Udayavni Special

ಉಪಚುನಾವಣೆ ಟಿಕೆಟ್‌ ಯಾರಿಗೆ?

| ಅಭ್ಯರ್ಥಿಗಳನ್ನು ಘೋಷಿಸದ ಪಕ್ಷಗಳು | ಟಿಕೆಟ್‌ ವಿಷಯದಲ್ಲಿ ಹೆಚ್ಚಿದ ಕುತೂಹಲ | ಕಾದು ನೋಡುವ ತಂತ್ರಕ್ಕೆ ಪಕ್ಷಗಳ ಮೊರೆ

Team Udayavani, Feb 16, 2021, 4:48 PM IST

ಉಪಚುನಾವಣೆ ಟಿಕೆಟ್‌ ಯಾರಿಗೆ?

ಬೀದರ: ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಅತ್ಯಂತ ಪ್ರತಿಷ್ಠೆಯ ಕಣವಾಗಿರುವಬಸವಕಲ್ಯಾಣ ಉಪ ಚುನಾವಣೆ ಸದ್ಯ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇಂದ್ರ ಚುನಾವಣೆ ಆಯೋಗವು ಶೀಘ್ರ ಚುನಾವಣೆಗೆ ಮುಹೂರ್ತ ನಿಗದಿ ಮಾಡಲಿದೆ. ಆದರೆ, ಈವರೆಗೂ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಾಗಾಗಿಟಿಕೆಟ್‌ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಿದ್ದು, ಚರ್ಚೆಗೆ ಗ್ರಾಸವಾಗಿದೆ.

ಶಾಸಕ ದಿ| ಬಿ. ನಾರಾಯಣರಾವ್‌ ಅವರ ಅಕಾಲಿಕ ನಿಧನದಿಂದ ತೆರವಾಗಿರುವಬಸವಣ್ಣನ ಕರ್ಮಭೂಮಿ ಬಸವಕಲ್ಯಾಣಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.ಗ್ರಾಮ ಪಂಚಾಯತ ಮಿನಿ ಸಮರದಬಳಿಕ ಕಲ್ಯಾಣದ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ಸಿಗಬಹುದೆಂದು ಅಂದಾಜಿಸಲಾಗಿತ್ತು. ಇದಕ್ಕಾಗಿ ಆಂತರಿಕವಾಗಿ ಬಿರುಸಿನ ತಯ್ನಾರಿಗಳು ನಡೆಯುತ್ತಿದೆ. ಆದರೆ, ಬಿಜೆಪಿ ಮತ್ತುಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳುಪರಸ್ಪರ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದು, ಚುನಾವಣಾ ಆಯೋಗದ ದಿನಾಂಕ ಘೋಷಣೆಯನ್ನೇ ಎದುರು ನೋಡುತ್ತಿವೆ.

ಜೆಡಿಎಸ್‌ ಸ್ಪರ್ಧೆ ಬಗ್ಗೆಯೇ ಇನ್ನೂ ಘೋಷಣೆ ಆಗಬೇಕಿದೆ.ಶಿರಾ ಮತ್ತು ಆರ್‌ಆರ್‌ ನಗರ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿಹುಮಸ್ಸಿನಲ್ಲಿರುವ ಕೆಸರಿಪಡೆ ಬಸವಕಲ್ಯಾಣಕ್ಷೇತ್ರದಲ್ಲಿ ಕಮಲ ಅರಳಿಸಲು ಈಗಾಗಲೇರಣ ತಂತ್ರ ರೂಪಿಸುತ್ತಿದ್ದರೆ ಕಾಂಗ್ರೆಸ್‌ ಸಹಶತಾಯಗತಾಯ ಮತ್ತೂಮ್ಮೆ ಕ್ಷೇತ್ರವನ್ನು “ಕೈ’ವಶದಲ್ಲಿ ಇಟ್ಟಿಕೊಳ್ಳಲು ಸಜ್ಜಾಗುತ್ತಿದೆ. ಸದ್ಯದ ರಾಜಕೀಯ ಬೆಳವಣಿಗೆಯಿಂದ ಕದನದ ಕುತೂಹಲ ಹೆಚ್ಚಿದೆಯಾದರೂ ಅಭ್ಯರ್ಥಿಗಳ ಹೆಸರು ಅಂತಿಮ ಆಗದಿರುವುದು ಗೊಂದಲ ಮೂಡಿಸಿದೆ.

ಆಡಳಿತಾರೂಢ ಬಿಜೆಪಿಯಿಂದ ಸಿಎಂ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಸ್ಪರ್ಧೆ ಕುರಿತುವ್ಯಾಪಕ ಚರ್ಚೆಗಳು ನಡೆದಿದ್ದವು. ಆದರೆ, ಸದ್ಯ ಮಸ್ಕಿ ಕ್ಷೇತ್ರದ ಚುನಾವಣೆ ಉಸ್ತುವಾರಿ ವಹಿಸಿರುವ ಹಿನ್ನಲೆ ವಿಜಯೇಂದ್ರ ಅವರ ಸ್ಪರ್ಧೆ ಅನುಮಾನ. ಆದರೂ ಕೊನೆ ಕ್ಷಣದಲ್ಲಿನಿರ್ಣಯಗಳು ಬದಲಾವಣೆ ಆದರೂಆಶ್ಚರ್ಯ ಪಡಬೇಕಿಲ್ಲ. ಇನ್ನೂ ಸ್ಥಳೀಯರಿಗೆಟಿಕೆಟ್‌ ನೀಡಬೇಕೆಂಬ ಮಾತುಗಳು ಕೇಳಿಬರುತ್ತಿದ್ದು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಪಂ ಸದಸ್ಯ ಗುಂಡು ರೆಡ್ಡಿ,ಮುಖಂಡರಾದ ಶರಣು ಸಲಗಾರ, ಸಂಜಯ ಪಟವಾರಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಪ್ರಬಲ ವ್ಯಕ್ತಿಯನ್ನೇ

ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ವರಿಷ್ಠರು ಘೋಷಿಸಿರುವದರಿಂದ ಯಾರಿಗೆ ಮಣೆಹಾಕುತ್ತದೆ ಎಂಬ ಕುತೂಹಲ ಹೆಚ್ಚಿದೆ.ಇನ್ನೂ ಕೈ ವಶದಲ್ಲಿದ್ದ ಕ್ಷೇತ್ರವನ್ನುಉಳಿಸಿಕೊಳ್ಳಲು ಕಾಂಗ್ರೆಸ್‌ ಸಹ ಅಳೆದುತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದೆ. ದಿ| ನಾರಾಯಣರಾವ್‌ ಅವರ ಪತ್ನಿ ಮಲ್ಲಮ್ಮಅಥವಾ ಮಾಜಿ ಸಿಎಂ ದಿ. ಧರಂಸಿಂಗ್‌ ಅವರ ಪುತ್ರರಾದ ಎಂಎಲ್‌ಸಿ ವಿಜಯಸಿಂಗ್‌ ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಬಗ್ಗೆ ಕೈ ಪಾಳಯದ ನಾಯಕರು ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ

 

­-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

police

ತಂದೆ ಯಾರೆಂದು ಕೇಳಿದ ಮಗ: ಅತ್ಯಾಚಾರವಾಗಿ 27 ವರ್ಷಗಳ ಬಳಿಕ ದೂರು ದಾಖಲಿಸಿದ ಸಂತ್ರಸ್ತೆ !

IPL 2021 : ಮುಂದಿನವಾರ ಚೆನ್ನೈ ಕ್ಯಾಂಪ್‌ ಸೇರಲಿದ್ದಾರೆ ಸುರೇಶ್ ರೈನಾ

IPL 2021 : ಮುಂದಿನವಾರ ಚೆನ್ನೈ ಕ್ಯಾಂಪ್‌ ಸೇರಲಿದ್ದಾರೆ ಸುರೇಶ್ ರೈನಾ

ಸಿಂದಗಿ ಉಪಕದನ : ಸ್ಥಳೀಯ ಮುಖಂಡರ ಜೊತೆ ಡಿಕೆಶಿ ಸಭೆ

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್ ‌: ಪಿ.ವಿ. ಸಿಂಧು ಫೈನಲ್‌ ಓಟ

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್ ‌: ಪಿ.ವಿ. ಸಿಂಧು ಫೈನಲ್‌ ಓಟ

ತೇಜೋವಧೆ ಸಾಧ್ಯತೆಯಿಂದ ಕೋರ್ಟ್ ಮೊರೆ ಹೋಗಿದ್ದೇವೆ : ಶಿವರಾಮ ಹೆಬ್ಬಾರ್

birthday

ಬಿಜೆಪಿ ಶಾಸಕರೊಬ್ಬರ ಬರ್ತ್ ಡೇ ಪಾರ್ಟಿಯಲ್ಲಿ ಸಂಘರ್ಷ: ಇಬ್ಬರು ಸಾವು

ಬಿಜೆಪಿ ಅಭ್ಯರ್ಥಿ ಪಟ್ಟಿ ರಿಲೀಸ್ : ನಂದಿಗ್ರಾಮದಲ್ಲಿ ದೀದಿ ವಿರುದ್ಧ ಸುವೆಂದು ಅಧಿಕಾರಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vanadoddi

ವಾಲದೊಡ್ಡಿಗೆ “ಜನಪದ ಲೋಕ’ ಪ್ರಶಸ್ತಿ

maski election issue

ಕಾವೇರಿದ ಪ್ರಚಾರದ ಅಬ್ಬರ; ಪರಸ್ಪರ ಮಾತಿನ ಸಮರ!

ಉಪ ಕದನದಲ್ಲಿ ಬಿಜೆಪಿಗೆ ಗೆಲುವು: ಚವ್ಹಾಣ

ಉಪ ಕದನದಲ್ಲಿ ಬಿಜೆಪಿಗೆ ಗೆಲುವು: ಚವ್ಹಾಣ

ಮರೆಯಾಗುತ್ತಿದೆ ನಾಟಕ ಸಂಸ್ಕೃತಿ: ರಜೀಯಾ ಬಳಬಟ್ಟಿ

ಮರೆಯಾಗುತ್ತಿದೆ ನಾಟಕ ಸಂಸ್ಕೃತಿ: ರಜೀಯಾ ಬಳಬಟ್ಟಿ

ಮಾನಸಿಕ ರೋಗಿಗೂ ಬದುಕು ಕಲ್ಪಿಸಿ: ಕಾಡಲೂರ

ಮಾನಸಿಕ ರೋಗಿಗೂ ಬದುಕು ಕಲ್ಪಿಸಿ: ಕಾಡಲೂರ

MUST WATCH

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

ಹೊಸ ಸೇರ್ಪಡೆ

police

ತಂದೆ ಯಾರೆಂದು ಕೇಳಿದ ಮಗ: ಅತ್ಯಾಚಾರವಾಗಿ 27 ವರ್ಷಗಳ ಬಳಿಕ ದೂರು ದಾಖಲಿಸಿದ ಸಂತ್ರಸ್ತೆ !

IPL 2021 : ಮುಂದಿನವಾರ ಚೆನ್ನೈ ಕ್ಯಾಂಪ್‌ ಸೇರಲಿದ್ದಾರೆ ಸುರೇಶ್ ರೈನಾ

IPL 2021 : ಮುಂದಿನವಾರ ಚೆನ್ನೈ ಕ್ಯಾಂಪ್‌ ಸೇರಲಿದ್ದಾರೆ ಸುರೇಶ್ ರೈನಾ

ಮಾ. 7ರಂದು ವಿಶ್ವ ಮಹಿಳಾ ದಿನಾಚರಣೆ

ಮಾ. 7ರಂದು ವಿಶ್ವ ಮಹಿಳಾ ದಿನಾಚರಣೆ

ಸಿಂದಗಿ ಉಪಕದನ : ಸ್ಥಳೀಯ ಮುಖಂಡರ ಜೊತೆ ಡಿಕೆಶಿ ಸಭೆ

“ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ’

“ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.