ಬಸವಕಲ್ಯಾಣ : ಕುಡಿದ ಅಮಲಿನಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
Team Udayavani, Jul 25, 2022, 10:24 PM IST
ಬಸವಕಲ್ಯಾಣ : ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯದ್ಲಾಪೂರ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಭಾಲ್ಕಿ ತಾಲೂಕಿನ ಹಲಸಿತುಗಾಂವ ಗ್ರಾಮದ ನಿವಾಸಿ ದಿನೇಶ ಮಹಾದೇವ ಸೂರ್ಯವಂಶಿ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಕೆಲ ತಿಂಗಳಿಂದ ಯದ್ಲಾಪೂರ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲೇ ನೆಲೆಸಿದ್ದ ತಡರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೇವೇಗೌಡರೇ ನನ್ನ ರಾಜಕೀಯ ಗುರು: ಜಮೀರ್ ಅಹಮದ್ ಖಾನ್