725 ಕೋಟಿ ರೂ. ಕಾಮಗಾರಿಗೆ ಚಾಲನೆ
Team Udayavani, Dec 20, 2020, 3:44 PM IST
ಬೀದರ: ಸುಮಾರು 725 ಕೋಟಿ ರೂ.ವೆಚ್ಚದ ಜಿಲ್ಲೆಯ ಎರಡು ರಾಷ್ಟ್ರೀಯ ಹೆದ್ದಾರಿಕಾಮಗಾರಿ ಮತ್ತು ನೌಬಾದ್ ಹತ್ತಿರದ ಮೇಲ್ಸೆತುವೆ ಕಾಮಗಾರಿಗೆ ಶನಿವಾರ ಚಾಲನೆ ನೀಡಲಾಯಿತು.
ನವದೆಹಲಿಯಿಂದ ಕೇಂದ್ರದ ಭೂಸಾರಿಗೆಸಚಿವ ನಿತಿನ್ ಗಡ್ಕರಿ ಅವರು ವಚ್ಯುìವಲ್ ಮೂಲಕ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ಸಚಿವ ಗಡ್ಕರಿ ರಾಜ್ಯದಲ್ಲಿ 1,197 ಕಿ.ಮೀ ಉದ್ದದ 10,904 ಕೋಟಿ ರೂ. ವೆಚ್ಚದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು. ಇದೇ ವೇಳೆ ಬೀದರ- ಔರಾದನ 47.8 ಕಿ.ಮೀ ಉದ್ದ, ಬೀದರ- ಹುಮನಾಬಾದ47 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ದೇಶದಲ್ಲಿ ಸಂಪರ್ಕ ಕ್ರಾಂತಿನಡೆಯುತ್ತಿದೆ. ವಿಶ್ವ ದರ್ಜೆಯ ರಾಷ್ಟ್ರೀಯ ಹೆದ್ದಾರಿ ಜಾಲಗಳ ಮೂಲಕ ಕರ್ನಾಟಕದಲ್ಲಿ ಸಮೃದ್ಧಿಯ ಪಥಗಳ ಸೃಷ್ಟಿ ಆಗುತ್ತಿದೆ. ಹೆದ್ದಾರಿಗಳ ಅಭಿವೃದ್ಧಿಯಿಂದ ರಾಷ್ಟ್ರದ ಪ್ರಗತಿಗೆ ಸಹಕಾರ ಸಿಗಲಿದೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಚಿವ ಗಡ್ಕರಿ ರಾಜ್ಯಕ್ಕೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಅವರ ಹೊಸ ಆಲೋಚನೆಗಳಿಂದಾಗಿ ಇಂದು ದೇಶದಲ್ಲಿ ಹಿಂದೆ ನಿತ್ಯ 12 ಕಿ.ಮೀ ನಿರ್ಮಾಣ ಆಗುತ್ತಿದ್ದ ರಸ್ತೆ ಈಗ 30 ಕಿ.ಮೀ ತಲುಪಿದೆ. ಹಾಗಾಗಿ ಗಡ್ಕರಿ ಅವರನ್ನು “ರೋಡ್ಕರಿ’ ಎಂದು ಸಂಬೋಧಿ ಸಲಾಗುತ್ತದೆ. ವಿಶೇಷವಾಗಿ ಕರ್ನಾಟಕಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಚಿವ ಗಡ್ಕರಿ ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುತ್ತಾರೆ. ಈ ವಿಚಾರ ಎಲ್ಲ ಸಚಿವರಲ್ಲೂ ಬಂದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ವರ್ಚ್ಯುವಲ್ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಕೇಂದ್ರದ ಸಚಿವರಾದಡಿ.ವಿ.ಸದಾನಂದ ಗೌಡ, ಬಿ.ಕೆ.ಸಿಂಗ್, ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥನಾರಾಯಣ, ಲಕ್ಷ್ಮಣ ಸವದಿ, ಬೀದರನಿಂದ ಸಂಸದ ಭಗವಂತ ಖೂಬಾ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆಯಾ ಕ್ಷೇತ್ರದ ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು.
ಡಿಸಿ ಕಚೇರಿಯಲ್ಲಿ ವ್ಯವಸ್ಥೆ: ವರ್ಚುವಲ್ ಕಾರ್ಯಕ್ರಮವನ್ನು ನಗರದ ಡಿಸಿಕಚೇರಿಯಲ್ಲಿ ಆಯೋಜನೆ ಮಾಡಲಾಗಿತ್ತು. ಸಂಸದ ಭಗವಂತ ಖೂಬಾ, ಎಂಎಲ್‌ಸಿಗಳಾದ ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಕೆಎಸ್‌ಐಐಡಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಪ್ರಮುಖರಾದ ಗುರುನಾಥಕೊಳ್ಳುರ್, ಈಶ್ವರಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ಯೋಜನಾನಿರ್ದೇಶಕ ಫರಸ್‌ಡೊ, ಕಾರ್ಯನಿರ್ವಾಹಕ ಅಧಿಕಾರಿ ನಾಗಪ್ಪ ಇತರರಿದ್ದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಮಾಡಲು ಯಾವುದೇ ಕೆಲಸ ಇಲ್ಲ. ಅಭಿವೃದ್ಧಿ ಕೆಲಸಗಳ ವಿರುದ್ಧ ದೂರು ನೀಡುವುದು ಅವರ ಕೆಲಸ. ಕಳೆದ 60 ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಕಾರ್ಯಕರ್ತರು ಬ್ಯಾನರ್ ಹಾಕಿದ್ದಾರೆ. ಬೇರೆ ಯಾವುದೇ ಶಾಸಕರಿಗೆ ನೀತಿ ಸಂಹಿತಿ ಉಲ್ಲಂಘನೆ ಅನಿಸಿಲ್ಲ. ಕ್ಷುಲ್ಲಕ ರಾಜಕಾರಣಕ್ಕಾಗಿ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಿದರೆ ಅದು ಅಭಿವೃದ್ಧಿಗೆ ವಿರುದ್ಧವಾಗಿ ನಡೆದುಕೊಂಡತೆ. ಬರುವ ದಿನಗಳಲ್ಲಿ ಜನರು ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. -ಭಗವಂತ ಖೂಬಾ, ಸಂಸದ, ಬೀದರ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444