ದತ್ತು ಶಾಲೆಗಳಿಗೆ ಕಾಯಕಲ್ಪ ಭಾಗ್ಯ
ಶಾಸಕ ಖಂಡ್ರೆಯಿಂದ 3 ಸರ್ಕಾರಿ ಶಾಲೆ ದತ್ತು,ಒಟ್ಟಾರೆ 74 ಲಕ್ಷ ರೂ. ಪ್ರಸ್ತಾವನೆ,ಮಾದರಿ ಶಾಲೆ ಅಭಿವೃದ್ಧಿಗೆ ಯೋಜನೆ
Team Udayavani, Dec 19, 2020, 5:14 PM IST
ಬೀದರ: ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಒದಗಿಸಿ ಹೈಟೆಕ್ ಶಾಲೆಗಳಾಗಿ ರೂಪಿಸುವ ಉದ್ದೇಶದಿಂದ ಶಾಸಕ ಈಶ್ವರ ಖಂಡ್ರೆ ಅವರು ತಮ್ಮ ಭಾಲ್ಕಿ ಕ್ಷೇತ್ರದಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಲಕ್ಷಾಂತರ ರೂ. ವೆಚ್ಚದಲ್ಲಿ ಮಾದರಿ ಶಾಲೆಗಳನ್ನಾಗಿಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಭಾಲ್ಕಿ ಕ್ಷೇತ್ರದ ಬೀರಿ(ಬಿ) ಗ್ರಾಮದ ಸರ್ಕಾರಿ ಪ್ರೌಢ ಶಾಲೆ, ಹಲಬರ್ಗಾ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಹಾಗೂ ಮೇಹಕರ್ ಗ್ರಾಮದಸರ್ಕಾರಿ ಹಿರಿಯ ಪ್ರಾಥಮಿಕಶಾಲೆಗಳು ಶಾಸಕರ ದತ್ತುಶಾಲೆಗಳ ಪಟ್ಟಿಯಲ್ಲಿ ಸೇರಿವೆ. 2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದರಿ ಶಾಲೆಗಳಿಗೆ ಒಟ್ಟಾರೆ 74 ಲಕ್ಷ ರೂ. ಒದಗಿಸಿದ್ದು, ಬರುವ ದಿನಗಳಲ್ಲಿ ಕಟ್ಟಡಗಳಿಗೆ ಹೊಸ ರೂಪ ಸಿಗಲಿದೆ.
ಖಾಸಗಿ ಶಾಲೆಗಳ ಅಬ್ಬರದ ನಡುವೆ ಮರೆಯಾಗುತ್ತಿದ್ದ ನಗರ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಸಹ ಈಗ ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಇತ್ತಿಚೆಗೆ ಅಭಿವೃದ್ಧಿ ಹೊಂದುತ್ತಿವೆ. ಜತೆಗೆ ಸರ್ಕಾರ ಅಗತ್ಯ ಸೌಲತ್ತುಗಳು ಮತ್ತು ಶೈಕ್ಷಣಿಕವಾಗಿಯೂ ಸಾಧನೆ ಮಾಡುತ್ತಿವೆ.ಹಾಗಾಗಿ ವಿದ್ಯಾರ್ಥಿ ಪಾಲಕರ ಆಸಕ್ತಿ ಈಗ ಸರ್ಕಾರಿ ಶಾಲೆಗಳತ್ತ ಹೆಚ್ಚುತ್ತಿದ್ದು, ದಾಖಲಾತಿ ಪ್ರಮಾಣವೂ ಏರಿಕೆ ಆಗಿದೆ. ಈ ಬೆಳವಣಿಗೆ ನಡುವೆ ಶಾಸಕರಿಂದ ಶಾಲೆಗಳನ್ನು ಅಭಿವೃದ್ಧಿಪಡಿಸಲು “ದತ್ತು ಯೋಜನೆ’ ಮತ್ತಷ್ಟು ಪರಿಣಾಮ ಬೀರಲಿದೆ.
ಶಾಸಕರು ದತ್ತು ಪಡೆದಿರುವ ಹಲಬರ್ಗಾ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ, ಪ್ರೌಢ ಮತ್ತುಪಿಯು ಕಾಲೇಜು ಶಿಕ್ಷಣ ಒಳ ಗೊಂಡಿದ್ದು, 150ಕ್ಕೂಹೆಚ್ಚು ಮಕ್ಕಳ ದಾಖಲಾತಿ ಇದೆ. ಸದರಿ ಶಾಲೆಯಲ್ಲಿಕುಡಿಯುವ ನೀರಿನ ಸಮಸ್ಯೆ ಇಲ್ಲವಾದರೂ ಪ್ರತ್ಯೇಕ ವ್ಯವಸ್ಥೆಯ ಕೊರತೆ ಇದೆ. ಇರುವ ಮೂರುಶೌಚಾಲಯಗಳು ಹಾಳಾಗಿದ್ದು, ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸಮಸ್ಯೆ ಆಗುತ್ತಿದೆ. ವಿಜ್ಞಾನ ಪ್ರಯೋಗಾಲಯ ಹೊರತುಪಡಿಸಿದರೆ ಇನ್ನಿತರ ವಿಷಯಗಳ ಪ್ರಯೋಗಾಲಯಗಳ ಮತ್ತು ಸುಸಜ್ಜಿತ ಲೈಬ್ರರಿ ಕೊರತೆ ಇಲ್ಲಿದೆ.
ಇನ್ನೂ ಬೀರಿ(ಬಿ) ಸರ್ಕಾರಿ ಪ್ರೌಢ ಶಾಲೆಯಲ್ಲಿ 62ಮಕ್ಕಳು ಓದುತ್ತಿದ್ದಾರೆ. ಆದರೆ, ಅಗತ್ಯ ಕೋಣೆಗಳವ್ಯವಸ್ಥೆ ಇಲ್ಲ. ಇಲ್ಲಿ ನೀರಿನ ವ್ಯವಸ್ಥೆ ಸರಿಯಾಗಿದ್ದರೂಶೌಚಾಲಯದ್ದೇ ಪ್ರಮುಖ ಸಮಸ್ಯೆ. ವಿದ್ಯಾರ್ಥಿಗಳಶಿಕ್ಷಣಕ್ಕೆ ಅನುಕೂಲವಾಗುವಂತೆ ಗ್ರಂಥಾಲಯ, ಕಂಪ್ಯೂಟರ್‌ಗಳ ಕಲಿಕೆಗೆ ಬೋಧಕರ ನಿಯೋಜನೆಆಗಬೇಕು. ಜತೆಗೆ ಶಾಲೆ ಮತ್ತು ಮಕ್ಕಳ ಸುರಕ್ಷತೆಗಾಗಿ ಸುತ್ತುಗೋಡೆಯನ್ನು ನಿರ್ಮಾಮಾಡಿಲ್ಲ. ಕಟ್ಟಡಕ್ಕೆ ಸುಣ್ಣ- ಬಣ್ಣ ಹೊಡೆದು ಬಹಳ ವರ್ಷಗಳೇ ಆಗಿವೆ.
ಮತ್ತೂಂದೆ ಮೇಹಕರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಮೂಲಭೂತಸೌಕರ್ಯಗಳ ಕೊರತೆ ಪ್ರಮುಖ ಸಮಸ್ಯೆ. ಸದರಿ ಶಾಲೆಯ ಕಟ್ಟಡ ಶಿಥಲವಾಗಿರುವುದರಿಂದ ಕನ್ನಡಮತ್ತು ಮರಾಠಿ ಮಾಧ್ಯಮಗಳನ್ನು ಪ್ರೌಢ ಶಾಲೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿಯೂ ನೀರು,ಶೌಚಾಲಯದ ಸಮಸ್ಯೆ ಇದ್ದು, ವಾಚನಾಲಯದ ವ್ಯವಸ್ಥೆಯೇ ಇಲ್ಲ.
ಕೋವಿಡ್-19 ಹರಡುವಿಕೆ ಹಿನ್ನೆಲೆಯಲ್ಲಿ ಸದ್ಯ ತರಗತಿ ನಡೆಯುತ್ತಿಲ್ಲ. ಸರ್ಕಾರ ಶಾಸಕರ ದತ್ತುಯೋಜನೆಯಡಿ ಶೀಘ್ರ ಅನುದಾನ ಬಿಡುಗಡೆ ಮಾಡುವ ಮೂಲಕ ಶಾಲೆಗಳ ಅಭಿವೃದ್ಧಿಮುಂದಾದಲ್ಲಿ ಶಾಲೆಗಳು ಆರಂಭಗೊಳ್ಳುವುದರ ಒಳಗೆ ಕಟ್ಟಡಗಳನ್ನು ಸುಸ್ಥಿತಿಗೆ ತರಬಹುದು.
ಭಾಲ್ಕಿ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಮೂರು ಶಾಲೆಗಳನ್ನುದತ್ತು ಪಡೆದಿದ್ದು, ಕಟ್ಟಡ ಸುಭದ್ರಗೊಳಿಸುವುದರ ಜತೆಗೆ ಕುಡಿಯುವ ನೀರು, ಶೌಚಾಲಯ ಸೇರಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಮಾದರಿ ಶಾಲೆಗಳನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಜತೆಗೆ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ವಹಿಸುವ ದಿಸೆಯಲ್ಲಿ ಕ್ರಮ ವಹಿಸಲಾಗುವುದು. –ಈಶ್ವರ ಖಂಡ್ರೆ, ಶಾಸಕರು, ಭಾಲ್ಕಿ
–ಶಶಿಕಾಂತ ಬಂಬುಳಗೆ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444