
ಬೀದಿನಾಯಿ ಕಡಿತ: ಏಳು ಜನರು ವಿಮ್ಸ್ ಗೆ ದಾಖಲು
Team Udayavani, Feb 7, 2023, 11:32 AM IST

ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು ಸುಮಾರು 20ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಮಂಗಳವಾರ ನಡೆದಿದೆ.
ನಗರದ 30ನೇ ವಾರ್ಡ್ ನ ವಟ್ಟಪ್ಪಗೇರಿಯಲ್ಲಿ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಮಹಿಳೆಯರು, ಮಕ್ಕಳು ಸೇರಿ 7 ಜನರು ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ವಟ್ಟಪ್ಪಗೇರಿಯ ಜನರು ನಾಯಿಯ ಹುಚ್ಚಾಟಕ್ಕೆ ರಾತ್ರಿಯಿಂದಲೇ ನಲುಗಿದ್ದಾರೆ. ಸೋಮವಾರ ರಾತ್ರಿ ಏಕಾಏಕಿ ದಾಳಿ ನಡೆಸಿದ ನಾಯಿ ಸುಮಾರು 20 ಕ್ಕೂ ಹೆಚ್ಚು ಜನರಿಗೆ ಕಚ್ಚಿ ಪರಾರಿಯಾಗಿದೆ. ನಾಯಿ ಕಡಿತದಿಂದ ಗಾಯಗೊಂಡಿರುವ ಏಳು ಜನರು ತಡರಾತ್ರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದಿನಾಯಿಗಳ ದಾಳಿಯಿಂದ ವಟ್ಟಪ್ಪಗೇರಿ ಸೇರಿ ಕೌಲ್ ಬಜಾರ್ ನಿವಾಸಿಗಳು ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್

ಬಳ್ಳಾರಿ ಪಾಲಿಕೆ ಮೇಯರ್ ಆಗಿ ಕಾಂಗ್ರೆಸ್ ನ ತ್ರಿವೇಣಿ ಆಯ್ಕೆ,ಜಾನಕಿ ಉಪಮೇಯರ್

ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ: 10.65 ಲಕ್ಷ ರೂ.ಸಂಗ್ರಹ

ಎಲ್ಲೇ ಸ್ಪರ್ಧೆ ಮಾಡಿದರೂ ಸಿದ್ದರಾಮಯ್ಯ ಗೆಲ್ಲುತ್ತಾರೆ : ಶಾಸಕ ಜೆ.ಎನ್.ಗಣೇಶ್