ತೋಟಗಾರಿಕೆ ಕಾಲೇಜಿಗೆ 49 ಎಕರೆ ಭೂಮಿ ಹಸ್ತಾಂತರ: ಎಂಎಲ್‌ಸಿ ಅರಳಿ

2008ರಲ್ಲಿ ಅಂದಿನ ಡಿಸಿ ಹರ್ಷಗುಪ್ತ ರೇಷ್ಮೆ ಇಲಾಖೆಯ ಜಮೀನು ತೋರಿಸಿದ್ದರು.

Team Udayavani, Jan 16, 2021, 3:33 PM IST

ತೋಟಗಾರಿಕೆ ಕಾಲೇಜಿಗೆ 49 ಎಕರೆ ಭೂಮಿ ಹಸ್ತಾಂತರ: ಎಂಎಲ್‌ಸಿ ಅರಳಿ

ಬೀದರ: ತಾಲೂಕಿನ ಕೋಳಾರ (ಕೆ) ಗ್ರಾಮದಲ್ಲಿರುವ ರೇಷ್ಮೆ ಇಲಾಖೆಯ ಸುಮಾರು 49.23 ಎಕರೆ ಜಮೀನನ್ನು ಹಳ್ಳದಕೇರಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಉಚಿತವಾಗಿ ಹಸ್ತಾಂತರಿಸಲು ಸರ್ಕಾರ ಆದೇಶಿಸಿದೆ ಎಂದು ಎಂಎಲ್‌ಸಿ ಅರವಿಂದಕುಮಾರ ಅರಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೀದರ ತೋಟಗಾರಿಕೆ ಕಾಲೇಜಿಗೆ ನಿಯಮದಂತೆ ಮೂಲ ಸೌಕರ್ಯಕ್ಕಾಗಿ 80 ಎಕರೆ ಜಮೀನು ಹೊಂದಿರಬೇಕೆಂಬ ನಿಯಮವಿದೆ. ಆದರೆ, ಈ ಕಾಲೇಜಿಗೆ 27.20 ಎಕರೆ ಮಾತ್ರ ಜಮೀನು ಇದೆ. ಕಳೆದ ಹಲವು ವರ್ಷಗಳಿಂದ ಕಾಲೇಜು ಉಳಿಸಿಕೊಳ್ಳುವ ಪ್ರಯತ್ನದ ಮಧ್ಯ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹಾಗೂ ಹಿಂದಿನ ಡಿಸಿ ಡಾ| ಮಹಾದೇವ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಜಮೀನು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಈಗ ಕಾಲೇಜಿಗೆ ಜಮೀನು ನೀಡಬೇಕೆಂಬ ಆದೇಶ ನನ್ನಲ್ಲಿನ ಆತಂಕ ದೂರ ಆದಂತಾಗಿದೆ ಎಂದರು.

ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಪರಿಶೀಲನೆಗಾಗಿ ಪ್ರತಿ 5 ವರ್ಷಕ್ಕೊಮ್ಮೆ ಬರುವ ಐಸಿಎಂಆರ್‌ ತಂಡವು ಆರಂಭದ 5 ವರ್ಷದಲ್ಲಿ ಇನ್ನಷ್ಟು ಜಮೀನು ಪಡೆಯಲು ಹೇಳಿತ್ತು.  2008ರಲ್ಲಿ ಅಂದಿನ ಡಿಸಿ ಹರ್ಷಗುಪ್ತ ರೇಷ್ಮೆ ಇಲಾಖೆಯ ಜಮೀನು ತೋರಿಸಿದ್ದರು. ನಂತರ ಡಿಸಿ ಪಿ.ಸಿ. ಜಾಫರ್‌ ಅವರೂ ಸಂಬಂಧಪಟ್ಟ ಇಲಾಖೆಗೆ ಈ ಕುರಿತು ಪತ್ರ ವ್ಯವಹಾರ ನಡೆಸಿದ್ದರೆಂದು ಮಾಹಿತಿ ನೀಡಿದರು.

2014ರಲ್ಲಿ ಸಿದ್ದರಾಮಯ್ಯ ಸರ್ಕಾರ ರೇಷ್ಮೆ ಇಲಾಖೆಗೆ ಸೇರಿದ ಸರ್ವೇ ನಂ. 287/1ರಲ್ಲಿ 40 ಎಕರೆ ಜಮೀನನ್ನು ಡಿಸಿ ನಿಗದಿಪಡಿಸಿದ ದರಕ್ಕೆ ಹಾಗೂ 20 ವಸತಿ ಗೃಹಗಳನ್ನು ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ದರದಂತೆ ತೋಟಗಾರಿಕೆ ವಿವಿಗೆ ಹಸ್ತಾಂತರಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಿತ್ತು. ದರ ನಿಗದಿ ಬಳಿಕ ಕಾರಣಾಂತರಗಳಿಂದ ಭೂಮಿ ಹಸ್ತಾಂತರ ಕಾರ್ಯ ನನೆಗುದಿಗೆ ಬಿದ್ದಿತ್ತು ಎಂದು ತಿಳಿಸಿದರು.

ಕಳೆದ ಮಾ.20ರಂದು ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ವಿಷಯ ಗಮನಕ್ಕೆ ತಂದಾಗ ಕಾಲೇಜಿಗೆ ಜಮೀನು ಹಸ್ತಾಂತರ ಕುರಿತು ಅ ಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜತೆಗೆ ಬೀದರನಲ್ಲಿಯೇ ತೋಟಗಾರಿಕೆ ಕಾಲೇಜು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ತೋಟಗಾರಿಕೆ ಸಚಿವರು ಮತ್ತು ಇಲಾಖೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿತ್ತು ಎಂದರು.

ನಂತರ ಡಿ. 28ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೇಷ್ಮೆ ಇಲಾಖೆಯ 49.23 ಎಕರೆ ಜಮೀನನ್ನು ತೋಟಗಾರಿಕೆ ಮಹಾವಿದ್ಯಾಲಯ ನಿರ್ಮಾಣದ ಉದ್ದೇಶಕ್ಕಾಗಿ ಉಚಿತವಾಗಿ ಹಸ್ತಾಂತರಿಸಲು ತೀರ್ಮಾನಿಸಲಾಗಿತ್ತು. ಜಮೀನು ಹಸ್ತಾಂತರ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಎಚ್‌. ವನಿತ್‌ ಆದೇಶ ಹೊರಡಿಸಿದ್ದಾರೆ. ರೇಷ್ಮೆ ಇಲಾಖೆಯಲ್ಲಿ ಉಳಿದ ಜಮೀನಿನಲ್ಲಿ ಇಲಾಖೆಗೆ ಜೀವ ತುಂಬಲು ಅಲ್ಲಿ ಸಂಶೋಧನಾ ಕೇಂದ್ರ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಅರಳಿ ತಿಳಿಸಿದರು.

ಜಿಲ್ಲೆಯ ಬಿಎಸ್‌ಎಸ್‌ಕೆ ಕಾರ್ಖಾನೆ ಬಿಜೆಪಿಯವರ ದುರುದ್ದೇಶದಿಂದ ಬಂದ್‌ ಆಗಿದೆ. ಸರ್ಕಾರ ಕೇವಲ 50 ಕೋಟಿ ರೂ. ಅನುದಾನ ನೀಡಿದರೆ ಖುದ್ದು ನಾನೇ ಆರಂಭಿಸುತ್ತೇನೆ. 200 ಕೋಟಿ ಖರ್ಚು ಮಾಡಿದರೂ ಕಾರ್ಖಾನೆ ಆರಂಭವಾಗಲ್ಲ ಎಂದು ಸಕ್ಕರೆ ಸಚಿವರಿಗೆ ತಪ್ಪು ಮಾಹಿತಿ ನೀಡಲಾಗಿದೆ.ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಹಣ ನೀಡಿ, ಇಲ್ಲವೇ ಖಾಸಗಿಯವರಿಗೆ ವಹಿಸಿ ರೈತರ ಹಿತ ಕಾಪಾಡಿ.
ಅರವಿಂದ ಅರಳಿ, ಎಂಎಲ್‌ಸಿ

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.