
ಬೃಹತ್ ಮೆಗಾ ಇ-ಲೋಕ ಅದಾಲತ್
Team Udayavani, Dec 22, 2020, 6:22 PM IST

ಬಳ್ಳಾರಿ: ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹೈಕೋರ್ಟ್ ನಿರ್ದೇಶನದ ಮೇರೆಗೆಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದಾದ ಹಾಗೂ ವ್ಯಾಜ್ಯಪೂರ್ವ ದಾವಾ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸುವ ಬೃಹತ್ ಮೆಗಾ ಇ-ಲೋಕ ಅದಾಲತ್ ನಡೆಯಿತು.
ಕೋವಿಡ್‌ನ ಈ ಕಾಲಘಟ್ಟದಲ್ಲಿ ನಡೆಯುತ್ತಿರುವ 2ನೇ ಬೃಹತ್ ಮೆಗಾ ಇ-ಲೋಕ ಅದಾಲತ್ ಇದಾಗಿದೆ. ಈ ಮೆಗಾ ಅದಾಲತ್ ಕಾರ್ಯಕ್ರಮದಲ್ಲಿಬ್ಯಾಂಕ್ ರಿಕವರಿ, ಕಾರ್ಮಿಕ ವಿವಾದಗಳು, ಎಲೆಕ್ಟ್ರಿಸಿಟಿ ಮತ್ತು ಕುಡಿಯುವ ನೀರಿನ,ವೈವಾಹಿಕ, ಕಂದಾಯ ಪ್ರಕರಣಗಳು, ಭೂಮಿ ವಿವಾದ, ಮೋಟಾರ್ ಅಪಘಾತ, ಚೆಕ್‌ಬೌನ್ಸ್, ರಾಜಿಯಾಗಬಹುದಾದ ಐಪಿಸಿ ಪ್ರಕರಣಗಳು, ಸಿವಿಲ್ ವ್ಯಾಜ್ಯಗಳು ಸೇರಿದಂತೆವಿವಿಧ ರೀತಿಯ ರಾಜಿಯಾಗಬಹುದಾದ10358 ಪ್ರಕರಣಗಳು ಅದಾಲತ್‌ಗೆ ನೋಂದಣಿಯಾಗಿದ್ದವು.
ಜಿಲ್ಲಾ ನ್ಯಾಯಾಲಯದಪ್ರವೇಶದ್ವಾರದಲ್ಲಿ ನಾಲ್ಕು ಕಡೆ ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆದು ವ್ಯಾಜ್ಯಗಳರಾಜಿಗೆ ಆಗಮಿಸಿದ್ದ ಕಕ್ಷಿದಾರರಿಗೆ ಆರ್‌ಟಿಪಿಸಿಆರ್ ಮೂಲಕ ತಪಾಸಣೆ ನಡೆಸಿ 15 ನಿಮಿಷಗಳಲ್ಲಿ ವರದಿ ಬರುವ ವ್ಯವಸ್ಥೆಮಾಡಲಾಗಿತ್ತು. ವರದಿ ಪ್ರಮಾಣಪತ್ರ ಪಡೆದುಕೊಂಡ ನಂತರ ಕಕ್ಷಿದಾರರಿಗೆ ಆಯಾ ಸಂಬಂಧಿಸಿದ ಪೀಠಗಳ ಎದುರಿಗೆ ಕಳುಹಿಸಿಕೊಡಲಾಯಿತು.
ಜಿಲ್ಲೆಯಾದ್ಯಂತ ಜಿಲ್ಲಾ ನ್ಯಾಯಾಲಯದ, ತಾಲೂಕು ನ್ಯಾಯಾಲಯ ಸೇರಿದಂತೆ 28 ಪೀಠಗಳಲ್ಲಿ ಈ ಲೋಕ ಅದಾಲತ್‌ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವ್ಯವಸ್ಥೆ ಮಾಡಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಮಲ್ಲೂರು ತಿಳಿಸಿದರು. ಈ ಲೋಕ ಅದಾಲತ್‌ನಲ್ಲಿ ಇಬ್ಬರ ಒಪ್ಪಿಗೆಯಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದ ತೀರ್ಮಾನವಾಗುತ್ತದೆ.ಸಂಧಾನಕಾರರು ಸೂಚಿಸುವ ಪರಿಹಾರ ನಿಮಗೆ ತೃಪ್ತಿಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದಾಗಿರುತ್ತದೆ ಎಂದು ಅವರು ತಿಳಿಸಿದರು.
ಈ ಅದಾಲತ್‌ನಲ್ಲಿ ಕಕ್ಷಿದಾರರು ಕೆಲವರು ವಕೀಲರ ಮುಖಾಂತರ ಹಾಗೂ ಇನ್ನೂ ಕೆಲವರು ತಾವೇ ನೇರವಾಗಿ ಭಾಗವಹಿಸಿ ರಾಜಿ ಮಾಡಿಕೊಂಡಿದ್ದು ಕಂಡುಬಂದಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧಿಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪುಷ್ಪಾಂಜಲಿದೇವಿ, ನ್ಯಾಯಾಧೀಶ ಕಾಸಿಂಚೂರಿ ಖಾನ್ ಸೇರಿದಂತೆ ಇನ್ನಿತರೆ ನ್ಯಾಯಾಧಿಧೀಶರು, ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕ ಈರೇಶ ಅಂಗಡಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kotturu: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆ ಶಾಂತಿ ಸಭೆ

Ballari; ಯಾರಿಗೂ ಹೆದರಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ: ಸೋಮಶೇಖರ್ ರೆಡ್ಡಿ

JDS ಜೊತೆ ಹೊಂದಾಣಿಕೆ ಕೇಂದ್ರಕ್ಕೆ ಬಿಟ್ಟದ್ದು: ಶಾಸಕ ಯತ್ನಾಳ್

Holehonnur: ಭೀಕರ ರಸ್ತೆ ಅಪಘಾತ, ಇಬ್ಬರು ಮೃತ್ಯು, 7 ಮಂದಿಗೆ ಗಾಯ

Ballary; ವಿದ್ಯುತ್ ಕಂಬದ ಮೇಲೆ ಮೃತಪಟ್ಟ ಎಲೆಕ್ಟ್ರೀಷಿಯನ್: ಆಘಾತಕ್ಕೆ ಬೇರ್ಪಟ್ಟ ರುಂಡ-ಮುಂಡ
MUST WATCH
ಹೊಸ ಸೇರ್ಪಡೆ

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Holalkere: ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಗರಿಮೆ ಪುರಸಭೆಯ ಪೌರಕಾರ್ಮಿಕರಿಗೆ ಸಲ್ಲಬೇಕು

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್