ಬಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ
Team Udayavani, May 22, 2022, 3:49 PM IST
ಕುರುಗೋಡು: ಇಂದಿರಾ ನಗರದ ಮೂಲಕ ಹಾದು ಹೋಗಿರುವ ಹೆಚ್‌ಎಲ್‌ಸಿ ಉಪ-ಕಾಲುವೆ ಪಕ್ಕದ ಖಾಲಿ ಜಾಗದಲ್ಲಿ ವಾಸವಾಗಿರುವ ಬಡ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ನಂತರ ಜಾಗ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಲಿ ಎಂದು ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ಆಗ್ರಹಿಸಿದರು.
ಇಂದಿರಾ ನಗರಕ್ಕೆ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಸರ್ವೇ ನಂ. 347 ಎ/2 ಸೇರಿದ ಹೆಚ್‌ಎಲ್‌ಸಿ ಉಪ-ಕಾಲುವೆ ಪಕ್ಕದ ಖಾಲಿ ಜಾಗದಲ್ಲಿ ವಾಸವಾಗಿರುವ 96 ಬಡಕುಟುಂಬಗಳು ಸುಮಾರು 30-40 ವರ್ಷಗಳಿಂದ ವಾಸವಾಗಿದ್ದಾರೆ. ಅವರಿಗೆ ಏಕಾಏಕಿ ನೀರಾವರಿ ಇಲಾಖೆ ಅಧಿ ಕಾರಿಗಳು ನ್ಯಾಯಾಲಯದ ನೋಟಿಸ್ ನೀಡಿ ಸ್ಥಳವನ್ನು ಖಾಲಿ ಮಾಡಿರಿ ಎಂದರೆ ಅವರ ಗತಿ ಏನು ಎಂದು ಪ್ರಶ್ನಿಸಿದರು.
ಒಂದು ವೇಳೆ ಬಡಕುಟುಂಬಗಳನ್ನು ತೆರವುಗೊಳಿಸುವುದಾದರೆ ಸರ್ಕಾರ ಅವರಿಗೆ ಸೂಕ್ತ ಪರ್ಯಾಯ ಸ್ಥಳ ನಿಗದಿಮಾಡಿ ತೆರವುಗೊಳಿಸಬೇಕೆಂದು ಹೇಳಿದರು.
ಸ್ಥಳ ತೆರವುಗೊಳಿಸಲು ನ್ಯಾಯಾಲಯ ನೀಡಿರುವ ನೋಟಿಸ್‌ಗೆ ವಿರುದ್ಧವಾಗಿ ಬಡ ಕುಟುಂಬಸ್ಥರ ಜತೆಗೂಡಿ ನ್ಯಾಯಾಲಯದ ಮೂಲಕ ನ್ಯಾಯಯುತವಾಗಿ ಹೋರಾಟ ನಡೆಸಿ, ಇಲ್ಲಿ ವಾಸಮಾಡುವ ನೂರಾರು ಮಂದಿ ಬಡಕುಟುಂಬಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಬಡ ಕುಟುಂಬಗಳ ರಕ್ಷಣೆಯೇ ನನ್ನ ಗುರಿಯೇ ಹೊರತು ಬಡವರ ವಿಚಾರದಲ್ಲಿ ರಾಜಕೀಯ ಮಾಡಲ್ಲ. ಇಷ್ಟು ದೊಡ್ಡ ಸಮಸ್ಯೆ ಇದ್ದರು ಜನರಿಂದ ಓಟು ಹಾಕಿಸಿಕೊಂಡು ಅಧಿಕಾರ ನಡೆಸಿದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ಬಡವರ ಓಟು ಮಾತ್ರ ಬೇಕು ಅವರ ಕಷ್ಟಗಳಿಗೆ ಸ್ಪಂದಿಸುವುದಿಲ್ಲ ಎಂಬುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಎಎಸ್‌ಡಿಎಂಸಿ ಅಧ್ಯಕ್ಷ ತಳವಾರು ನಾಗರಾಜ, ಎ.ಮಲ್ಲಿಕಾರ್ಜುನ, ಸೋಡ ಬಸಪ್ಪ, ಕೆ.ಮಲ್ಲಿಕಾರ್ಜುನ ಮಾತನಾಡಿ, ಹೆಚ್‌ಎಲ್‌ಸಿ ಉಪಕಾಲುವೆಗೆ ನೀರೇ ಬರುತ್ತಿಲ್ಲ. ಕಾಲುವೆ ಮೇಲ್ಭಾಗದಲ್ಲಿ ಅಧಿಕಾರಿಗಳೇ ಬಂದ್ ಮಾಡಿದ್ದಾರೆ ಎಂದು ಹೇಳಿದರು.
ವಾಸವಾಗಿರುವ ಒಟ್ಟು 96 ಬಡಕುಟುಂಬಗಳ ಪೈಕಿ 86 ಬಟಕುಟುಂಬಗಳಿಗೆ ಅಧಿಕಾರಿಗಳು ತೆರವುಗೊಳಿಸಲು ನೋಟಿಸ್ ನೀಡಿದ್ದಾರೆ. ಮಾತ್ರವಲ್ಲದೆ ಕ್ಷೇತ್ರದ ಜನಪ್ರತಿನಿಧಿಗಳು, ವಾರ್ಡ್ ಸದಸ್ಯರು ಯಾರು ಬಡಕುಟುಂಬಗಳ ಕಷ್ಟಕಾಲಕ್ಕೆ ಸಹಾಯಮಾಡಲು ಬಂದಿಲ್ಲ ಎಂದು ಆರೋಪಿಸಿದರು. ಪ್ರಮುಖರಾದ ಡಿ. ನಾಗೇಶ್ವರರಾವ್, ಮುಷ್ಟಗಟ್ಟೆ ಹನುಮಂತಪ್ಪ, ಕೊಟ್ಟಾಲ್ ರಾಘವೇಂದ್ರ, ಕ್ಯಾದಿಗೆಹಾಳು ಶೇಖರ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸುಪ್ರೀಂನಲ್ಲೂ ಉದ್ಧವ್ ಗೆ ಮುಖಭಂಗ : ನಾಳೆಯೇ ಬಹುಮತ ಸಾಬೀತಿಗೆ ಸುಪ್ರೀಂ ಮಹತ್ವದ ಆದೇಶ
ಕಲಬುರಗಿ; ಇಬ್ಬರು ಮಕ್ಕಳನ್ನು ಕೊಂದು ಮಕ್ಕಳ ಶವದೊಂದಿಗೆ ರಿಕ್ಷಾದಲ್ಲಿ ತಿರುಗಾಡಿದ ಪಾಪಿ ತಂದೆ
ರಾಷ್ಟ್ರಪತಿ ಚುನಾವಣೆ ಕುರಿತ ಅರ್ಜಿತಿರಸ್ಕರಿಸಿದ ಸುಪ್ರೀಂ ಕೋರ್ಟ್
ಆಸ್ಕರ್ ಸಿನಿಮಾ ಸಮಿತಿಗೆ ತಮಿಳು ನಟ ಸೂರ್ಯ, ಬಾಲಿವುಡ್ ನಟಿ ಕಾಜೋಲ್
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ