ನನಗೆ ಆಸ್ತಿಯ ಆಸೆಯಿಲ್ಲ, ಪತ್ನಿಯ ಅರೋಪಗಳಲ್ಲಿ ಹುರುಳಿಲ್ಲ: ಚಿತ್ರ ಸಾಹಿತಿ ಕೆ.ಕಲ್ಯಾಣ್

ಮಧ್ಯರಾತ್ರಿ ಲಿಂಬೆಹಣ್ಣು ಇಟ್ಟು ಪೂಜೆ ಮಾಡುತ್ತಿದ್ದರು.. ನಂತರ ನನ್ನ ಪತ್ನಿ ಬದಲಾದಳು..!

Team Udayavani, Oct 4, 2020, 12:52 PM IST

ನನಗೆ ಆಸ್ತಿಯ ಆಸೆಯಿಲ್ಲ, ಪತ್ನಿಯ ಅರೋಪಗಳಲ್ಲಿ ಹುರುಳಿಲ್ಲ: ಚಿತ್ರ ಸಾಹಿತಿ ಕೆ.ಕಲ್ಯಾಣ್

ಬೆಳಗಾವಿ: ನಾನು ಹಾಗೂ ನನ್ನ ಪತ್ನಿ ಚೆನ್ನಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಆದಷ್ಟು ಬೇಗ ಇಬ್ಬರೂ ಒಂದಾಗಿ ಜನರ ಮುಂದೆ ಬರುತ್ತೇವೆ ಎಂದು ಖ್ಯಾತ ಚಿತ್ರ ಸಾಹಿತಿ ಕೆ ಕಲ್ಯಾಣ್ ಹೇಳಿದರು.

ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸಾರ ಎಂದ ಮೇಲೆ ಸಣ್ಣಪುಟ್ಟ ಮನಸ್ತಾಪ ಇದ್ದೇ ಇರುತ್ತವೆ. ಆದರೆ ಪರಸ್ಪರ ಅರ್ಥಮಾಡಿಕೊಂಡು ಹೋದಮೇಲೆ ಎಲ್ಲವೂ ಸರಿಹೋಗುತ್ತದೆ. ಅದೇರೀತಿ ನಮ್ಮ ಸಮಸ್ಯೆಯೂ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಮದುವೆಯಾಗಿ 15 ವರ್ಷವಾಗಿದೆ. ಯಾವತ್ತೂ ನಮ್ಮಲ್ಲಿ ಸಮಸ್ಯೆ ಬಂದಿಲ್ಲ. ಆದರೆ ಕಳೆದ ವರ್ಷ ನಮ್ಮ ಅತ್ತೆಯವರ ಅಪೇಕ್ಷೆ ಮೇರೆಗೆ ಮನೆಗೆ ಅಡಿಗೆಯವರಾಗಿ ಬಂದ ಗಂಗಾ ಕುಲಕರ್ಣಿ ಅವರಿಂದ ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿದೆ. ಯಾರದೋ ಮಾತು ಕೇಳಿ ನನ್ನ ಪತ್ನಿ ಈಗ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಈ ಅರೋಪಗಳಲ್ಲಿ ಯಾವುದೇ ಹುರುಳಿಲ್ಲ. ನನಗೆ ಅವರ ಆಸ್ತಿಯ ಮೇಲೆ ಯಾವ ಆಸೆಯೂ ಇಲ್ಲ ಎಂದರು.

ಇದನ್ನೂ ಓದಿ:ಚಿತ್ರ ಸಾಹಿತಿ ಕೆ. ಕಲ್ಯಾಣ್‌ ದಾಂಪತ್ಯದಲ್ಲಿ ಬಿರುಕು

ಗಂಗಾ ಕುಲಕರ್ಣಿ ಹಾಗೂ ಅವರ ಪರಿಚಿತ ಬಾಗಲಕೋಟೆ ಜಿಲ್ಲೆಯ ಶಿವಾನಂದ ವಾಲಿ ಅವರ ವಂಚನೆಗೆ ಬಲಿಯಾದ ಪತ್ನಿ ಅಶ್ವಿನಿ ಹಾಗೂ ಅತ್ತೆ ಮಾವರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಯಾವುದೇ ಸಂಬಂಧವಿಲ್ಲದ ಶಿವಾನಂದ ವಾಲಿ ಖಾತೆಗೆ ಸುಮಾರು 24 ಲಕ್ಷ ಹಣ ಹಾಗೂ ಆಸ್ತಿ ವರ್ಗಾವಣೆ ಆಗಿದೆ ಎಂದು ಕೆ ಕಲ್ಯಾಣ್ ಮಾಹಿತಿ ನೀಡಿದರು.

ನನಗೆ ಶಿವಾನಂದ ವಾಲಿ ಯಾರು ಎಂಬುದು ಇದುವರೆಗೆ ಗೊತ್ತಿಲ್ಲ. ನಾನು ಅವನ ಮುಖವನ್ನೂ ನೋಡಿಲ್ಲ. ಆದರೆ ಈ ವ್ಯಕ್ತಿಯಿಂದ ನನ್ನ ಪತ್ನಿ ಹಾಗೂ ಅತ್ತೆ ಮತ್ತು ಮಾವ ಮೋಸ ಹೋಗಿದ್ದಾರೆ ಎಂದರು.

ಕೆ.ಕಲ್ಯಾಣ್

ಒಂದು ದಿನ ನನ್ನ ಅತ್ತೆ ಮನೆಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಮಧ್ಯರಾತ್ರಿ 1 ಗಂಟೆಗೆ ಪೂಜೆ ಮಾಡುತ್ತಿದ್ದರು. ಇದರ ಬಗ್ಗೆ ಕೇಳಿದಾಗ ಅಂತಹ ವಿಶೇಷ ಏನಿಲ್ಲ ಎಂದಿದ್ದರು. ಇದಾದ ಕೆಲ ದಿನಗಳ ಬಳಿಕ 2020ರ ಜ.9ರಂದು ಊರಿಗೆ ಹೋಗುತ್ತೇನೆಂದು ಪತ್ನಿ. ಅತ್ತೆ ಹಾಗೂ ಮಾವ ಎಲ್ಲರೂ ಬೆಳಗಾವಿ ಗೆ ಹೋದರು. ನಂತರ ಜ.10ರಂದು ಪತ್ನಿಯ ನಂಬರ್ ಸ್ವಿಚ್​​ ಆಫ್​ ಆಗಿತ್ತು. ಜ.17ರಂದು ನಾನು ಕೂಡ ಬೆಳಗಾವಿಗೆ ಬಂದೆ. ಆ ವೇಳೆ ಒಂದಿಷ್ಟು ನಿಂಬೆಹಣ್ಣು ಇಟ್ಟುಕೊಂಡು ನಮ್ಮ ಅತ್ತೆ ಪೂಜೆ ಮಾಡುತ್ತಿದ್ದರು ಎಂದು ಗೊತ್ತಾಯಿತು. ಆಗ ತಂದೆ-ತಾಯಿ ಜತೆ ಪತ್ನಿ ಬೇರೆ ಮನೆಗೆ ಶಿಫ್ಟ್​ ಆಗಿದ್ದರು.

ತಿಲಕವಾಡಿಯಲ್ಲಿ ಪೋಷಕರ ಜತೆ ನನ್ನ ಪತ್ನಿ ಇದ್ದಳು.ಈ ವೇಳೆ ಶಿವಾನಂದ ವಾಲಿ ಹಾಗೂ ಗಂಗಾ ಕುಲಕರ್ಣಿ ಜತೆ ಪತ್ನಿಯ ಪಾಲಕರು ಸಂಪರ್ಕದಲ್ಲಿದ್ದರು. ಸ್ವಲ್ಪ ದಿನದ ಬಳಿಕ ನನ್ನ ಪತ್ನಿಯ ತಾಳಿ ಮತ್ತು ಕಾಲುಂಗುರ ಕಾಣಲಿಲ್ಲ. ನಾನು ಕೇಳಿದ್ದಕ್ಕೆ ಅವು ಇದ್ದರೆ ಮಾತ್ರಕ್ಕೆ ಗಂಡ-ಹೆಂಡತಿನಾ? ಎಂದು ಪ್ರಶ್ನಿಸಿದ್ದರು. ಆಮೇಲೆ ನಿಧಾನವಾಗಿ ಅವರ ವರ್ತನೆಯೂ ಬದಲಾಯಿತು. ನನ್ನನ್ನು ಅಪರಿಚಿತರಂತೆ ನನ್ನ ಪತ್ನಿ ನೋಡುತ್ತಿದ್ದಳು ಎಂದು ಕೆ ಕಲ್ಯಾಣ್ ಹೇಳಿದರು.

ಇದನ್ನೂ ಓದಿ:ದೀಪಿಕಾ, ಶೃದ್ಧಾ, ಸಾರಾ ವಿಚಾರಣೆ ನಡೆಸಿದ್ದ ಎನ್ ಸಿಬಿ ಅಧಿಕಾರಿಗೆ ಕೋವಿಡ್ ಸೋಂಕು ದೃಢ

ಇದಾದ ಕೆಲ ದಿನಗಳ ಬಳಿಕ ನನ್ನ ಪತ್ನಿ ಖಾತೆಯಿಂದ 1 ಲಕ್ಷದ 70 ಸಾವಿರ ಹಣ ಶಿವಾನಂದ ವಾಲಿ ಅವರ ಅಕೌಂಟ್​​ಗೆ ವರ್ಗಾವಣೆಯಾಗಿದೆ. ನನ್ನ ಅತ್ತೆ-ಮಾವನ ಹೆಸರಿನ ಆಸ್ತಿಯೂ ಶಿವಾನಂದ ವಾಲಿ ಹೆಸರಿಗೆ ವರ್ಗಾಯಿಸಿದ್ದಾರೆ. ಹೀಗಾಗಿ ಕಾನೂನು ತಜ್ಞರ ಜತೆ ಚರ್ಚಿಸಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ. ನನ್ನ ಅತ್ತೆ, ಮಾವ, ಪತ್ನಿ ಕಾಣಿಸುತ್ತಿಲ್ಲ ಮತ್ತು ಅಪರಿಚಿತ ವ್ಯಕ್ತಿಯ ಖಾತೆ ಹಣ ವರ್ಗಾವಣೆಯಾಗಿದೆ ಎಂದು ಪ್ರಕರಣ ದಾಖಲಿಸಿದ್ದೇನೆ ಎಂದು ಹೇಳಿದರು.

ಕೇವಲ 8-10 ತಿಂಗಳಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆದಿದೆ. ಅವರ ಆಸ್ತಿ ನನಗೆ ಮುಖ್ಯವಲ್ಲ. ನನ್ನ ಅತ್ತೆ, ಮಾವ ಮತ್ತು ಪತ್ನಿಯ ಯೋಗಕ್ಷೇಮ ಮುಖ್ಯ. ದೂರು ನೀಡಿದ ಬಳಿಕ ಶಿವಾನಂದ ವಾಲಿ ಸಿಕ್ಕಿದರು. ಇದಾದ ಬಳಿಕ ನನ್ನ ಪತ್ನಿಯಿಂದ ನನ್ನ ವಿರುದ್ಧವೇ ಆರೋಪ ಮಾಡಿಸಲಾಗಿದೆ. ಶಿವಾನಂದ ವಾಲಿ ಅರೆಸ್ಟ್ ಆಗುವವರೆಗೂ ಆರೋಪ ಇರಲಿಲ್ಲ. ಬಂಧನದ ಬಳಿಕ ಆರೋಪ ಮಾಡಿದ್ದಾರೆ ಎಂದು ಕೆ ಕಲ್ಯಾಣ್​ ವಿವರಿಸಿದರು.

ಟಾಪ್ ನ್ಯೂಸ್

ಭೀಕರ ರಸ್ತೆಕ್ಕೆ ಐವರು ಸಾವು : ಮದುವೆಗೆ ಹೋಗಿ ಹಿಂತಿರುಗುವಾಗ ನಡೆದ ಘಟನೆ, ಐವರು ಗಂಭೀರ

ಮದುವೆಗೆ ಹೋಗಿ ಹಿಂತಿರುಗುತ್ತಿದ್ದಾಗ ಭೀಕರ ರಸ್ತೆ ಅಪಘಾತ: 5 ಸಾವು ಮತ್ತೆ ಐವರ ಸ್ಥಿತಿ ಗಂಭೀರ

dk shi 2

ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಪಾದಯಾತ್ರೆ ನಿಲ್ಲಿಸಲು: ಡಿ.ಕೆ.ಶಿವಕುಮಾರ್ ಕಿಡಿ

bjp-congress

ಕಾಂಗ್ರೆಸ್ ಹಡಗನ್ನು ಮುಳುಗಿಸಲು ಸಿದ್ದರಾಮಯ್ಯರಂತಹ ನಾಯಕರ ಅಗತ್ಯವಿದೆ: ಬಿಜೆಪಿ

ಉತ್ತರಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ; ಉಲ್ಟಾ ಹೊಡೆದ ಪ್ರಿಯಾಂಕಾ ಗಾಂಧಿ ವಾದ್ರಾ

ಉತ್ತರಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ; ಉಲ್ಟಾ ಹೊಡೆದ ಪ್ರಿಯಾಂಕಾ ಗಾಂಧಿ ವಾದ್ರಾ

1-ffds

ಐವರ ಬಾಳಿಗೆ ಬೆಳಕಾದ ದರ್ಶನ್‌: ಏರ್‌ಲಿಫ್ಟ್ ಮೂಲಕ ಮೈಸೂರಿನಿಂದ ಚೆನ್ನೈಗೆ ಹೃದಯ

hdd

ದೇವೇಗೌಡರಿಗೆ ಕೋವಿಡ್ ಪಾಸಿಟಿವ್: ಆರೋಗ್ಯ ಉತ್ತಮ

Kiribati and Samoa

ಇದುವರೆಗೆ ಕೇವಲ ಎರಡು ಕೋವಿಡ್ ಕೇಸ್ ಪತ್ತೆಯಾದ ದೇಶದಲ್ಲಿ ಲಾಕ್ ಡೌನ್ ಜಾರಿ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ್’ ಫಸ್ಟ್ ಲುಕ್ ಬಿಡುಗಡೆ

ನಿಖೀಲ್ ಹುಟ್ಟುಹಬ್ಬಕ್ಕೆ ‘ಯದುವೀರ’ ಫಸ್ಟ್ ಲುಕ್ ಬಿಡುಗಡೆ

khasagi putagalu

ವೀಕೆಂಡ್‌ ಲಾಕ್‌ ಡೌನ್‌ ಗೆ ಮುಕ್ತಿ: ಹೊಸಬರ ಸಿನ್ಮಾ ರಿಲೀಸ್‌ ಗೆ ಇದು ಸಕಾಲ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ಇಂದು ನಿಖೀಲ್‌ ಬರ್ತ್‌ಡೇ: ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಎಂದ ನಟ

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

ನಟ ಭಯಂಕರನಿಗೆ ಸಿಎಂ ಬೊಮ್ಮಾಯಿ ಸಾಥ್‌

amazon prime video

ಪುನೀತ್‍ ರಾಜ್‍ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ ಅಮೆಜಾನ್‍ ಪ್ರೈಮ್‍

MUST WATCH

udayavani youtube

ಬೆಂಕಿಗೆ ಸುಟ್ಟು ಕರಕಲಾದ ಮನೆ : ಸೂರು ಕಳೆದುಕೊಂಡು ಅತಂತ್ರರಾದ ಕುಟುಂಬ

udayavani youtube

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

ಹೊಸ ಸೇರ್ಪಡೆ

ಭೀಕರ ರಸ್ತೆಕ್ಕೆ ಐವರು ಸಾವು : ಮದುವೆಗೆ ಹೋಗಿ ಹಿಂತಿರುಗುವಾಗ ನಡೆದ ಘಟನೆ, ಐವರು ಗಂಭೀರ

ಮದುವೆಗೆ ಹೋಗಿ ಹಿಂತಿರುಗುತ್ತಿದ್ದಾಗ ಭೀಕರ ರಸ್ತೆ ಅಪಘಾತ: 5 ಸಾವು ಮತ್ತೆ ಐವರ ಸ್ಥಿತಿ ಗಂಭೀರ

dk shi 2

ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಪಾದಯಾತ್ರೆ ನಿಲ್ಲಿಸಲು: ಡಿ.ಕೆ.ಶಿವಕುಮಾರ್ ಕಿಡಿ

17death

ಮಗನ ಕಿರಿಕಿರಿಗೆ ಬೇಸತ್ತು ಕೊಲೆಗೈದ ಕುಟುಂಬ

bjp-congress

ಕಾಂಗ್ರೆಸ್ ಹಡಗನ್ನು ಮುಳುಗಿಸಲು ಸಿದ್ದರಾಮಯ್ಯರಂತಹ ನಾಯಕರ ಅಗತ್ಯವಿದೆ: ಬಿಜೆಪಿ

16-modi-fans

ಮೋದಿ ಅಭಿಮಾನಿಗಳಿಂದ ಮಂತ್ರಾಲಯಕ್ಕೆ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.