Udayavni Special

ಅರಸೀಕೆರೆ ರಸ್ತೆ ದುರಸ್ತಿಗಾಗಿ ಪ್ರತಿಭಟನೆ


Team Udayavani, Oct 17, 2020, 6:34 PM IST

BALLARY-TDY-1

ಹರಪನಹಳ್ಳಿ: ತಾಲೂಕಿನ ಅರಸೀಕೆರೆಯಿಂದ ಕಂಚಿಕೆರೆ ರಸ್ತೆ ದುರಸ್ತಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಅರಸೀಕೆರೆ ಗ್ರಾಮದ ಹೊರ ಹೊಲಯದ ತೌಡೂರು ರಸ್ತೆ ಪೆಟ್ರೋಲ್‌ ಬಂಕ್‌ ವೃತ್ತದ ಬಳಿ ರಸ್ತೆತಡೆ ನಡೆಸಿದರು.

ಭಾರತ ಕಮ್ಯುನಿಸ್ಟ್‌ ಪಕ್ಷ, ರಾಜ್ಯ ರೈತ ಸಂಘ-ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು 2 ಗಂಟೆಗೂ ಅಧಿಕ ಸಮಯ ರಸ್ತೆ ತಡೆ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿ ಮೆಕ್ಕೆಜೋಳ-ರಾಗಿ ಸಸಿ ನೆಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ವಾಹನ ಸವಾರರು ನೂರಾರು ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಗೆ ಬೆಂಬಲಿಸಿದರು.

ಅರಸೀಕೆರೆಯಿಂದ ಕಂಚಿಕೆರೆ ಮಾರ್ಗದ ರಸ್ತೆ ರಾಜ್ಯ ಮುಖ್ಯ ಹೆದ್ದಾರಿಯಾಗಿದ್ದು, ಸುಮಾರು30 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಇದೀಗ ಹದಗೆಟ್ಟು ಮೊಳಕಾಲು ಉದ್ದ ಗುಂಡಿಗಳಿಂದ ಕೂಡಿದ್ದು ಕೆಸರುಗದ್ದೆಯಂತಾಗಿದೆ. ರಸ್ತೆಯಲ್ಲಿ ಸಂಚರಿಸುವವರಿಗೆ ಜೀವಕ್ಕೆ ಸಂಚಕಾರ ಎದುರಾಗಿದೆ. ಸಾರ್ವಜನಿಕರು ಈ ದಾರಿಯಲ್ಲಿಬಿದ್ದು ಮೂಳೆಮುರಿತದಂತಹ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಮುಖ್ಯವಾಗಿ ಅಂಬ್ಯುಲೆನ್ಸ್‌ ವಾಹನಗಳು ತುರ್ತು ಚಿಕಿತ್ಸೆಗೆ, ಗರ್ಭಿಣಿಯರನ್ನು, ರೋಗಿಗಳನ್ನು ದಾವಣಗೆರೆಗೆ ಇದೇ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಈ ಹಿಂದೆ ಹಲವು ಬಾರಿ ಹೋರಾಟ ನಡೆಸಿ ಮನವಿ ಮಾಡಿದ್ದರೂ ಸಂಬಂಧಿಸಿದ ಕಿವುಡ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷéವಹಿಸಿ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ರಸ್ತೆ ಕಾಮಗಾರಿ ಅರಂಭಿಸುವಂತೆ ಆಗ್ರಹಿಸಿದರು.

ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಜೆಸಿಬಿ ತರಿಸಿ ಮಣ್ಣು ಹಾಕಿಸುವ ಕಾರ್ಯಕ್ಕೆ ಮುಂದಾದರು. ಸ್ಥಳಕ್ಕೆ ಆಗಮಿಸಿದ ಉಪತಹಶೀಲ್ದಾರ್‌ ಫಾತಿಮಾ, ಇಂಜಿನಿಯರ್‌ ಮಹೇಶನಾಯ್ಕ ಅವರ ಮುಖಾಂತರ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.

ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್‌, ಹೊಸಳ್ಳಿ ಮಲ್ಲೇಶ, ಬೂದಿಹಾಳ ಸಿದ್ದೇಶಪ್ಪ, ಕಬ್ಬಳ್ಳಿ ಮೈಲಪ್ಪ, ಕಬ್ಬಳ್ಳಿ ಬಸವರಾಜ್‌, ಮಾದಿಹಳ್ಳಿ ಮಂಜಪ್ಪ, ಕರಡಿದುರ್ಗ ಚೌಡಪ್ಪ, ತೌಡೂರು ಕೊಟ್ರಯ್ಯ, ಪುಣಭಗಟ್ಟಿ ಮಂಜಪ್ಪ, ಕರಿಬಸಪ್ಪ ಸಿದ್ದಯ್ಯನಕೋಟೆ, ಗೊಲ್ಲರಹಟ್ಟಿ ರಮೇಶ್‌, ಬಳಿಗನೂರು ಕೊಟ್ರಯ್ಯ, ಗುಡಿಹಳ್ಳಿ ಬಸವರಾಜ್‌, ಎಂ.ಮೂಗಪ್ಪ ಬೂದಿಹಾಳ್‌, ಟ್ರಾಕ್ಸ್‌ ಮಂಜುನಾಥ, ಕಂಚಿಕೆರೆ ಸುರೇಶ, ಪ್ರಭುಗೌಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ರಸ್ತೆ ದುರಸ್ತಿಗೆ ಒತ್ತಾ ಯಿಸಿ ಚಪ್ಪಲಿಯಲ್ಲಿ ಹೊಡೆದುಕೊಂಡ :

ಹರಪನಹಳ್ಳಿ: ಗುಂಡಿ ಬಿದ್ದಿರುವ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಹೋರಾಟಗಾರನೊಬ್ಬ ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡು ವಿನೂತನವಾಗಿ ಪ್ರತಿಭಟಿಸಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ತಾಲೂಕಿನ ಅರಸೀಕೆರೆಯಿಂದ ಕಂಚಿಕೆರೆ ರಸ್ತೆ ದುರಸ್ತಿಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್‌, ಮಳೆಗಾಲದ ನಂತರ ಕಾಮಗಾರಿ ನಡೆಸಲಾಗುವುದು ಎನ್ನುತ್ತಿದ್ದಂತೆಯೇಪ್ರತಿಭಟನಾಕಾರ ಸತ್ತೂರು ಮಹಾದೇವಪ್ಪ ಕೆಸರುಗದ್ದೆಯಂತಾದ ರಸ್ತೆ ಗುಂಡಿಯಲ್ಲಿ ಬಿದ್ದು ಹೊರಳಾಡುತ್ತಾ ರಸ್ತೆ ನಿರ್ಮಾಣ ಮಾಡಿ, ಇಲ್ಲವೇ ಸಾಯಲು ಬಿಡಿ ಎಂದು ಕೂಗುತ್ತಾ ಆತ್ಮಹತ್ಯೆಬೆದರಿಕೆಯೊಡ್ಡಿದ್ದಾರೆ. ಅಲ್ಲದೇ ತನ್ನ ಚಪ್ಪಲಿಯಿಂದ ತಾನೇ ತಲೆಗೆ ಬಡಿದುಕೊಳ್ಳುತ್ತಾ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಂತರ ಹೋರಾಟಗಾರರು ಸತ್ತೂರು ಮಹಾದೇವಪ್ಪ ಅವರನ್ನು ಮನವೊಲಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

netflix

Stream Fest: ಇನ್ನು ಮುಂದೆ ಉಚಿತವಾಗಿ Netflix ವೀಕ್ಷಿಸಬಹುದು: ಹೇಗೆ ಗೊತ್ತಾ ?

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

ghorka

ಪ್ರಮುಖ ಬೆಳವಣಿಗೆ: ಎನ್ ಡಿಎ ಮೈತ್ರಿಕೂಟದಿಂದ ಹೊರಬಂದ ಗೂರ್ಖಾ ಜನಮುಕ್ತಿ ಮೋರ್ಚಾ

mandya

ಮಂಡ್ಯದಲ್ಲಿ 202 ಕೋವಿಡ್ ಹೊಸ ಪ್ರಕರಣ; 104 ಮಂದಿ ಚೇತರಿಕೆ

cricket

ಜಯದ ವಿಶ್ವಾಸದಲ್ಲಿ RCB-KKR: ಟಾಸ್ ಗೆದ್ದ ಮಾರ್ಗನ್ ಪಡೆ ಬ್ಯಾಟಿಂಗ್ ಆಯ್ಕೆ: ತಂಡ ಇಂತಿದೆ…

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

ಕಿಡಿಗೇಡಿಗಳಿಂದ ಅವಹೇಳನಕಾರಿ ಫ್ಲೆಕ್ಸ್ : ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು

4 ಜಿಲ್ಲೆಗಳಿಗೆ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

4 ಜಿಲ್ಲೆಗಳ ಸಿಎಂ ವೈಮಾನಿಕ ಸಮೀಕ್ಷೆ : ಹವಾಮಾನ ವೈಪರೀತ್ಯದಿಂದ ವಿಜಯಪುರ ಸಮೀಕ್ಷೆ ರದ್ದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ballary-tdy-2

ವಾರಿಯರ್ಸ್‌ ಕುಟುಂಬಕ್ಕೆ ಸಿಕ್ಕಿಲ್ಲ ಪರಿಹಾರ

BALLRY-TDY-1

ಬಾಲ್ಯ ವಿವಾಹಕೆ ಸಹಕರಿಸಿದವರ ಮೇಲೂ ಪ್ರಕರಣ

BALLARY-TDY-1

ನಿಯಮ ಉಲ್ಲಂಘಿಸಿದಲ್ಲಿ ಕ್ರಮ

ballary-tdy-1

ಹತ್ರಾಸ್‌ ಘಟನೆ ಖಂಡಿಸಿ ವಿವಿದ ಸಂಘಟನೆ ಪ್ರತಿಭಟನೆ

Ballary-tdy-1

ಮಂಗಗಳ ಉಪಟಳ: ಜನರ ಕಳವಳ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಕಾಳ ಸಂತೆಗೆ ಕ್ಷೀರಭಾಗ್ಯ ಹಾಲಿನ ಪೌಡರ್ : 34 ಲಕ್ಷ ಮೊತ್ತದ ಹಾಲಿನ ಪೌಡರ ವಶ

ಕಾಳ ಸಂತೆಗೆ ಕ್ಷೀರಭಾಗ್ಯ ಹಾಲಿನ ಪೌಡರ್ : 34 ಲಕ್ಷ ಮೊತ್ತದ ಹಾಲಿನ ಪೌಡರ ವಶ

ತಣ್ಣೀರುಬಾವಿ: ಸಮುದ್ರತಟದಲ್ಲಿ ಅರಣ್ಯೀಕರಣ!

ತಣ್ಣೀರುಬಾವಿ: ಸಮುದ್ರ ತಟದಲ್ಲಿ ಅರಣ್ಯೀಕರಣ!

MLR

“ಮುಡಾ’ ಅದಾಲತ್:‌ 25ಕ್ಕೂ ಅಧಿಕ ಅರ್ಜಿ ವಿಲೇವಾರಿ

netflix

Stream Fest: ಇನ್ನು ಮುಂದೆ ಉಚಿತವಾಗಿ Netflix ವೀಕ್ಷಿಸಬಹುದು: ಹೇಗೆ ಗೊತ್ತಾ ?

00

ಆರ್ ಸಿಬಿ ಬೊಂಬಾಟ್ ಬೌಲಿಂಗ್ ಗೆ ಕೆಕೆಆರ್ ಬ್ಯಾಟಿಂಗ್ ತತ್ತರ : 85 ರ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.