ಕುರುಗೋಡು: ಲಾರಿ – ಬೈಕ್ ನಡುವೆ ಅಪಘಾತ; ಟ್ರಾಫಿಕ್ ಪೊಲೀಸ್ ಸ್ಥಳದಲ್ಲೇ ಸಾವು
Team Udayavani, Jun 21, 2022, 7:47 PM IST
ಕುರುಗೋಡು: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ಟ್ರಾಫಿಕ್ ಪೊಲೀಸ್ ಸಾವನ್ನಪಿದ್ದಾನೆ.
ಸಾವನ್ನಪಿದ ಟ್ರಾಫಿಕ್ ಪೊಲೀಸ್ ವಿರುಪಣ್ಣ (31). ಬಳ್ಳಾರಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕಂಪ್ಲಿಗೆ ವರ್ಗಾವಣೆ ಗೊಂಡ ಹಿನ್ನಲೆ ಬಳ್ಳಾರಿಯಿಂದ ಕಂಪ್ಲಿಗೆ ತೇರಳಬೇಕಾದ ಸಂದರ್ಭದಲ್ಲಿ ಕುಡತಿನಿ ಹೊರ ವಲಯದ ಎನ್. ಎಚ್. ರಸ್ತೆಯಲ್ಲಿ ಈ ಘಟನೆ ನಡೆದಿದೆ. ಟ್ರಾಫಿಕ್ ಪೊಲೀಸ್ ವಿರುಪಣ್ಣ ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಚನ್ನಗಿರಿ: ಬಸ್ ಗೆ ಢಿಕ್ಕಿಯಾದ ಬೈಕ್ ; ಸವಾರ ಸ್ಥಳದಲ್ಲೇ ಸಾವು
ಕುಡುತಿನಿ ಮಾರ್ಗದಿಂದ ಆಂಧ್ರಪ್ರದೇಶಕ್ಕೆ ಹೊರಟಿದ್ದ ಲಾರಿಯನ್ನು ಹಾಗೂ ಚಾಲಕನನ್ನು ಕುಡತಿನಿ ಪೊಲೀಸ್ ರು ವಶಕ್ಕೆ ಪಡೆದುಕೊಂಡಿದ್ದಾರೆ.
ಟ್ರಾಫಿಕ್ ಪೊಲೀಸ್ ವಿರುಪಣ್ಣ ಅವರ ಕುಟುಂಬದ ಸದಸ್ಯರ ದೂರಿನ ಮೇರೆಗೆ ಕುಡುತಿನಿ ಸಿಪಿಐ ಚಂದನ್ ಗೋಪಾಲ್, ಪಿ ಎಸ್ ಐ ಅಮರೇಗೌಡ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.