ಅಂಗಡಿಗಳದ್ದೇ ದರ್ಬಾರ್‌: ಸಚ್ಛತೆ ಮರೀಚಿಕೆ


Team Udayavani, Sep 27, 2020, 6:15 PM IST

ballary-tdy-1

ಕೊಟ್ಟೂರು: ಇತಿಹಾಸ ಪ್ರಸಿದ್ಧ ಬ್ರಿಟಿಷ್‌ ಆಡಳಿತಾವಧಿಯಲ್ಲಿ ಸ್ಥಾಪನೆಯಾದ ಬಾಲಕರ ಪ್ರೌಢಶಾಲೆ ಕಾಂಪೌಂಡ್‌ ಸುತ್ತಲೂ ಬರೀ ಅಂಗಡಿಗಳೇ ತಲೆ ಎತ್ತಿದ್ದು ಸ್ವಚ್ಛತೆ-ಶಾಂತತೆ ಮರೀಚಿಕೆಯಾಗಿದೆ!

ಪಟ್ಟಣದ ಏಕೈಕ ಪ್ರೌಢಶಾಲೆ ಇದಾಗಿದ್ದು ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ಕಲಿತು ಉನ್ನತ ಪದವಿಯಲ್ಲಿದ್ದಾರೆ. ಇಂಥ ಅತ್ಯುನ್ನತ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಪ್ರೌಢಶಾಲೆ ಸ್ವಚ್ಛತೆ ಕಾಣದೆ ಹಾಳು ಕೊಂಪೆಯಂತೆ ಕಾಣುತ್ತಿದೆ.

ಶಾಲೆಯಿಂದ ಕನಿಷ್ಟ 100 ಮೀಟರ್‌ ಅಂತರದಲ್ಲಿ ಪಾನ್‌ಬೀಡಾ-ಗುಟಕಾ-ತಂಬಾಕು ಮಾರಾಟ ಮಾಡುವಂತೆ ಕಾನೂನಿದ್ದರೂ ಅ ಕಾನೂನು ಇಲ್ಲಿ ಉಲ್ಲಂಘನೆಯಾಗಿದೆ. ಮಾಂಸದ ವ್ಯಾಪಾರವೂ ಜೋರಾಗಿದ್ದು ಮಕ್ಕಳು-ಕಾಲೇಜು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಮಾಂಸದ ಅಂಗಡಿ-ಎಗ್‌ರೈಸ್‌ ಅಂಗಡಿಗಳಿರುವುದರಿಂದ ಕಾಗೆಗಳ ಕಾಟ, ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಕ್ಕಳ ಮೇಲೂ ಎರಗಿ ಬಂದಿವೆ. ಇದರಿಂದ ಮಕ್ಕಳು-ಸಾರ್ವಜನಿಕರು ಭೀತಿಯಿಂದಲೇ ಓಡಾಡುವ ಸ್ಥಿತಿ ಇದೆ.

ಎಗ್‌ರೈಸ್‌ ಮಾಡುವಾಗ ಎಷ್ಟೋ ಸಲ ಖಾರದ ಪುಡಿ ಸವಾರರ ಕಣ್ಣಿಗೆ ಬಿದ್ದು ಅಂಗಡಿಕಾರರೊಂದಿಗೆ ವಾಗ್ಧಾದ ನಡೆದ ಉದಾಹರಣೆಗಳು ಇದೆ. ಅಂಗಡಿ ಮಾಲೀಕರು ಮಾಂಸ ತೊಳೆದ ನೀರನ್ನು ಚರಂಡಿಗೆ ಸುರಿಯುತ್ತಿರುವುದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ರೋಗ ಹರಡುವ ಭೀತಿ ಎದುರಾಗಿದೆ. ಸಂಜೆ 5ರ ನಂತರ ಇನ್ನೂ ಜನಜಂಗುಳಿ ಹೆಚ್ಚಾಗಿ ಕುಡುಕರ ಹಾವಳಿಯಿಂದಾಗಿ ಸಾರ್ವಜನಿಕರು ಓಡಾಟಕ್ಕೆ ತೊಂದರೆಯಾಗುತ್ತಿದೆ. ವಿದ್ಯಾರ್ಜನೆಗೆ ಬೇಕಾಗುವ ಪರಿಸರ ಇಲ್ಲದಂತಾಗಿದೆ. ಈ ಸಂಬಂಧ ಯಾವೊಬ್ಬ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪರಿಸರದ ನಿರ್ಮಾಣವು ಇಲ್ಲಿನ ಪಟ್ಟಣ ಪಂಚಾಯಿತಿ ಮತ್ತು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿರುವುದರಿಂದ ಕೂಡಲೇ ಶಾಲೆ ಕಾಂಪೌಂಡ್‌ನ‌ ಸುತ್ತಲಿರುವ ಎಲ್ಲ ವ್ಯಾಪಾರ ವಹಿವಾಟಿನ ಅಂಗಡಿಗಳನ್ನು ನಿಗದಿತ ಸ್ಥಳಕ್ಕೆ ತೆರವುಗೊಳಿಸಿ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾವೆಲ್ಲಾ ಇದೇ ಬಾಲಕರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ. ನಾವು ಓದುವಾಗ ಉತ್ತಮ ಪರಿಸರವಿತ್ತು. ಶಾಲೆಗೆ ಬಂದರೆ ಖುಷಿಯಾಗುತ್ತಿತ್ತು. ಇಂಥ ಶಾಲೆ ಈಗ ಬರೀ ಅಂಗಡಿಗಳಿಂದ ಸುತ್ತುವರಿದು ಸ್ವತ್ಛತೆ ಇಲ್ಲದೆ ಶಾಲೆಯೇ ಇಲ್ಲದಂತಾಗಿದೆ. ಬರೀ ಬೀಡಿ ಸಿಗರೇಟ್‌, ಮಾಂಸ ವ್ಯಾಪಾರಗಳೇ ಹೆಚ್ಚಾಗಿದ್ದು ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಯಾವುದೇ ಆಸಕ್ತಿ ಇಲ್ಲದಂತಾಗಿದೆ. ಕೂಡಲೇ ಅಧಿಕಾರಿಗಳು ಈ ಅಂಗಡಿಗಳನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಿ ಇತಿಹಾಸ ಪ್ರಸಿದ್ಧ ಶಾಲೆಯಲ್ಲಿ ಮತ್ತೆ ಸ್ವತ್ಛತೆ ಕಾಪಾಡಿ ಜ್ಞಾನಾರ್ಜನೆಗೆ ಬೇಕಾಗುವ ಪರಿಸರ ನಿರ್ಮಾಣ ಮಾಡಬೇಕು. ಹೆಸರು ಹೇಳಲಿಚ್ಛಿಸದ ಶಾಲೆ ಹಳೆ ವಿದ್ಯಾರ್ಥಿ

ತಂಬಾಕು-ಬೀಡಿ-ಸಿಗರೇಟ್‌ ಇತರೆ ವ್ಯಾಪಾರಿಗಳು ಶಾಲೆಯಿಂದ ದೂರವಿರಲು ಸರ್ಕಾರದ ಆದೇಶವಿದೆ. ಆದರೂ ವ್ಯಾಪಾರ ಮಾಡುತ್ತಿರುವವರನ್ನೂ ಬೀದಿಬದಿಯ ವ್ಯಾಪಾರಗಳ ವಲಯ ಜಾಗವನ್ನು ಗುರುತಿಸಿ ಕೂಡಲೇ ಒಂದೇ ಜಾಗದಲ್ಲಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಲಾಗುವುದು. ಶಾಲಾ ಸುತ್ತಮುತ್ತಲೂ ಸ್ವಚ್ಛತೆ ಕಾಪಾಡಲು ಸ್ಥಳೀಯ ಆಡಳಿತಕ್ಕೆ ಸೂಚಿಸುತ್ತೇವೆ. ಜಿ. ಅನಿಲ್‌ಕುಮಾರ. ದಂಡಾಧಿಕಾರಿ ಕೊಟ್ಟೂರು

 

ಎಂ. ರವಿಕುಮಾರ

ಟಾಪ್ ನ್ಯೂಸ್

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khandre

KIOCL ಗೆ ದೇವದಾರಿ ಗಣಿಗಾರಿಕೆ ಭೂಮಿ ಹಸ್ತಾಂತರಿಸದಂತೆ ಸಚಿವ ಖಂಡ್ರೆ ಪತ್ರ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

25

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ 24ಕ್ಕೆ ಸಭೆ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

shivamogga

Shimoga; ವಾಲ್ಮೀಕಿನಿಗಮದ ಚಂದ್ರಶೇಖರ್ ಆತ್ಮಹತ್ಯೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

20-uv-fusion

UV Fusion: ಪ್ರಕೃತಿ ಶಾಶ್ವತ ಮನುಷ್ಯನ ಕೊಡುಗೆ ನಿಮಿತ್ತ…

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

Panaji: Smart city ಕಾಮಗಾರಿಗಳ ವರದಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ: ಗೋವಾ ಸಿಎಂ

19-fusion

Father: ನಮಗಾಗಿ ದುಡಿದ ನಾಯಕ ನಮ್ಮ ಜನಕ

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.