ಡಿಕೆಶಿ, ಯುವತಿ ಸೇರಿ ಸಿಡಿ ಗ್ಯಾಂಗ್ ಬಂಧಿಸಲು ರಮೇಶ ಜಾರಕಿಹೊಳಿ ಒತ್ತಾಯ

2023 ರ ಚುನಾವಣೆ ಸ್ಪರ್ಧೆ ಬಳಿಕ ರಾಜಕೀಯ ನಿವೃತ್ತಿ ಎಂದ ಜಾರಕಿಹೊಳಿ

Team Udayavani, Jan 30, 2023, 12:53 PM IST

ಡಿಕೆಶಿ, ಯುವತಿ ಸೇರಿ ಸಿಡಿ ಗ್ಯಾಂಗ್ ಬಂಧಿಸಲು ರಮೇಶ ಜಾರಕಿಹೊಳಿ ಒತ್ತಾಯ

ಬೆಳಗಾವಿ: ಸಿಡಿ ವಿಚಾರದಲ್ಲಿ ಷಡ್ಯಂತ್ರ ರೂಪಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆಶ್ರಯದಲ್ಲಿಯೇ ಆ ಯುವತಿ ಬೆಂಗಳೂರಿನಲ್ಲಿ ನೆಲೆಸಿದ್ದು, ಡಿಕೆಶಿ, ಯುವತಿ ಸೇರಿದಂತೆ ಸಿಡಿ ಗ್ಯಾಂಗ್ ಬಂಧಿಸುವಂತೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೂರಾರು ಜನರ ಸಿಡಿ ಇಟ್ಟುಕೊಂಡು ಷಡ್ಯಂತ್ರ ರೂಪಿಸಿರುವ ಮಹಾನಾಯಕ ಡಿ.ಕೆ.‌ಶಿವಕುಮಾರ ಅವರನ್ನು ಕೂಡಲೇ ಬಂಧಿಸಬೇಕು. ಪ್ರಕರಣದ ಸತ್ಯಾಸತ್ಯತೆ ಹೊರ ಬರಬೇಕು ಎಂದರು.

ಸುಮಾರು ಒಂದು ವರ್ಷದಿಂದ ಸುಮ್ಮನೆ ಕುಳಿತಿದ್ದೆ.‌ ಮಿಸ್ಟರ್  ಶಿವಕುಮಾರ್ ರಾಜಕೀಯ ಮಾಡಲು ನಾಲಾಯಕ್. ಒಬ್ಬ ವ್ಯಕ್ತಿ ಜೀವನ ಹಾಳು ಮಾಡಿ ರಾಜಕೀಯ ಮಾಡುವ ಡಿಕೆ ಶಿವಕುಮಾರ್ ರಾಜಕೀಯ ಮಾಡಲು ಅಯೋಗ್ಯ ವ್ಯಕ್ತಿ. ನಾನು ವೈಯಕ್ತಿಕ ಯಾರನ್ನು ದ್ವೇಷ ಮಾಡುವುದಿಲ್ಲ.  ನಾನು ಯಾವುದೇ ಸಿಡಿ ರಿಲೀಜ್ ಮಾಡಲ್ಲ. ಜಾರಕಿಹೊಳಿ ಯಾವುದೇ ಗಾಳಿಯಲ್ಲಿ ಗುಂಡು ಹಾರಿಸಲ್ಲ. ಡಿಕೆ ಶಿವಕುಮಾರ್ ಒಬ್ಬ ಮಹಿಳೆ ಮುಖಾಂತರ ನನ್ನ ಜೀವನ ಹಾಳು ಮಾಡಿದ್ದಾರೆ. ಶಿವಕುಮಾರ್ ಅವರ ಆಡಿಯೋ ಝಲಕ್ ತೋರಿಸುತ್ತೇನೆ. ಸಿಡಿ ರಿಲೀಜ್ ಮಾಡುವುದಿಲ್ಲ. ಡಿ.ಕೆ.‌ ಶಿವಕುಮಾರ ಸಾವಿರಾರು ಕೋಟಿ ಮಾಲೀಕ. ಸಿಡಿ ಲೇಡಿ ಹಾಗೂ ಅವರಿಗೆ ಸಹಕರಿಸಿದ ಎಲ್ಲರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆಗೆ ಹೆದರಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ

ಸಿಡಿ ಲೇಡಿ ಅರೆಸ್ಟ್ ಮಾಡಿಸಿದರೆ ಎಲ್ಲಾ ಹೊರಗೆ ಬರುತ್ತದೆ.  ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಹಿಳಾ ಪದಾಧಿಕಾರಿ ಮನೆಯಲ್ಲಿ ಆ ಲೇಡಿ ಇದ್ದಾಳೆ. ಅವಳನ್ನು ಅರೆಸ್ಟ್ ಮಾಡಿ ಎಲ್ಲಾ ಹೊರಗೆ ಬರುತ್ತದೆ.  ಡಿಕೆಶಿ ಅಂತವರು ಇರುವಾಗ ನಾವು ರಾಜಕೀಯ ಮಾಡಲು ಆಗಲ್ಲ. 2023 ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ಈ ಚುನಾವಣೆ ನನ್ನದು ಕೊನೆಯದು. ಆದಾದ ಬಳಿಕ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.

ಡಿಕೆ ಶಿವಕುಮಾರ ಅವರು ಹಾಸ್ಪಿಟಲ್ ಗೆ ಅಡ್ಮಿಟ್ ಆದಾಗ ನೋಡೋಕೆ ಹೋಗಿದ್ದೆ. ಆವಾಗ ಡಿಕೆ ಅವರ ಪತ್ನಿ ಉಷಾ  ಅವರು ಕಾಂಗ್ರೆಸ್ ಪಕ್ಷ ಬಿಡದಂತೆ ಬೇಡಿಕೊಂಡಿದ್ದರು.  ಗ್ರಾಮೀಣ ಶಾಸಕಿಯಿಂದ ಪಕ್ಷ ಹಾಳಾಗಿದೆ ಎಂದು ಲಕ್ಷ್ಮಿ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಸಿಬಿಐ ತಂಡ ಆದಷ್ಟು ಈ ಸಿಡಿ ತಂಡವನ್ನು ಬಂದಿಸಬೇಕು. ಒಂದು ಅವಾಚ್ಯ ಶಬ್ದವನ್ನು ಎಡಿಟ್ ಮಾಡಿ ಕಿತ್ತೂರು ಚನ್ನಮ್ಮ ಹೋಲಿಸಿ ಜಾತಿ ಮದ್ಯೆ ಜಗಳ ಹಚ್ಚುವ ಷಡ್ಯಂತ್ರ ಮಾಡಿದ್ದಾರೆ. ಸಿಡಿ ಮಾಡಿ ಹಲವು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಶಿವಕುಮಾರ್ ಅವರು ಬ್ಲಾಕ್ ಮನಿ ಬಗ್ಗೆ ಸಿಬಿಐ ಮೂಲಕ ತನಿಖೆ ನಡೆಸಬೇಕು ಎಂದರು.

ಟಾಪ್ ನ್ಯೂಸ್

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

ಎಚ್‌ಡಿಕೆ ಕಾಲದಲ್ಲೂ ತೈಲ ದರ ಏರಿಸಿದ್ದರು: ಸಿದ್ಧರಾಮಯ್ಯ

1-wewwqewq

T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಕೆಪಿಸಿಸಿ ಸಭೆಯಲ್ಲಿ ವಿವಿಧ ಅಕಾಡೆಮಿ ಅಧ್ಯಕ್ಷರು ಭಾಗಿ: ಸುನಿಲ್‌

KPCC ಸಭೆಯಲ್ಲಿ ವಿವಿಧ ಅಕಾಡೆಮಿ ಅಧ್ಯಕ್ಷರು ಭಾಗಿ: ಸುನಿಲ್‌

1-asasasa

Darshan; ರೇಣುಕಾಸ್ವಾಮಿ ಕೇಸ್: ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

KSRTC, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

police crime

ಗೇಮಿಂಗ್‌ ಜೋನ್‌ ದುರಂತ: ಇನ್ನೂ ಇಬ್ಬರು ಪೊಲೀಸ್‌ ವಶಕ್ಕೆ

police USA

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

arrested

ಸಲ್ಮಾನ್‌ ಮನೆ ಹೊರಗೆ ಗುಂಡಿನ ದಾಳಿ: ರಾಜಸ್ಥಾನದ ವ್ಯಕ್ತಿ ಸೆರೆ

baby

UP ಕ್ಷುಲ್ಲಕ ಕಾರಣಕ್ಕೆ 2 ವರ್ಷದ ಮಗಳನ್ನು ಕಾಲುವೆಗೆಸೆದ ತಂದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.