ಸರ್ಕಾರದ ಮಾರ್ಗಸೂಚಿ ಪಾಲಿಸೋಣ

ಚಿಗಟೇರಿ ಹೋಬಳಿಯಲ್ಲಿ ಮಳೆಗೆ ಹಾನಿಗೊಳಗಾದ ಕುಟುಂಬಗಳಿಗೆ ಆಹಾರ ಕಿಟ್‌ ವಿತರಣೆ

Team Udayavani, Apr 23, 2020, 12:52 PM IST

23-April-09

ಹರಪನಹಳ್ಳಿ: ಮಳೆಯಿಂದ ಮನೆ ಹಾನಿಗೊಳಗಾದ ಫಲಾನುಭವಿಗಳಿಗೆ ಧನ ಸಹಾಯ ಹಾಗೂ ಆಹಾರ ಕಿಟ್‌ ವಿತರಿಸಲಾಯಿತು.

ಹರಪನಹಳ್ಳಿ: ಕೋವಿಡ್ ಸೋಂಕು ಯಾವುದೇ ಜಾತಿ-ಜನಾಂಗದಿಂದ ಬಂದಿದ್ದಲ್ಲ. ಜಾತಿ ಬಣ್ಣ ಕಟ್ಟದೇ ಎಲ್ಲರೂ ಕೊರೊನಾ ವಿರುದ್ಧ ಹೋರಾಟ ಮಾಡುತ್ತ ಸರ್ಕಾರದ ಮಾರ್ಗಸೂಚಿ ಪಾಲಿಸೋಣ ಎಂದು ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.

ತಾಲೂಕಿನ ಚಿಗಟೇರಿ ಹೋಬಳಿಯಲ್ಲಿ ಬುಧವಾರ ಟಾಸ್ಕ್ಫೋರ್ಸ್‌ ಸಮಿತಿ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಅಕಾಲಿಕ ಮಳೆಯಿಂದ ಹಾನಿಯಾಗಿರುವ ಗ್ರಾಮಗಳಾದ ಮೈದೂರು, ಬಳಿಗನೂರು, ಗೌರಿಪುರ ಗ್ರಾಮದ ಕುಟುಂಬದ ಸದಸ್ಯರಿಗೆ ಆಹಾರ ಕಿಟ್‌ ಹಾಗೂ ಧನ ಸಹಾಯ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಶ್ವಕ್ಕೆ ಮಾರಕವಾಗಿರುವ ಈ ವೈರಸ್‌ ಬಗ್ಗೆ ಯಾರಿಗೂ ಭಯ ಬೇಡ. ಜಾಗೃತಿ ಇರಲಿ. ವಿಶ್ವಾದ್ಯಂತ ಕೋವಿಡ್‌-19 ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಆದರೆ ಕರ್ನಾಟಕದಲ್ಲಿ ಒಂದಿಷ್ಟು ಸಮಾಧಾನಕರ ವರದಿ ಬರುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಯಾವುದೇ ಹೊಸ ಪ್ರಕರಣ ಬಂದಿಲ್ಲ. ಲಾಕ್‌ಡೌನ್‌ ಘೋಷಣೆಯಾಗಿ ಏ. 23ಕ್ಕೆ ಒಂದು ತಿಂಗಳು ಕಳೆಯಲಿದೆ. ಜನರು ಕೂಡ ಸಹಕಾರ ಕೊಟ್ಟಿದ್ದಾರೆ. ಸಾಮಾಜಿಕ ಅಂತರ ಕಾಯ್ದಕೊಂಡು ಮನೆಯಿಂದ ಹೊರಗೆ ಬಾರದೇ ಒಗ್ಗಟ್ಟಿನಿಂದ ಕೊರೊನಾ ಎದುರಿಸುವಂತಾಗಿದೆ ಎಂದರು.

ಅಕಾಲಿಕ ಮಳೆಗೆ ಚಿಗಟೇರಿ ಹೋಬಳಿಯಲ್ಲಿ ಕೆಲ ಮನೆಗಳಿಗೆ ಹಾನಿಯಾಗಿ, ಮನೆ ಮೇಲ್ಛಾವಣಿ ಹಾರಿಹೋಗಿದೆ. ಇಂಥ ಫಲಾನುಭವಿಗಳ ನೆರವಿಗೆ ಚಿಗಟೇರಿ ಮತ್ತು ಹರಪನಹಳ್ಳಿ ಟಾಸ್ಕ್ ಫೋರ್ಸ್‌ ಪದಾಧಿಕಾರಿಗಳು ಧಾವಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಕೆಲಸವಿಲ್ಲದೇ ಆಹಾರಕ್ಕಾಗಿ ಪರದಾಡುವಂತಾಗಿದೆ. ಇಂಥವರಿಗೆ ಉಳ್ಳವರು ಸಹಾಯ-ಸಹಕಾರ ಮಾಡಬೇಕು. ಮನೆಯ ಮೇಲ್ಛಾವಣೆ ಹಾರಿಹೋಗಿರುವ ಫಲಾನುಭವಿಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸುವೆ ಎಂದು ತಿಳಿಸಿದರು.

ಮನೆ ಹಾನಿಗೊಳಗಾದ 8 ಜನರಿಗೆ ಧನ ಸಹಾಯ ಹಾಗೂ ಆಹಾರ ಕಿಟ್‌ ವಿತರಿಸಲಾಯಿತು. ಜಿಲ್ಲಾ ಗ್ರಾಮಾಂತರ ಟಾಸ್ಕ್ಫೋರ್ಸ್‌ ಸಮಿತಿ ಸದಸ್ಯ ಶಶಿಧರ್‌ ಪೂಜಾರ್‌, ಪುರಸಭೆ ಮಾಜಿ ಅಧ್ಯಕ್ಷ ಎಚ್‌. ಕೆ. ಹಾಲೇಶ್‌, ಜಿಪಂ ಸದಸ್ಯ ಉತ್ತಂಗಿ ಮಂಜುನಾಥ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬೇಲೂರು ಅಂಜಿನಪ್ಪ, ಮುಖಂಡರಾದ ಎಂ. ರಾಜಶೇಖರ್‌, ಪಿ.ಎಲ್‌.ಪೋಮ್ಯಾನಾಯ್ಕ, ಎಂ.ಟಿ. ಬಸವನಗೌಡ, ಮುತ್ತಿಗಿ ಜಂಬಣ್ಣ, ಮತ್ತಿಹಳ್ಳಿ ಅಜ್ಜಪ್ಪ, ಪಿ.ಪ್ರೇಮ್‌ಕುಮಾರಗೌಡ,
ನೀಲಪ್ಪ, ಕಲ್ಲೇಶ್‌, ದಿವಾಕರ್‌, ಸಾಬಳ್ಳಿ ಮಂಜಣ್ಣ, ಕುಬೇರಪ್ಪ, ಜಿ.ಎಸ್‌. ಬಸವನಗೌಡ, ರಿಯಾಜ್‌, ಮರಿಯಪ್ಪ, ಹನುಮಂತಪ್ಪ, ದುರಗಪ್ಪ ಇತರರಿದ್ದರು.

ಟಾಪ್ ನ್ಯೂಸ್

ಮಾರ್ಚ್ ತಿಂಗಳಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು:ಅಶ್ವತ್ಥನಾರಾಯಣ

ಮಾರ್ಚ್ ನಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಅಶ್ವತ್ಥನಾರಾಯಣ

ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿ

ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿ

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಪತ್ನಿ ದುಬಾರಿ ಜೀವನಕ್ಕೆ ಬೇಸತ್ತು ಪತಿ ಆತ್ಮಹತ್ಯೆ

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸವದತ್ತಿ: ಕಂದಮ್ಮಗಳ ಶಿಕ್ಷಣಕ್ಕೆ ಸಂಗೀತ ಸ್ಪರ್ಶ ನೀಡಿದ ಪಿಎಸ್‌ಐ.!

ಸಚಿವ ಅಶೋಕ್

ಸಿದ್ದು, ಡಿಕೆಶಿ ಜತೆ ನಾವು ಗಾಳಿಯಲ್ಲಿ ಗುಂಡು ಹೊಡೆಯುತ್ತೇವೆ: ಸಚಿವ ಅಶೋಕ್

ಕಾರ್ಕಳ: ಕಾರು – ರಿಕ್ಷಾ ಭೀಕರ ಅಪಘಾತ; ಆಟೋ ಚಾಲಕ ಸಾವು,ಓರ್ವ ಗಂಭೀರ

ಕಾರ್ಕಳ: ಕಾರು – ರಿಕ್ಷಾ ಭೀಕರ ಅಪಘಾತ; ಆಟೋ ಚಾಲಕ ಸಾವು,ಓರ್ವ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ballari news

ಶ್ರೀರಾಮುಲುಗೆ ಉಸುವಾರಿ-ಸಿಂಗ್‌ಗೆ ಕೊಪ್ಪಳ ಜವಾಬ್ದಾರಿ

್ಗಹಹಗಹಗದಗ

ಶಿವಕುಮಾರ ಶ್ರೀಗಳ ಬದುಕೇ ಶಿವಮಯ

ಚ್ಗೆಹಮನಬವಚಸಗಹದಗಹಗ್ದಸ

ಸೆಕ್ಯೂರಿಟಿ ಗಾರ್ಡ್‌ ಕುಟುಂಬಕ್ಕೆ ಪರಿಹಾರಕ್ಕಾಗಿ ಪ್ರತಿಭಟನೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಎರಯುಇಯುಯರದಸಅ

ನೀಲಿ ನಾಲಿಗೆ ರೋಗಕ್ಕೆ 30 ಕುರಿಗಳ ಸಾವು

MUST WATCH

udayavani youtube

೭೩ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾರಾಜಿಸಿದ ಕರ್ನಾಟಕದ ಸ್ತಬ್ಧಚಿತ್ರ

udayavani youtube

ಕಾಂಗ್ರೆಸ್ ಕೊಳೆತು ನಾರುತ್ತಿರುವ ಮಾವಿನ ಹಣ್ಣು : ಈಶ್ವರಪ್ಪ ಲೇವಡಿ

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮುದ್ದು ಮಕ್ಕಳ ಜೊತೆ ಮಗುವಾಗಿ ಬೆರೆತ ಸವದತ್ತಿ ಪಿಎಸ್ಐ ಶಿವಾನಂದ ಗುಡಗನಟ್ಟಿ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

ಹೊಸ ಸೇರ್ಪಡೆ

ಮಾರ್ಚ್ ತಿಂಗಳಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು:ಅಶ್ವತ್ಥನಾರಾಯಣ

ಮಾರ್ಚ್ ನಲ್ಲಿ ಆರೋಗ್ಯ ವಿವಿ ಕ್ಯಾಂಪಸ್, ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು: ಅಶ್ವತ್ಥನಾರಾಯಣ

ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿ

ಯತ್ನಾಳ ಮಂತ್ರಿ ಆಗ್ತಾರೆ, ನಾವಿಬ್ರು ಜೊತೆಯಾಗಿ ಕೆಲಸ ಮಾಡ್ತೇವೆ: ಸಚಿವ ಉಮೇಶ್ ಕತ್ತಿ

ಜಿಲ್ಲೆಯ 5 ತಾಲೂಕಲ್ಲಿ ಸಿಡಿಪಿಒ ಹುದ್ದೆ ಖಾಲಿ

ಜಿಲ್ಲೆಯ 5 ತಾಲೂಕಲ್ಲಿ ಸಿಡಿಪಿಒ ಹುದ್ದೆ ಖಾಲಿ

ballari news

ಪ್ರಜಾಪ್ರಭುತ್ವದಲ್ಲಿ ಪ್ರತಿ ಮತ ಅಮೂಲ್ಯ

honnavara news

ಸಾವಿನಲ್ಲೂ ಸಾರ್ಥಕತೆ ಮೆರೆದ ಇಂದ್ರಮ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.