
ಕಂಪ್ಲಿ ಕ್ಷೇತ್ರಕ್ಕೆ ಯಾರಿಗೆ ಹೈಕಮಾಂಡ್ ಟಿಕೆಟ್ ನೀಡುತ್ತೋ ನೋಡಿ ಬೆಂಬಲ ನೀಡುವೆ: ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ
Team Udayavani, Dec 8, 2022, 2:04 PM IST

ಕುರುಗೋಡು: ಕಾಂಗ್ರೆಸ್ ಹೈಕಮಾಂಡ್ ಕಂಪ್ಲಿ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೋ ನೋಡಿ ಅದರ ಮೇಲೆ ನಾನು ಬೆಂಬಲ ನೀಡುವೆ ಎಂದು ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಕ್ಷೇತ್ರದ ಜನರನ್ನು ಕುತೂಹಲ ಕೆರಳಿಸುವ ಹೇಳಿಕೆ ನೀಡಿದ್ದಾರೆ.
ಪಟ್ಟಣದ ಬಾದನಹಟ್ಟಿ ಗ್ರಾಮದಲ್ಲಿ ರೆಡ್ಡಿ ಸಮುದಾಯದ ಹಾಗೂ ಗ್ರಾಮದ ವಿವಿಧ ಮುಖಂಡರು ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ, ಅದಕ್ಕೆ ಬೆಂಬಲ ನೀಡುವೆ ಹೊರೆತು ಬೇರೆ ಪಕ್ಷಕ್ಕೆ ಬೆಂಬಲ ನೀಡಲ್ಲ. 2023 ವಿಧಾನಸಭಾ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡುತ್ತೋ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಆದರೆ ಯಾವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೋ ಕಾದು ನೋಡಿ ಬೆಂಬಲ ನೀಡುವೆ. ಈಗಲೇ ಏನು ಅಂತ ಹೇಳೋಕೆ ಆಗಲ್ಲ ಎಂದು ಹೇಳಿದರು.
ಬಳ್ಳಾರಿಯಲ್ಲಿ ನನ್ನ ಮಗ 2023 ಚುನಾವಣೆಗೆ ಸ್ಪರ್ದಿಸಲು ಮುಂದಾಗಿರುವ ಈ ರಾಜಕೀಯ ವಿಚಾರಕ್ಕೆ ನನಗೆ ಸಂಬಂಧವಿಲ್ಲದ ವಿಷಯ. ನಾರಾ ಭರತ್ ರೆಡ್ಡಿ ಹಾಗೂ ದಿವಾಕರ್ ಬಾಬು ಗೆ ಬಿಟ್ಟ ವಿಷಯ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಜಾರಿಕೊಂಡರು.
ಇನ್ನೂ ಕಂಪ್ಲಿ ಕ್ಷೇತ್ರಕ್ಕೆ ಹೊಸ ಆಕಾಂಕ್ಷಿಯನ್ನು ಹುಡುಕುತ್ತಿಲ್ಲ ಪಾರ್ಟಿ ಪರವಾಗಿ ನಾನು ಇದ್ದೇನೆ ಎಂದು ಹೇಳಿದರು.
ಒಂದು ವೇಳೆ ಕಂಪ್ಲಿ ಕ್ಷೇತ್ರಕ್ಕೆ ಕಾಂಗ್ರೆಸ್ ಪರವಾಗಿ ಹಾಲಿ ಶಾಸಕ ಗಣೇಶ್ ಅವರಿಗೆ ಟಿಕೇಟ್ ದೊರೆತರೆ ನಿಮ್ಮ ಬೆಂಬಲ ಇರುತ್ತೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಮಾತನಾಡಲಿಲ್ಲ ಇದರಿಂದ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಯಿತು.
ಅಲ್ಲದೆ ರೆಡ್ಡಿ ಹುಟ್ಟುಹಬ್ಬ ಡಿ.5 ಕ್ಕೆ ಕುರುಗೋಡಲ್ಲಿ ಅದ್ದೂರಿಯಾಗಿ ಜರುಗಿತು. ಅನಂತರ ಡಿ.7 ರಂದು ಕೂಡ ಬಾದನಹಟ್ಟಿಯಲ್ಲಿ ಅದ್ದೂರಿಯಾಗಿ ಜರುಗಿತು. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಸೇರಿದಂತೆ ವಿವಿಧ ಪಕ್ಷದ ಮುಖಂಡರಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದು, ಇದರಿಂದ ಕ್ಷೇತ್ರದ ಜನರಲ್ಲಿ ಕುತೂಹಲ ಉಂಟಾಗಿದ್ದು, ಸಧ್ಯ ರೆಡ್ಡಿ ನಡೆ ನಿಗೂಢವಾಗಿದೆ ಎಂಬ ವಿಷಯ ಕ್ಷೇತ್ರದ ರಾಜಕೀಯ ವಲಯದಲ್ಲಿ ಕಂಡು ಬರುತ್ತಿದೆ.
ಇನ್ನೊಂದು ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಭವಿಷ್ಯ ಸೂರ್ಯನಾರಾಯಣ ರೆಡ್ಡಿ ಕೈಯಲ್ಲಿದೆ ಎಂಬ ಮಾತುಗಳು ಎಲ್ಲಂದರಲ್ಲಿ ಕೇಳಿಬರುತ್ತಿದೆ. ಆದ್ರೂ ಹಾಲಿ ಶಾಸಕ ಗಣೇಶ್ ಮತ್ತು ರೆಡ್ಡಿ ಅಸಮಾಧಾನ ವಾಗಿರುವ ಕಾರಣ ಬೇರೆ ಪಕ್ಷದ ಅಭ್ಯರ್ಥಿಗಳ ಪರ ಅಧಿಕಾರ ವಾಲುವ ಸನ್ನಿವೇಶ ಸ್ಪಷ್ಟವಾಗಿ ಕಂಡುಬರುತ್ತಿದೆ.
ಪ್ರಾರಂಭದಲ್ಲಿ ಬಾದನಹಟ್ಟಿ ಗ್ರಾಮದ ಮುಖ್ಯ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕ್ಕೆ ಸಮಾವೇಶಗೊಂಡಿತು.
ಈ ಸಂದರ್ಭದಲ್ಲಿ ಸಣ್ಣ ವಿರಾರೆಡ್ಡಿ, ತಿಮ್ಮಾರೆಡ್ಡಿ, ಹನುಮಂತ ರೆಡ್ಡಿ, ಲೋಕರೆಡ್ಡಿ, ರಾಮರೆಡ್ಡಿ, ಕೋಟರೆಡ್ಡಿ, ಶಿವ ರೆಡ್ಡಿ, ಸುರೇಶ್ ರೆಡ್ಡಿ, ಜನಾರ್ದನ ರೆಡ್ಡಿ, ಗಂಜಿ ಸೀತಾರಾಮ್ ರೆಡ್ಡಿ, ಚಂದ್ರ ರೆಡ್ಡಿ, ರಮೇಶ್ ರೆಡ್ಡಿ, ಗಿರೀಶ್ ರೆಡ್ಡಿ ಸೇರಿದಂತೆ ಅಭಿಮಾನಿಗಳು, ಮುಖಂಡರು ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
