ಬುದ್ದನ ಮೂರ್ತಿ ಧ್ವಂಸ; ಆರೋಪಿತರ ಬಂಧನಕ್ಕೆ ಆಗ್ರಹ
Team Udayavani, Nov 13, 2021, 6:12 PM IST
ಸುರಪುರ: ಬುದ್ಧ ವಿಹಾರದಲ್ಲಿನ ಗೌತಮಬುದ್ಧನ ಮೂರ್ತಿ ಧ್ವಂಸಗೊಳಿಸಿದ ಎಲ್ಲ ಆರೋಪಿತರನ್ನು ಬಂಧಿಸುವಂತೆ ಆಗ್ರಹಿಸಿ ಸಾಮೂಹಿಕ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ನಗರದ ಗೌತಮಬುದ್ಧ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಸರ್ಕಾರ-ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ನಂತರ ಕಾರ್ಯಾಲಯದ ಎದುರು ಸಮಾವೇಶಗೊಂಡು ಪ್ರತಿಭಟಿಸಿದರು.
ಮಲ್ಲಿಕಾರ್ಜುನ ಕ್ರಾಂತಿ, ಮಾನಪ್ಪ ಕಟ್ಟಿಮನಿ ಮಾತನಾಡಿ, ಮೂರ್ತಿ ಧ್ವಂಸ ಪ್ರಕರಣದಲ್ಲಿ ಕೇವಲ ಇಬ್ಬರನ್ನು ಬಂಧಿಸಿ ಇನ್ನುಳಿದ ಆರೋಪಿತರನ್ನು ಬಂಧಿಸುತ್ತಿಲ್ಲ. ಜಿಲ್ಲಾ-ತಾಲೂಕು ಆಡಳಿತ ನೀಡಿದ್ದ ಭರವಸೆ ಇದುವರೆಗೆ ಈಡೇರಿಸಿಲ್ಲ ಎಂದು ಆರೋಪಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟ, ವೆಂಕಟೇಶ ಬೇಟೆಗಾರ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗ್ರೇಡ್ -2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಈ ವೇಳೆ ರಾಮು ಶೆಳ್ಳಗಿ, ಮಲ್ಲಿಕಾರ್ಜುನ ಸತ್ಯಂಪೇಟ, ಪಿಡ್ಡಪ್ಪ ಜಾಲಗಾರ, ಭೀಮರಾಯ ಹೊನ್ನಳ್ಳಿ, ವೆಂಕಟೇಶ ಭೇಟೆಗಾರ, ಮಾನಪ್ಪ ಕರಡಜಕಲ್, ಮಾನಪ್ಪ, ಮಹಾದೇವಪ್ಪ ಬಿಜಾಸ್ಪೂರ, ಚಂದ್ರಶೇಖರ ಜಡಿಮರಳ, ನಿಂಗಣ್ಣ ಗೋನಾಲ, ಹಣಮಂತ ಕುಂಬಾರಪೇಟ, ಧರ್ಮರಾಜ ಬಡಿಗೇರ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಗೋರ್ಟಾ (ಬಿ) ಗ್ರಾಮದಲ್ಲಿ ಪಟೇಲ್ ಪ್ರತಿಮೆ ಮತ್ತು 103 ಅಡಿ ಧ್ವಜ ಸ್ತಂಭ ಲೋಕಾರ್ಪಣೆ
ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ
ಚುನಾವಣೆ ಕರ್ತವ್ಯಕ್ಕೆ ಗೈರು: ಇಬ್ಬರು ಸಸ್ಪೆಂಡ್
ಚುನಾವಣೆ ಕೆಲಸಕ್ಕೆ ನಿರ್ಲಕ್ಷ್ಯ: ಬೀದರ್ ನಲ್ಲಿ ಇಬ್ಬರು ಅಧಿಕಾರಿಗಳ ಅಮಾನತು
MUST WATCH
ಹೊಸ ಸೇರ್ಪಡೆ
’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್
ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡೋಣ
ಚಿಕ್ಕಬಳ್ಳಾಪುರ, ಶಿಡ್ಲಘಟ್ಟ “ಕೈ” ಟಿಕೆಟ್ ಕಗ್ಗಂಟು
ಹಾವೇರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ; ಪಕ್ಷ ತೊರೆದ ಜಿಲ್ಲಾ ಅಧ್ಯಕ್ಷ!
ಥಿಯೇಟರ್ ಬಳಿಕ ಓಟಿಟಿಯಲ್ಲಿ ʼಕಬ್ಜʼ ಅಬ್ಬರಕ್ಕೆ ಡೇಟ್ ಫಿಕ್ಸ್? : ರಿಲೀಸ್ ಡೇಟ್ ವೈರಲ್