ಗುರು-ಶಿಷ್ಯರ ಸಮಾಗಮ

¬ಕೋವಿಡ್ ಹಿಮ್ಮೆಟ್ಟಿಸಿ ಶಾಲೆಯತ್ತ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

Team Udayavani, Jan 2, 2021, 1:55 PM IST

ಗುರು-ಶಿಷ್ಯರ ಸಮಾಗಮ

ಬೆಳಗಾವಿ: 10 ತಿಂಗಳಿಂದ ಗುರು-ಶಿಷ್ಯರನ್ನು ದೂರು ಮಾಡಿದ್ದ ಕೋವಿಡ್ ಎಂಬ ಮಹಾಮಾರಿಗೆ ಸಡ್ಡು ಹೊಡೆದು ಮುಖಾಮುಖೀಯಾಗಿ ಯೋಗ ಕ್ಷೇಮ ವಿಚಾರಿಸಿಕೊಳ್ಳುವ ಮೂಲಕ ಋಣಾನುಬಂಧ ಗಟ್ಟಿಗೊಳಿಸಿಕೊಂಡ ಪ್ರಸಂಗ ಹೊಸ ವರುಷದಂದು ಪ್ರತಿಯೊಂದು ಶಾಲೆಗಳಲ್ಲಿ ಕಂಡು ಬಂತು.

ಕೋವಿಡ್ ಮಹಾಮಾರಿಗೆ ಭಯಭೀತರಾಗಿ ಮನೆ ಹಿಡಿದು ಕುಳಿತುಕೊಂಡಿದ್ದ ಮಕ್ಕಳು ಶಾಲೆಗಳಲ್ಲಿ ಹಾಜರಾದರು. ಶುಕ್ರವಾರ ಹೊಸ ವರ್ಷದಿಂದ ಆರಂಭಗೊಂಡ ಶಾಲೆಗಳಲ್ಲಿ ಆತಂಕದಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದ್ದರೂ ಮಕ್ಕಳಲ್ಲಿ ಉತ್ಸಾಹಮಾತ್ರ ಕಡಿಮೆ ಆಗಿರಲಿಲ್ಲ. 10 ತಿಂಗಳ ಒಂದಾದೆವು ಎಂಬ ಸಾರ್ಥಕ ಭಾವ ಎಲ್ಲರಲ್ಲೂ ಕಂಡು ಬಂತು. ಕೋವಿಡ್ ಹಾವಳಿ ಇಳಿಮುಖವಾಗುತ್ತಿದ್ದಂತೆ ಸರ್ಕಾರ ಶಾಲೆ ಆರಂಭಕ್ಕೆ ಹಸಿರು ನಿಶಾನೆ ತೋರಿದ್ದು, ಹೀಗಾಗಿ ಕೋವಿಡ್‌ ನಿಯಮವಾಳಿಗಳಂತೆ ಶಾಲೆಗಳಲ್ಲೂ ಆರಂಭಿಸಲಾಗಿತ್ತು. ಬೆಳಗಾವಿ ಹಾಗೂಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದಿದ್ದರು.

ಮೊದಲ ದಿನವೇ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಮಾಗಮಗೊಂಡರು. ಪರಸ್ಪರ ಯೋಗ ಕ್ಷೇಮ ವಿಚಾರಿಸಿಕೊಂಡರು. ಪ್ರತಿಯೊಂದು ಶಾಲೆಗಳಲ್ಲಿ ತಳಿರು ತೋರಣಗಳಿಂದ, ರಂಗೋಲಿ ಹಾಕಿ ಸಿಂಗರಿಸಿವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಎಲ್ಲ ಶಾಲೆಗಳಲ್ಲಿ ಸಕಲ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಎಲ್ಲ ರೀತಿಯ ಸುರಕ್ಷಾ ಕ್ರಮ ಕೈಗೊಳ್ಳಲಾಗಿತ್ತು. ಎಲ್ಲ ತರಗತಿಗಳಲ್ಲಿಯೂ ಶಾಲಾ ಸಿಬ್ಬಂದಿ ಸ್ಯಾನಿಟೈಸ್‌ ವ್ಯವಸ್ಥೆ ಮಾಡಲಾಗಿತ್ತು.

ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ತರಗತಿಗೆ ಕಳುಹಿಸಿದರು. ಶಾಲಾ ಮೈದಾನಗಳಲ್ಲಿ ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಯಿತು. ಸಾಮಾಜಿಕಅಂತರ ಕಾಯ್ದುಕೊಳ್ಳಲು ಒಂದು ತರಗತಿಯಲ್ಲಿ 15-20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2381, ಚಿಕ್ಕೋಡಿಶೈಕ್ಷಣಿಕ ಜಿಲ್ಲೆಯಲ್ಲಿ 3166 ಶಾಲೆಗಳು ಪುನರ್‌ ಆರಂಭಗೊಂಡಿದ್ದವು. ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 8 ಲಕ್ಷ 93 ಸಾವಿರ 653 ವಿದ್ಯಾರ್ಥಿಗಳಿದ್ದರು, ಶೇ. 50ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.

ಶಾಲೆಗೆ ಆಗಮಿಸುವ ಶಿಕ್ಷಕರಿಗೂ ಕಡ್ಡಾಯ ಕೋವಿಡ್‌ ಟೆಸ್ಟ್‌ ಮಾಡಲಾಗಿತ್ತು. ಬೆಳಗಾವಿ ಜಿಲ್ಲೆಯಾದ್ಯಂತ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೊಸ ವರ್ಷದ ಮೊದಲ ದಿನವೇ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸಿ ವಿದ್ಯಾರ್ಥಿಗಳ ಪ್ರತಿಕ್ರಿಯೆ ಕಂಡು ಶಿಕ್ಷಣ ಇಲಾಖೆ ಸಿಬ್ಬಂದಿ ಖುಷಿಪಟ್ಟರು.

ಸಿಹಿ ತಿನ್ನಿಸಿ ಮಕ್ಕಳಿಗೆ ಸ್ವಾಗತ :

ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಸಿಹಿ ಪದಾರ್ಥ ನೀಡಿ ಸ್ವಾಗತಿಸಲಾಯಿತು. ಮಕ್ಕಳು ಒಳ ಬರುತ್ತಿದ್ದಂತೆ ಶಿಕ್ಷಕರು ಸಿಹಿ ತಿನಿಸು ನೀಡಿದರು. ಶಾಲೆಗಳಲ್ಲಿ ಬಲೂನ್‌ಗಳನ್ನು ಕಟ್ಟಿ, ತಳೀರು ತೋರಣಗಳಿಂದ ಸಿಂಗರಿಸಲಾಗಿತ್ತು. ಮೊದಲ ದಿನ ಪಾಠಕ್ಕಿಂತ ಮಕ್ಕಳ ಸಂತಸ-ಉತ್ಸಾಹದಲ್ಲಿಯೇ ದಿನ ಕಳೆಯಿತು. ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿದ್ದರು. ಸಮವಸ್ತ್ರ ಧರಿಸಿ ಶಾಲೆಗೆ ಆಗಮಿಸಿದ್ದರು.

ವಿದ್ಯಾರ್ಥಿಗಳು ಮೊದಲ ದಿನ ಬಹಳ ಉತ್ಸಾಹದಿಂದ ಶಾಲೆಗೆ ಬಂದಿದ್ದರು. 10 ತಿಂಗಳ ನಂತರ ಶಾಲೆಗೆ ಬಂದಾಗ ಅವರನ್ನು ನೋಡುವ ಸೌಭಾಗ್ಯ ನಮ್ಮೆಲ್ಲರಲ್ಲಿಯೂ ಇತ್ತು. ಕೋವಿಡ್ ಎಂಬ ಮಹಾಮಾರಿಯ ಆತಂಕವಿಲ್ಲದೇ, ಭಯಭೀತರಾಗದೇ ಭಾಗವಹಿಸಿದ್ದರು. ಸಿಹಿ ತಿನಿಸು ನೀಡಿ ಮಕ್ಕಳನ್ನು ಸ್ವಾಗತಿಸಿಕೊಂಡಿದ್ದು ವಿಶೇಷವಾಗಿತ್ತು. ಪ್ರವೀಣಕುಮಾರ ಅಂಗಡಿ, ಶಿಕ್ಷಕರು, ಪ್ರೌಢಶಾಲೆ ಮಾಸ್ತಮರ್ಡಿ.

 

ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Gurgaon man arrested bought 5 Mercedes cars in 3 Years

ಹೀಗೊಂದು ಹಗರಣ: ಮೂರು ವರ್ಷದಲ್ಲಿ ಐದು ಮರ್ಸಿಡಿಸ್ ಕಾರು ಖರೀದಿ ಮಾಡಿದಾತನ ಬಂಧನ!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.19.59ಕ್ಕೆ ಏರಿಕೆ

ಭಾರತ: 24ಗಂಟೆಯಲ್ಲಿ 2.86 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

james

ಹೊರಬಂತು ‘ಜೇಮ್ಸ್’ ಹೊಸ ಲುಕ್‌ ಪೋಸ್ಟರ್‌

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ಬ್ರಿಟನ್ ನಲ್ಲಿ ಕೋವಿಡ್ ನಿರ್ಬಂಧಗಳ ತೆರವು: ಇನ್ನು ಮಾಸ್ಕ್ ಧಾರಣೆ ಕಡ್ಡಾಯವಲ್ಲ!

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ನ್ಯಾಯಯುತವಾಗಿ ಮಹದಾಯಿ ನೀರು ನಮಗೆ ಸಿಗಬೇಕು: ಎಂ.ಬಿ ಪಾಟೀಲ್

ನ್ಯಾಯಯುತವಾಗಿ ಮಹದಾಯಿ ನೀರು ನಮಗೆ ಸಿಗಬೇಕು: ಎಂ.ಬಿ ಪಾಟೀಲ್

belagavi

ಮಕ್ಕಳ ಭವಿಷ್ಯ ರೂಪಿಸಲು ಪುಸ್ತಕ ಸಹಕಾರಿ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

6marakada

ಮರಕಡ ಪರಾಶಕ್ತಿ ಕ್ಷೇತ್ರದ ಶ್ರೀ ನರೇಂದ್ರನಾಥ ಸ್ವಾಮೀಜಿ ವಿಧಿವಶ

Gurgaon man arrested bought 5 Mercedes cars in 3 Years

ಹೀಗೊಂದು ಹಗರಣ: ಮೂರು ವರ್ಷದಲ್ಲಿ ಐದು ಮರ್ಸಿಡಿಸ್ ಕಾರು ಖರೀದಿ ಮಾಡಿದಾತನ ಬಂಧನ!

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ; ಜ.27ರಂದು ಲಾಭಗಳಿಸಿದ ಷೇರು ಯಾವುದು?

5gandhi

ಗಾಂಧೀಜಿ-ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ

4covid

ಸರ್ಕಾರದ ನಿರ್ದೇಶನ ಪಾಲಿಸಿ, ಕೋವಿಡ್‌ ನಿಯಂತ್ರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.