ಕುಡಿಯುವ ನೀರಿಗಾಗಿ ನೀರೆಯರ ಪರದಾಟ

ಸಿರಿಗೇರಿ ಜನತಾ ಕಾಲೋನಿಯಲ್ಲಿ ಬಗೆಹರಿಯದ ಬರ !

Team Udayavani, Jun 22, 2020, 4:10 PM IST

22-June-16

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕುರುಗೋಡು: ಸಿರಿಗೇರಿ ಗ್ರಾಮದ ಜನತಾ ಕಾಲೋನಿಯಲ್ಲಿ ಸಾರ್ವಜನಿಕರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸಾರ್ವಜನಿಕರ ನಲ್ಲಿಗಳಿಗೆ ನಿತ್ಯ ನೀರು ಪೂರೈಸಲಾಗುತ್ತಿದೆ. ಆದರೆ ಸಂಪರ್ಕ ಹೊಂದಿರುವ ನಲ್ಲಿಗಳಲ್ಲಿ ನೀರಿನ ಸೆಲೆ ಕಡಿಮೆಯಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸರಿಯಾಗಿ ನೀರು ಸಿಗದೆ ನಿತ್ಯ ಸಮಸ್ಯೆಯಾಗಿದೆ.

ಈಗಾಗಲೇ ಗ್ರಾಮದಲ್ಲಿ ನಾಲ್ಕು ಬೋರ್‌ಗಳನ್ನು ಕೊರೆಸಿದ್ದರೂ ನೀರು ಬೀಳದೆ ತೊಂದರೆಯಾಗಿದೆ. ಗ್ರಾಮದ ಜನತಾ ಮತ್ತು ಆಚಾರಿ ಕಾಲೋನಿ ಜನರಿಗೆ ಅನುಕೂಲವಾಗುವಂತೆ ಹುಚ್ಚೇಶ್ವರ ನಗರ ಸೇರಿ ಶಾಸಕರ ಅನುದಾನದಡಿ ಈಗಾಗಲೇ 1 ಲಕ್ಷ ಲೀಟರ್‌ ಸಾಮಾರ್ಥ್ಯದ 2 ಒವರ್‌ ಟ್ಯಾಂಕ್‌ ಮಂಜೂರಾಗಿವೆ. ಹುಚ್ಚೇಶ್ವರ ನಗರದಲ್ಲಿ ಈಗಾಗಲೇ ಓವರ್‌ ಟ್ಯಾಂಕ್‌ ಕಾಮಗಾರಿ ಸಿದ್ಧಗೊಂಡು ಇನ್ನೇನು ನೀರು ಸಂಗ್ರಹಣೆ ಮಾಡಿ ಪೂರೈಸುವ ಹಂತ ತಲುಪಿದೆ.

ಜನತಾ ಕಾಲೋನಿಗೆ ಮಂಜೂರಾದ ಓವರ್‌ ಟ್ಯಾಂಕ್‌ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾಗಿತ್ತು. ನಿಗದಿ ಮಾಡಿದ ಜಾಗದಲ್ಲಿ ಟ್ಯಾಂಕ್‌ನ ಬೆಡ್‌ ಕಾಂಕ್ರಿಟ್‌ ಹಾಕುವುದಕ್ಕೆ ಮುಂದಾಗಿ ಕಲ್ಲುಗಳು ಬರುತ್ತಿವೆ ಎಂದು ಕಾಮಗಾರಿ ವಿಳಂಬ ಮಾಡಿದ್ದಾರೆ. ಇನ್ನೂ ಜನತಾ ಕಾಲೋನಿ ನಿವಾಸಿಗಳು ಸುಮಾರು ಹತ್ತಾರು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತ ಬರುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಹೊಂದುವುದು ಯಾವಾಗ ಎಂಬುದು ಜನರ ಪ್ರಶ್ನೆಯಾಗಿದೆ. ಸಾರ್ವಜನಿಕರ ಕುಡಿಯುವ ನೀರಿನ ಕೆರೆಯಿಂದ ನಲ್ಲಿಗಳಿಗೆ ನೀರು ಪೂರೈಸಿದರೆ ಜನತಾ ಕಾಲೋನಿ ನಿವಾಸಿಗಳಿಗೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ಜನ ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿ ನಲ್ಲಿಗಳಿಗೆ ಮೋಟರ್‌ ಅಳವಡಿಸುವುದನ್ನು ಕಡಿತಗೊಳ್ಳಿಸುವಂತೆ ತಿಳಿಸಿದರು. ಇಂದಿನವರೆಗೂ ಅತ್ತಕಡೆ ತಲೆ ಹಾಕಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈಗಲಾದ್ರೂ ನಲ್ಲಿಗಳಿಗೆ ಮೋಟರ್‌ ಅಳವಡಿಸುವುದನ್ನು ಅಧಿಕಾರಿಗಳು ನಿಲ್ಲಿಸಿ ಸಾರ್ವಜನಿಕರಿಗೆ ಸರಿಯಾಗಿ ನೀರು ಪೂರೈಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿಂದೆ ಜನತಾ ಕಾಲೋನಿಯಲ್ಲಿ ಓವರ್‌ ಟ್ಯಾಂಕ್‌ ನಿರ್ಮಾಣದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಅದು ವಿಳಂಬವಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷಣ ಸ್ಥಳೀಯ ಕಾಯಕರ್ತರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಹತ್ತಿರ ಮಾತನಾಡಿ ವ್ಯವಸ್ಥೆ ಮಾಡಿಕೊಡಲಾಗುವುದು. ಈ ವರದಿ ಬಗ್ಗೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸುತ್ತೇನೆ.
ಎಂ.ಎಸ್‌. ಸೋಮಲಿಂಗಪ್ಪ,
ಶಾಸಕರು ಸಿರುಗುಪ್ಪ

ಜನತಾ ಕಾಲೋನಿಯಲ್ಲಿ ನಿರ್ಮಾಣವಾಗಬೇಕಾದ ಓವರ್‌ ಟ್ಯಾಂಕ್‌ ಕಾಮಗಾರಿ ಅಲ್ಲಿ ಕಲ್ಲುಬಂಡೆಗಳು ಬಂದ ಕಾರಣ ಎಪಿಎಂಸಿ ಅವರಣದಲ್ಲಿ ಸ್ಥಾಪಿಸಲು ಎಲ್ಲ ಕಾರ್ಯ ನಡೆಯುತ್ತಿದೆ. ನಲ್ಲಿಗಳಿಗೆ ಮೋಟರ್‌ ಅಳವಡಿಸುವುದನ್ನು ತಕ್ಷಣವೇ ನಿಲ್ಲಿಸಿ ಎಲ್ಲ ನಿವಾಸಿಗಳಿಗೆ ನೀರು ಸರಬರಾಜು ಮಾಡುತ್ತೇವೆ.
ಯು.ರಾಮಪ್ಪ,
ಪಿಡಿಒ ಸಿರಿಗೇರಿ

ಸುಧಾಕರ್‌ ಮಣ್ಣೂರು

ಟಾಪ್ ನ್ಯೂಸ್

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

ಶಕ್ತಿ ಸೌಧದ ಆವರಣದಲ್ಲಿ ಅಂಬೇಡ್ಕರ್‌ ಸ್ಫೂರ್ತಿ ಭವನ

ಶಕ್ತಿ ಸೌಧದ ಆವರಣದಲ್ಲಿ ಅಂಬೇಡ್ಕರ್‌ ಸ್ಫೂರ್ತಿ ಭವನ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಡಿ ನಿಗದಿಗೆ ಮಾರ್ಗಸೂಚಿ

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಡಿ ನಿಗದಿಗೆ ಮಾರ್ಗಸೂಚಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kampli

ಸೇವೆ ಮಾಡದಿದ್ದರೆ ರಾಜಕೀಯಕ್ಕೆ ಬರಬಾರದು

cubic

ಸೈಕ್ಲೋನ್‌: ಮುಂಗಾರು ಕೈಕೊಡುವ ಸಾಧ್ಯತೆ

17arrest

2 ಮನೆ ಕಳ್ಳತನ ಆರೋಪಿ ಬಂಧನ

16death

ಏರ್‌ ಜಾಕ್‌ ಕುಸಿದು ಕಾರ್ಮಿಕ ಸಾವು

15canel

ತುಂಗಭದ್ರಾ ಜಲಾಶಯ ಒಳಹರಿವು ಹೆಚ್ಚಳ

MUST WATCH

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

ಹೊಸ ಸೇರ್ಪಡೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ತುಳುನಾಡಿನ ವಿಶಿಷ್ಟ ಪರ್ವದಿನ ಪತ್ತನಾಜೆ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಅಸ್ತಿತ್ವಕ್ಕೆ ಬರಲಿ

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ವಿಧಾನ ಕದನ : ಕಲ್ಪತರು ನಾಡಲ್ಲಿ ಪಕ್ಷಾಂತರಕ್ಕೆ ಸಜ್ಜಾದ ನಾಯಕರು

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಎಫ್ ಡಿಐ : ಕೇವಲ ಒಪ್ಪಂದಕ್ಕೆ ಸೀಮಿತವಾಗದೆ ಕಾರ್ಯಗತಗೊಳ್ಳಲಿ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

ಕುಂದಾಪುರದ ಅನಿಲ್‌ ಹೆಗ್ಡೆ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.