ಸರ್ಕಾರಿ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬನ್ನಿ

ವಿಶೇಷ ಕಾಳಜಿಯನ್ನು ವಹಿಸುವ ಮೂಲಕ ಅನೇಕ ಸೌಲಭ್ಯಗಳನ್ನು ನೀಡಿದ್ದಾರೆ

Team Udayavani, Nov 28, 2022, 6:35 PM IST

ಸರ್ಕಾರಿ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬನ್ನಿ

ಹರಪನಹಳ್ಳಿ: ವಿಕಲಚೇತನರು ಸರ್ಕಾರದ ಸವಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ಅವರಿಗೆ ಮಾಸಾಶನ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದೆ ಎಂದು ಶಾಸಕ ಜಿ. ಕರುಣಾಕರಡ್ಡಿ ಹೇಳಿದರು.

ಪಟ್ಟಣದ ಬಾಬು ಜಗಜೀವನ ರಾಮ್‌ ಭವನದಲ್ಲಿ ರಾಜ್ಯ ವಿಕಲಚೇತನರ ತಾಲೂಕು ಒಕ್ಕೂಟದಿಂದ ಆಯೋಜಿಸಿದ್ದ ತಾಲೂಕುಮಟ್ಟದ ಅಂಗವಿಕಲರ ಕಾರ್ಯಕಾರಿಣಿ ಸಮಿತಿಗಳ ಬಲವರ್ಧನೆ ಅಭಿಯಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ವಿಕಲಚೇತನರಿಗೆ ತಿಂಗಳಿಗೆ ಕೇವಲ 750 ರೂ. ನೀಡಲಾಗುತಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಅವರಿಗೆ ತಿಂಗಳ ಮಾಸಾಶನ ಹೆಚ್ಚಿಗೆ ಮಾಡುವ ಮೂಲಕ ಅವರು ಸಹ ಎಲ್ಲರಂತೆ ಬದುಕು ಕಟ್ಟಿಕೊಳ್ಳಲು ಆವಕಾಶ ಮಾಡಿಕೊಟ್ಟರು ಎಂದರು.

ಅಂಗವಿಕಲತೆ ಶಾಪವಲ್ಲ ಆತ್ಮವಿಶ್ವಾಸ ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಎಲ್ಲಾರಂತೆ ಬದುಕು ಕಟ್ಟಿಕೊಳ್ಳಬೇಕೆಂದು ಕರೆ ನೀಡಿದರು.

ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ನಮ್ಮ ಅವಧಿಯಲ್ಲಿ ನಾವು ಮಾಡಿದ ಕೆಲಸಗಳು ಶಾಶ್ವತ. ಈ ನಿಟ್ಟಿನಲ್ಲಿ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಕಲಚೇತನರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುವ ಮೂಲಕ ಅನೇಕ ಸೌಲಭ್ಯಗಳನ್ನು ನೀಡಿದ್ದಾರೆ ಎಂದರು.

ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯ ಅರ್ಹತೆ ಉಳ್ಳ ಅಂಗವಿಕಲರಿಗೆ ಡಿಎಂಎಫ್‌ ನಿ ಧಿಯಲ್ಲಿ 150 ಮೋಟಾರ್‌ ಬೈಕ್‌ಗಳನ್ನು ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದು ಶೀಘ್ರದಲ್ಲೇ ಅವುಗಳನ್ನು ವಿತರಿಸಲಾಗುವುದು ಎಂದ ಅವರು ಅಂಗವಿಕಲರು ಕುಟುಂಬಕ್ಕೆ ಹೊರೆಯಾಗದಂತೆ ಎಲ್ಲ ರಂಗಗಳಲ್ಲಿಯೂ ತೊಡಗಿಸಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಸಲಹೆ ನೀಡಿದರು. ಅಂಗವಿಕಲರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಕರಿಬಸಜ್ಜ ಮಾತನಾಡಿ, ಅಂಗವಿಕಲರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ಆರಂಭಿಸಿದ್ದೇ ಬಿಜೆಪಿ ಸರ್ಕಾರ. ಈ ಸರ್ಕಾರಕ್ಕೆ ನಮ್ಮ ಒಕ್ಕೂಟದಿಂದ ಧನ್ಯವಾದ ಅರ್ಪಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ತಾಪಂ ಇಒ ಕೆ. ಪ್ರಕಾಶ್‌, ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌. ಕೃಷ್ಣಪ್ಪ, ರಾಜ್ಯ ಸಂಚಾಲಕ ಜಿ. ದೇವರಾಜ್‌, ಸಂಯೋಜಕ ಟೇಕರಾಜ್‌, ರಾಜ್ಯ ನಿರ್ದೇಶಕ ಆರ್‌. ಧನರಾಜ್‌, ರುದ್ರೇಗೌಡ, ರವಿಕುಮಾರ್‌ ನಾಯಕ್‌, ಬಿ. ಮಂಜುನಾಥ್‌, ಎನ್‌.ಲಕ್ಷ್ಮಣ, ಪುರಸಭೆ ಸದಸ್ಯರಾದ ತಾರಾ ಹನುಮಂತಪ್ಪ, ಎಂ.ಕೆ. ಜಾವಿದ್‌, ಗೌಳಿ ವಿನಯ್‌, ಬಿಜೆಪಿ ಮುಖಂಡರಾದ ಬಾಗಳಿ ಕೊಟ್ರೆಶಪ್ಪ, ಕೆಂಗಳ್ಳಿ ಪ್ರಕಾಶ್‌, ಎಂ.ಮಲ್ಲೇಶ್‌, ವಕೀಲ ರೇವಣಸಿದ್ದಪ್ಪ,
ಶಿವಾನಂದ ಇದ್ದರು.

ಟಾಪ್ ನ್ಯೂಸ್

ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!

ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!

ಅಡಿಕೆಗೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ಮನವಿ: ಸಂಜೀವ ಮಠಂದೂರು

ಅಡಿಕೆಗೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ಮನವಿ: ಸಂಜೀವ ಮಠಂದೂರು

1 thursday

ರಾಶಿ ಫಲ: ಪರರಿಗೆ ಸಹಾಯ ಮಾಡಿದ ತೃಪ್ತಿ, ಉದ್ಯೋಗ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ

ಬಡ್ಡಿ ಹೆಚ್ಚಳ: ಗೃಹ, ವಾಹನ ಸಾಲ ಮತ್ತಷ್ಟು ತುಟ್ಟಿ

ಬಡ್ಡಿ ಹೆಚ್ಚಳ: ಗೃಹ, ವಾಹನ ಸಾಲ ಮತ್ತಷ್ಟು ತುಟ್ಟಿ

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

ನನಗೆ, ನನ್ನ ಮಗಳಿಗೆ ಇಡಿ ನೋಟಿಸ್‌: ಡಿ.ಕೆ.ಶಿವಕುಮಾರ್‌

ನನಗೆ, ನನ್ನ ಮಗಳಿಗೆ ಇಡಿ ನೋಟಿಸ್‌: ಡಿ.ಕೆ.ಶಿವಕುಮಾರ್‌

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆ

ಫುಡ್ ಪಾಯ್ಸನ್‌ ಘಟನೆ: ಓರ್ವ ವಿದ್ಯಾರ್ಥಿನಿಗೆ ಚಿಕಿತ್ಸೆ ಮುಂದುವರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುರುಗೋಡು: ನೂತನ ತಹಶೀಲ್ದಾರ್‌ ಆಗಿ ಗುರುರಾಜ್ ಛಲವಾದಿ ಅಧಿಕಾರ ಸ್ವೀಕಾರ.!

ಕುರುಗೋಡು: ನೂತನ ತಹಶೀಲ್ದಾರ್‌ ಆಗಿ ಗುರುರಾಜ್ ಛಲವಾದಿ ಅಧಿಕಾರ ಸ್ವೀಕಾರ.!

‘ಅಂಬಳಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್..’ ಇದು ಮೈಲಾರಲಿಂಗೇಶ್ವರ ದೈವವಾಣಿ

‘ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್..’ ಇದು ಮೈಲಾರಲಿಂಗೇಶ್ವರ ದೈವವಾಣಿ

Mylara

ಉತ್ತರ ಕರ್ನಾಟಕದ ಪ್ರಸಿದ್ಧ ಮೈಲಾರ ಜಾತ್ರೆ

Yellamma cow

ಯಲ್ಲಮ್ಮನ ಜಾತ್ರೆಯಲ್ಲಿ ಎತ್ತುಗಳ ಪರಿಷೆ

ಬೀದಿನಾಯಿ ಕಡಿತ: ಏಳು ಜನರು ವಿಮ್ಸ್ ಗೆ ದಾಖಲು

ಬೀದಿನಾಯಿ ಕಡಿತ: ಏಳು ಜನರು ವಿಮ್ಸ್ ಗೆ ದಾಖಲು

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!

ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!

ಅಡಿಕೆಗೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ಮನವಿ: ಸಂಜೀವ ಮಠಂದೂರು

ಅಡಿಕೆಗೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಸಹಕಾರ ಸಚಿವರಿಗೆ ಮನವಿ: ಸಂಜೀವ ಮಠಂದೂರು

1 thursday

ರಾಶಿ ಫಲ: ಪರರಿಗೆ ಸಹಾಯ ಮಾಡಿದ ತೃಪ್ತಿ, ಉದ್ಯೋಗ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ

ಬಡ್ಡಿ ಹೆಚ್ಚಳ: ಗೃಹ, ವಾಹನ ಸಾಲ ಮತ್ತಷ್ಟು ತುಟ್ಟಿ

ಬಡ್ಡಿ ಹೆಚ್ಚಳ: ಗೃಹ, ವಾಹನ ಸಾಲ ಮತ್ತಷ್ಟು ತುಟ್ಟಿ

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

ಶಿಕ್ಷಕರ ವರ್ಗಾವಣೆ: ಮೂರು ವರ್ಷ ಸೇವೆ ಸಲ್ಲಿಸಿದವರ ಪರಿಗಣನೆಗೆ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.