ಕುರುಗೋಡು: 16 ಕೋಟಿ ವೆಚ್ಚದಲ್ಲಿ ಎಮ್ಮಿಗನೂರು 110 ಕೆ.ವಿ ಕಾಮಗಾರಿಗೆ ಚಾಲನೆ
Team Udayavani, Jan 28, 2023, 3:44 PM IST
ಕುರುಗೋಡು : ಬಹುದಿನದ ರೈತರ ಕನಸಿನಂತೆ ಎಮ್ಮಿಗನೂರು ಗ್ರಾಮದಲ್ಲಿ 110 ಕೆ.ವಿ ವಿದ್ಯುತ್ ಉಪ ಕೇಂದ್ರದ ಕಾಮಗಾರಿಗೆ ಚಾಲನೆ ದೊರೆತಿರುವುದು ಸಂತಸ ತರಿಸಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಯೋಜನೆಯಡಿ ಸುಮಾರು 16 ಕೋಟಿ 20 ಲಕ್ಷ ವೆಚ್ಚದಲ್ಲಿ 33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂದ 110 ಕೆ.ವಿ ವಿದ್ಯುತ್ ಉಪ ಕೇಂದ್ರಕ್ಕೆ ಉನ್ನತೀಕರಿಸುವ ಕಾಮಗಾರಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಈ ಭಾಗದ ರೈತರಿಗೆ 110 ಕೆ.ವಿ ಕೊಡಿಸಬೇಕೆಂದು ಸತತ ನಾಲ್ಕು ವರ್ಷದ ನಿಂತರ ಪ್ರಯತ್ನದಿಂದಾಗಿ ಇಂದು 110 ಕೆ.ವಿ ವಿದ್ಯುತ್ ಉಪ ಕೇಂದ್ರ ಕಾಮಗಾರಿ ಕಾರ್ಯರೂಪಕ್ಕೆ ಬಂದಿದೆ. ಎಮ್ಮಿಗನೂರು, ಬಳಾಪುರ, ಒರ್ವಾಯಿ, ಶಂಕರ್ ಸಿಂಗ್ ಕ್ಯಾಂಪ್, ಸೇರಿದಂತೆ ಇತರೆ ಹಳ್ಳಿಗಳಿಗೆ ಎಮ್ಮಿಗನೂರು 110 ಕೆ.ವಿ ಅನುಕೂಲ ವಾಗಲಿದೆ ಎಂದರು.
ಇನ್ನೂ ಕೆಲ ದಿನಗಳಲ್ಲಿ ಕೊರ್ಲಗುಂದಿ, ಬಸರಕೋಡು, ದಮ್ಮೂರು ಗ್ರಾಮಗಳಲ್ಲಿ 110 ಕೆ. ವಿ. ವಿದ್ಯುತ್ ಗೆ ಚಾಲನೆ ದೊರೆಯಲಿದೆ.
ಈಗಾಗಲೇ 17 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ ಅದರ ಮೇಲೆ ರೈತರು ಟ್ರ್ಯಾಕ್ಟರ್ ವಿಲ್ ಗಳನ್ನು ಬಳಸದೆ ರಸ್ತೆಯ ಗುಣ ಮಟ್ಟತೆ ಯನ್ನು ಕಾಪಾಡಿಕೊಳ್ಳಬೇಕು ಎಂದು ರೈತರಿಗೆ ಕರೆ ನೀಡಿದರು.
ರೈತರ ಸಂಕಷ್ಟ ತಿಳಿಸಿರುವುದರಿಂದ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಮುಂದೆ ಜನರು ಆಶೀರ್ವಾದ ಮಾಡಿದರೆ, ಈ ಭಾಗದಲ್ಲಿ ಏತಾನೀರಾವರಿ ಮಾಡುವ ಜತೆಗೆ ರೈತರ ನೆಮ್ಮದಿಯ ಬದುಕಿಗಾಗಿ ನಾನಾ ಯೋಜನೆಗಳನ್ನು ತರಲಾಗುವುದು. ಮುಂದಿನ ದಿನದಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದ್ರೆ ಜನರಿಗೆ ಇನ್ನೂ ಹೆಚ್ಚು ಅನುಕೂಲ ವಾಗುವ ಅಭಿವೃದ್ಧಿ ಯೋಜನೆ ಗಳನ್ನು ಅವರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ನಂತರ ಗ್ರಾಮದ ಮುಖಂಡರು ಮಾತನಾಡಿ, ಶಾಸಕರ ಮುತುವರ್ಜಿಯಿಂದಾಗಿ ಎಮ್ಮಿಗನೂರು ಗ್ರಾಮದಲ್ಲಿ 110 ಕೆ.ವಿ ವಿದ್ಯುತ್ ಉಪ ಕೇಂದ್ರವಾಗಿದೆ. ರೈತರಿಗೆ ನೀಡುವ 7 ತಾಸು ವಿದ್ಯುತ್ ಸಾಕಾಗುತ್ತಿಲ್ಲ. ಆದ್ದರಿಂದ ಸತತ ಹತ್ತು ತಾಸು ವಿದ್ಯುತ್ ನೀಡಬೇಕು ಎಂದರು.
ಪ್ರಾರಂಭದಲ್ಲಿ ಶಾಸಕ ಗಣೇಶ್ ಗ್ರಾಮದ ವಾಮದೇವ ಮಹಾ ಸ್ವಾಮಿಗಳು ಮಠಕ್ಕೆ ತೆರಳಿ ಶ್ರೀಗಳ ಅಶ್ರಿವಾದ ಪಡೆದು, ಮುಖ್ಯ ರಸ್ತೆಯಿಂದ ಕೆ. ವಿ. ವರೆಗೆ ಮೆರವಣಿಗೆ ಮೂಲಕ ಬಂದು ಭೂಮಿ ಪೂಜೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಹಿಳೆ ಯರು, ಮುಖಂಡರು ಇದ್ದರು.
ಇದನ್ನೂ ಓದಿ: ತ್ರಿಪುರಾ ವಿಧಾನಸಭಾ ಚುನಾವಣೆ: 48 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಧಾನಿ ಮೋದಿ ಭೇಟಿಗೂ ಮುನ್ನ ಅಜಯ್ ಬಂಗಾ ಅವರಿಗೆ ಕೋವಿಡ್ ಪಾಸಿಟಿವ್
ವರುಣಾ ಸೇರಿ ಪ್ರಮುಖ ಕ್ಷೇತ್ರಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ: ಶಾ ಭೇಟಿ ಬಗ್ಗೆ ವಿಜಯೇಂದ್ರ
ದೆಹಲಿಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನಾ ಮೆರವಣಿಗೆಗೆ ಪೊಲೀಸರ ತಡೆ ; ವಿಡಿಯೋ
ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ
ಎರಡು ವರ್ಷ ಜೈಲು ಶಿಕ್ಷೆ ಪ್ರಕಟ: ಲೋಕಸಭೆಯಿಂದ ಅನರ್ಹಗೊಂಡ ರಾಹುಲ್ ಗಾಂಧಿ