ಕೆಎಂಎಫ್‌ನಿಂದ 200 ಹಾಸಿಗೆಗೆ ಆಕ್ಸಿಜನ್ ವ್ಯವಸ್ಥೆ
Team Udayavani, May 5, 2021, 2:47 PM IST
ಬೆಳಗಾವಿ: ರೈತರ ಜೀವನಾಡಿ ಆಗಿರುವ ಕರ್ನಾಟಕ ಹಾಲು ಮಹಾಮಂಡಳಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿತಿಳಿಸಿದರು.
ಬೆಂಗಳೂರಿನ ಕೆಎಂಎಫ್ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಅ ಧಿಕಾರಿಗಳ ಸಭೆಯಲ್ಲಿ ಈವಿಷಯ ತಿಳಿಸಿ, ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಕೊರೊನಾ ಸೋಂಕಿತರು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಅನುಕೂಲಕ್ಕಾಗಿ 200ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ.
ಬೆಡ್,ಸಿಲಿಂಡರ್ ಮತ್ತು ಆಕ್ಸಿಜನ್ ಉತ್ಪಾದಿಸಲುಸಾಮರ್ಥ್ಯವಿರುವ ಕಂಪನಿಯೊಂದಕ್ಕೆ ಟೆಂಡರ್‌ನೀಡಲಾಗುತ್ತಿದೆ. ಸೋಂಕಿತರಿಗೆ ಆಕ್ಸಿಜನ್ ಉಚಿñವಾಗಿ ನೀಡಲು ಯೋಜಿಸಿದ್ದು, ಸರ್ಕಾರಿ ಆಸ್ಪತ್ರೆ ಯೊಂದನ್ನುಗುರುತಿಸಿ ಅಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು. ಸೋಂಕಿತರಿಗೆ ಈ ಸೌಲಭ್ಯ ಸಂಪೂರ್ಣ ಉಚಿತವಾಗಿದ್ದು, ಕೊರೊನಾ ಸೋಂಕಿತರಿಗೆ ತಿಂಗಳೊಳಗೆ ಆಕ್ಸಿಜನ್ ಪೂರೈಲಾಗುವುದು ಎಂದರು.
ಕೆಎಂಎಫ್ ಪ್ರಸಕ್ತ 2020-21ನೇ ಸಾಲಿನಲ್ಲಿ 170ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ದಿನನಿತ್ಯ 81.50ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕೋವಿಡ್ ಸಂದರ್ಭ 28ಲಕ್ಷ ಲೀಟರ್ ಹಾಲನ್ನು ಹಾಲಿನ ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. 52 ಲಕ್ಷಲೀಟರ್ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನುಮಾರಾಟ ಮಾಡಲಾಗುತ್ತಿದೆ.
ಕೋವಿಡ್‌ನಂತಹಸಂದಿಗ್ಧ ಸಂದರ್ಭದಲ್ಲೂ ರೈತರಿಂದ ಹಾಲನ್ನು ತಪ್ಪದೇಸಂಗ್ರಹಿಸಲಾಗುತ್ತಿದೆ. ರೈತರಿಗೆ ಯಾವುದೇತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಕೆಎಂಎಫ್‌ನ ಎಲ್ಲ ನೌಕರವರ್ಗದವರಿಗೆ ವಿಮೆ ಸೌಲಭ್ಯ ಕಲ್ಪಿಸಿಕೊಡಲಾಗಿದೆಎಂದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರದಆದೇಶದನ್ವಯ ಹಾಲು-ಹಾಲಿನ ಉತ್ಪನ್ನಗಳ ನಂದಿನಿಮಾರಾಟ ಮಳಿಗೆಗಳನ್ನು ದಿನಪೂರ್ತಿ ತೆರೆಯಲುಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು-ಸಾರ್ವಜನಿಕರುಇದರ ಸದುಪಯೋಗ ಪಡೆಯಬೇಕು. ಮಾರಾಟಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದರಜತೆಗೆ ಮಾಸ್ಕ್ ಧರಿಸಬೇಕು.
ಕೋವಿಡ್ ನಿಯಮಗಳನ್ನುಕಡ್ಡಾಯವಾಗಿ ಪಾಲಿಸಿ ಸಹಕರಿಸುವಂತೆ ಕೆಎಂಎಫ್‌ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ರೈತರಲ್ಲಿ-ಗ್ರಾಹಕರಲ್ಲಿಮನವಿ ಮಾಡಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಪಶು ಸಂಗೋಪನೆ, ಮಾರುಕಟ್ಟೆ, ಗುಣನಿಯಂತ್ರಣ, ಅಭಿಯಂತರ, ಖರೀದಿ ವಿಭಾಗದಮುಖ್ಯಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಂ ಬೃಹತ್ ಸಮಾವೇಶ ಮಾಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಈ ದೇಶ ಯಾರೋ ಒಬ್ಬರ, ಅದಾನಿ ಸ್ವತ್ತಲ್ಲ : ಬೆಳಗಾವಿಯಲ್ಲಿ ರಾಹುಲ್ ಗಾಂಧಿ
ನಡ್ಡಾ ಅವರ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ?: ಖರ್ಗೆ ತಿರುಗೇಟು
ಉರಿಗೌಡ,ನಂಜೇಗೌಡ ಚಿತ್ರದ ವಿರುದ್ಧ ಹೋರಾಟಕ್ಕೆ ನಿರ್ಮಲಾನಂದ ಸ್ವಾಮೀಜಿ ಮುಂದಾಳತ್ವ ವಹಿಸಲಿ
ಕಾಂಗ್ರೆಸ್ “ಯುವ’ ಕಹಳೆ; ಇಂದು ಬೆಳಗಾವಿಯಲ್ಲಿ “ಯುವ ಕ್ರಾಂತಿ’ಗೆ ರಾಹುಲ್ ಗಾಂಧಿ ಚಾಲನೆ
MUST WATCH
ಹೊಸ ಸೇರ್ಪಡೆ
80,000 ಪೊಲೀಸರಿದ್ದರೂ ಅಮೃತಪಾಲ್ ಪರಾರಿಯಾಗಲು ಹೇಗೆ ಸಾಧ್ಯ? ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಹಾವೇರಿ: ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೊಲೀಸರು
ಕುರ್ಕಾಲು:ಯುವತಿ ನಾಪತ್ತೆ
ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್ ಚಿತ್ತ!
ಮನಸ್ಸಿದ್ದರಷ್ಟೇ ಸಾಲದು, ಓಡ್ತಾ ಇರಬೇಕು; ಬಾಲ ಇರ್ಬೇಕು, ಅಲ್ಲಾಡಿಸುತ್ತಿರಬೇಕು !