Udayavni Special

ನಿವೇಶನ ಹಕ್ಕು ಪತ್ರ ನೀಡಲು ಆಗ್ರಹ


Team Udayavani, Nov 26, 2020, 6:35 PM IST

ನಿವೇಶನ ಹಕ್ಕು ಪತ್ರ ನೀಡಲು ಆಗ್ರಹ

ಸಿರುಗುಪ್ಪ: ತಾಲೂಕು ಮುದೇನೂರು ಗ್ರಾಮದ 152 ಸಂತ್ರಸ್ತರು ತಮಗೆ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಮುದೇನೂರು ಗ್ರಾಮದ ನೆರೆ ಸಂತ್ರಸ್ತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.

ನೆರೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎಸ್‌. ವೀರೇಶ್‌ ಮಾತನಾಡಿ, 2009ರಲ್ಲಿ ವೇದಾವತಿ ಹಗರಿ ನದಿ ನೀರು ಮತ್ತು ಮಳೆ ಸುರಿದಿದ್ದರಿಂದ ಗ್ರಾಮಕ್ಕೆ ನೀರು ನುಗ್ಗಿ ಮನೆಗಳು ಹಾನಿಯಾಗಿ ವಾಸಮಾಡಲು ಯೋಗ್ಯವಿಲ್ಲವೆಂದು ಅಲ್ಲದೆ ಪದೇ ಪದೇ ವೇದಾವತಿ ಹಗರಿ ನದಿಯ ನೀರು ಗ್ರಾಮಕ್ಕೆ ನುಗ್ಗುತ್ತವೆ ಎನ್ನುವ ಕಾರಣಕ್ಕೆ ನಮ್ಮ ಗ್ರಾಮದ ಹತ್ತಿರ ನವಗ್ರಾಮ ನಿರ್ಮಾಣ ಮಾಡಲಾಯಿತು.

ಇದರಲ್ಲಿ 327 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಆದರೆ 175 ಜನಕ್ಕೆ ಮಾತ್ರ ಆಸರೆ ಮನೆ ಹಂಚಿಕೆ ಮಾಡಿ, 152 ಜನ ಫಲಾನುಭವಿಗಳಿಗೆ ಇಲ್ಲಿಯವರೆಗೆ ಆಸರೆ ಯೋಜನೆ ಮನೆಯನ್ನು ನಿರ್ಮಾಣಮಾಡಿಲ್ಲ, ಖಾಲಿ ನಿವೇಶನವನ್ನು ಕೂಡ ನೀಡಿ ಹಕ್ಕುಪತ್ರ ಹಂಚಿಕೆ ಮಾಡಿಲ್ಲ. ಇದರಿಂದಾಗಿ 152 ಕುಟುಂಬಗಳು ಕಳೆದ 11 ವರ್ಷಗಳಿಂದ ಮುರುಕಲು ಮನೆಯಲ್ಲಿಯೇ ವಾಸ ಮಾಡುತ್ತಿದ್ದೇವೆ. ಖಾಲಿ ನಿವೇಶನಕ್ಕೆ ಹಕ್ಕಪತ್ರ ನೀಡಿದರೆ ನಾವಾದರೂ ಮನೆ ಕಟ್ಟಿಕೊಳ್ಳುತ್ತೇವೆಂದು ಕಳೆದ 9ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಇಲ್ಲಿಯವರೆಗೂ ನಮಗೆ ಖಾಲಿ ನಿವೇಶನದ ಹಕ್ಕುಪತ್ರವನ್ನಾಗಲಿ ಅಥವಾ ಆಸರೆ ಯೋಜನೆಯಡಿ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ನಮ್ಮ ಬದುಕು ಮೂರಾಬಟ್ಟೆಯಾಗಿದೆ.

ಕಳೆದ 9 ವರ್ಷಗಳಿಂದಲೂ ಅಧಿಕಾರಿಗಳು ನಿಮಗೆ ಮನೆ ಕಟ್ಟಿಸಿಕೊಡುತ್ತೇವೆ. ಇಲ್ಲವೆ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ. ಇದರಿಂದಾಗಿ ನಾವು ಬದುಕು ನಡೆಸುವುದು ಕಷ್ಟಕರವಾಗಿದೆ. ಇನ್ನಾದರೂ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ನಿವೇಶನ ಹಂಚಿಕೆ ಮಾಡಿ, ಮನೆ ಕಟ್ಟಿಕೊಟ್ಟು ಹಕ್ಕುಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಸಂತ್ರಸ್ಥೆ ಸಣ್ಣಮ್ಮ ಮಾತನಾಡಿ, ಮುರುಕಲು ಗುಡಿಸಲು, ಮನೆಗಳಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ನಾವು ಅನೇಕ ಬಾರಿ ನಮ್ಮ ಸಮಸ್ಯೆ ಪರಿಹರಿಸಿ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು. ಮುಖಂಡರಾದ ಎಚ್‌ .ಬಿ. ಗಂಗಪ್ಪ, ಬಿ. ಅಡಿವೆಪ್ಪ, ಮಲ್ಲಪ್ಪ, ಮಾರೆಪ್ಪ, ಸಿದ್ದಪ್ಪ, ಹನುಮೇಶ, ಎಚ್‌. ವೀರೇಶ, ಎಸ್‌. ರಫಿ, ಸಣ್ಣಯ್ಯ, ಬಿ.ಹನುಮೇಶ, ನಾಡಂಗ ಚಂದ್ರ ಮತ್ತು ಸಂತ್ರಸ್ಥರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಜರಂಗಿ-2, ಸಲಗ.. ಸ್ಟಾರ್‌ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್‌ ಫಿಕ್ಸ್

ಭಜರಂಗಿ-2, ಸಲಗ.. ಸ್ಟಾರ್‌ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್‌ ಫಿಕ್ಸ್

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಸಾಲ ನೀಡದಿದ್ದರೆ ಉತ್ತಮ!

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಸಾಲ ನೀಡದಿದ್ದರೆ ಉತ್ತಮ!

ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಇನ್ನಿಲ್ಲ

ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಇನ್ನಿಲ್ಲ

cabinet

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಂಗಾರಗೆ ಮೀನುಗಾರಿಕೆ; ಎಂಟಿಬಿಗೆ ಅಬಕಾರಿ

Untitled-2

ಸಂಗೀತದ ಮೂಲ ಧರ್ಮ; ಬಳಿಕ ಸಂಸ್ಕೃತಿ, ವ್ಯವಹಾರ

ಕಾಯಕ ಶ್ರದ್ಧೆಗೆ ರೂಪಕವಾದ ಶ್ರೀಗಳು

ಕಾಯಕ ಶ್ರದ್ಧೆಗೆ ರೂಪಕವಾದ ಶ್ರೀಗಳು

ಒಂದೂವರೆ ವರ್ಷ  ಕೃಷಿ ಕಾಯ್ದೆ ಅಮಾನತು?

ಒಂದೂವರೆ ವರ್ಷ ಕೃಷಿ ಕಾಯ್ದೆ ಅಮಾನತು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Preparing for the Republic Day

ಗಣರಾಜ್ಯೋತ್ಸವಕ್ಕೆಸಕಲ ಸಿದ್ಧತೆ

Devadasi’s protest

ದೇವದಾಸಿಯರ ಮಾಸಾಶನ ಹೆಚಳಕ್ಕೆ ಆಗ್ರಹ

From education to omnipresent personality

ಶಿಕ್ಷಣದಿಂದ ಸರ್ವಾಂಗೀಣ ವ್ಯಕ್ತಿತ್ವ

Congress for the Protection of Farmers

ರೈತರ ರಕ್ಷಣೆಗಾಗಿ ಕಾಂಗ್ರೆಸ್‌ನಡಿಗೆ ಅನ್ನದಾತರ ಬಳಿಗೆ

Insist on liquor store evacuation

ಮದ್ಯದಂಗಡಿ ತೆರವಿಗೆ ಒತ್ತಾಯ

MUST WATCH

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

ಹೊಸ ಸೇರ್ಪಡೆ

ಭಜರಂಗಿ-2, ಸಲಗ.. ಸ್ಟಾರ್‌ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್‌ ಫಿಕ್ಸ್

ಭಜರಂಗಿ-2, ಸಲಗ.. ಸ್ಟಾರ್‌ ಸಿನಿಮಾಗಳ ರಿಲೀಸ್‌ಗೆ ಕೊನೆಗೂ ಡೇಟ್‌ ಫಿಕ್ಸ್

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಸಾಲ ನೀಡದಿದ್ದರೆ ಉತ್ತಮ!

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಸಾಲ ನೀಡದಿದ್ದರೆ ಉತ್ತಮ!

ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಇನ್ನಿಲ್ಲ

ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಇನ್ನಿಲ್ಲ

cabinet

ಕೊನೆಗೂ ನೂತನ ಸಚಿವರಿಗೆ ಖಾತೆ ಹಂಚಿಕೆ: ಅಂಗಾರಗೆ ಮೀನುಗಾರಿಕೆ; ಎಂಟಿಬಿಗೆ ಅಬಕಾರಿ

Untitled-2

ಚಿಕ್ಕಮಗಳೂರು : 400 ಕೋಟಿ ರೂ. ಬಿಡುಗಡೆ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.