಪಿಐ ಶ್ರೀಶೈಲ ಬ್ಯಾಕೂಡ ಹಾಗೂ ಪಿಎಸ್‌ಐ ಸೋಮೇಶ ಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
