ಬೆಳಗಾವಿಯಲ್ಲಿ ಪೊಲೀಸರ ಕಣ್ಣುತಪ್ಪಿಸಿ ಭಗವಧ್ವಜ ಹಾರಿಸಿದ ಶಿವಸೇನೆ ಮುಖಂಡರು!
Team Udayavani, Jan 22, 2021, 7:40 AM IST
ಬೆಳಗಾವಿ: ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ತೆರಿವಿಗೆ ಮುಂದಾಗಿದ್ದ ಮಹಾರಾಷ್ಟ್ರದ ಶಿವಸೇನೆ ಮುಖಂಡರು ಪೊಲೀಸರ ಕಣ್ಣು ತಪ್ಪಿಸಿ ಕದ್ದುಮುಚ್ಚಿ ಬೆಳಗಾವಿ ತಾಲೂಕಿನ ಕೋನೇವಾಡಿ ಗ್ರಾಮಕ್ಕೆ ಅಕ್ರಮವಾಗಿ ನುಗ್ಗಿ ಭಗವಧ್ವಜ ಹಾರಿಸಿದ್ದಾರೆ.
ಬೆಳಗಾವಿ ಸಮೀಪದ ಕೊಗನೊಳ್ಳಿ ಹಾಗೂ ಶಿನೋಳಿ ಚೆಕ್‌ಪೋಸ್ಟ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಾಪಸ್ಸು ಕಳುಹಿಸಿದ್ದರು. ಕರ್ನಾಟಕ ಪ್ರವೇಶಿಸದಂತೆ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸರ ಕಣ್ಣು ತಪ್ಪಿಸಿ ಅನ್ಯ ಮಾರ್ಗದಿಂದ ಶಿವಸೇನೆ ಮುಖಂಡರು ತುರಮುರಿ ಸಮೀಪದ ಕೋನೇವಾಡಿ ಗ್ರಾಮದ ಶ್ರೀ ಬ್ರಹ್ಮಲಿಂಗ ತರುಣ ಯುವಕ ಮಂಡಳದ ನಾಮಫಲಕದ ಎದುರು ಭಗವಧ್ವಜ ಹಚ್ಚಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಶಿವಸೇನೆಯ ಮುಖಂಡರು ಬೆಳಗಾವಿ ಪ್ರವೇಶಿಸಲು ಎಷ್ಟೇ ಪ್ರಯತ್ನಿಸಿದರೂ ಶಿನ್ನೋಳಿಯಲ್ಲಿಯೇ ಎಲ್ಲರನ್ನೂ ಪೊಲೀಸರು ತಡೆ ಹಿಡಿದಿದ್ದರು. ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ಸಾಗಿದ್ದರು. ಆದರೆ ಗಡಹಿಂಗ್ಲಜ್‌ನ ಶಿವಸೇನೆ ಮುಖಂಡರಾದ ಸುನೀಲ್ ಶಿಂತ್ರೆ, ಸಂಗ್ರಾಮ ಕುಪೇಕರ, ಪ್ರಭಾಕರ ಖಾಂಡೇಕರ ಸೇರಿದಂತೆ ಅನೇಕರು ಸೇರಿ ಭಗವಧ್ವಜ ಹಚ್ಚಿ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
IPL ತಾಣ; ಫ್ರಾಂಚೈಸಿಗಳಿಗೆ ಅಸಮಾಧಾನ : ಮುಂಬಯಿ, ಬೆಂಗಳೂರು ಸೇರಿದಂತೆ 6 ತಾಣಗಳಲ್ಲಿ ಪಂದ್ಯ?
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ : ಲೀಗ್ ಹಂತದಲ್ಲಿ ಮುಂಬಯಿ ಅಜೇಯ
ಐಪಿಎಲ್ಗೂ ಮುನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ?
ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ
ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ