
ಅದ್ದೂರಿಯಾಗಿ ನೆರೆವೆರಿದ ದಮ್ಮೂರು ವೆಂಕಾವಧೂತ ರಥೋತ್ಸವ
Team Udayavani, Feb 5, 2023, 9:20 PM IST

ಕುರುಗೋಡು: ಸಮೀಪದ ದಮ್ಮೂರು ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ವೆಂಕಾವಧೂತ ರಥೋತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆ ಯಿಂದ ವಿಶೇಷ ಪೂಜಾ, ಶರಣರ ಕತೃ ಗದ್ದುಗೆ ಹೋಮ, ಹವನ, ರುದ್ರಭಿಷೇಕ ಹಾಗೂ ಇತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿಧಾನಗಳಿಂದ ಜರುಗಿದವು. ಸ್ಥಳೀಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ತಾತನವರ ದರ್ಶನ ಪಡೆದು ಹೂ ಹಣ್ಣು ಎಸೆದು ಹರಕೆ ತೀರಿಸಿದರು ಮತ್ತು ಕಾಯಿ ಸಮರ್ಪಿಸಿದರು.
ಪ್ರಸಕ್ತದಿನ ಭಕ್ತರು ಬೆಳಗ್ಗೆ ಅಲಂಕೃತ ಗೊಂಡಿದ್ದ ರಥವನ್ನು ದೇವಸ್ಥಾನದ ಆವರಣದಿಂದ ಎದುರು ಬಸವಣ್ಣ ಕಟ್ಟೆವರೆಗೆ ಎಳೆದು ಪುನಃ ಸ್ಥಳಕ್ಕೆ ಎಳೆದು ತಂದರು. ದಾರಿಯುದ್ದಕ್ಕೂ ತಾತನವರಿಗೆ ಜಯಕಾರ ಕೂಗಿದರು.
ಗ್ರಾಮದ ಭಕ್ತರು ಮತ್ತು ಹೊರಗಿನಿಂದ ಬರುವ ಭಕ್ತರನ್ನು ದೇವಸ್ಥಾನದ ಮಂಡಳಿ ಹಾಗೂ ಗ್ರಾ.ಪಂ ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಒದಗಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಬಳ್ಳಾರಿ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ನ ತ್ರಿವೇಣಿ ಆಯ್ಕೆ,ಜಾನಕಿ ಉಪಮೇಯರ್

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ

ಎಲ್ಲೇ ಸ್ಪರ್ಧೆ ಮಾಡಿದರೂ ಸಿದ್ದರಾಮಯ್ಯ ಗೆಲ್ಲುತ್ತಾರೆ : ಶಾಸಕ ಜೆ.ಎನ್.ಗಣೇಶ್