

Team Udayavani, Sep 22, 2020, 6:42 PM IST
ಬೀದರ (ಹುಲಸೂರು): ಕಳೆದೊಂದು ವಾರದಿಂದ ಮತ್ತು ಸೆ.20ರ ರಾತ್ರಿ ಬಿರುಸಿನ ಮಳೆ ಸುರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸೋಮವಾರ ಭಾಲ್ಕಿ ಮತ್ತು ಹುಲಸೂರ ತಾಲೂಕುಗಳಿಗೆ ದಿಢೀರ್ ಭೇಟಿ ನೀಡಿ, ತೀವ್ರ ಮಳೆಯಿಂದಾದ ಹಾನಿ ಪರಿಶೀಲಿಸಿದರು.
ಭಾಲ್ಕಿ- ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಇಂಚೂರ ಬ್ರಿಜ್ ಒಡೆದಿರುವುದನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಸೇತುವೆಗೆ ಹಾನಿಯಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅನುಕೂಲವಾಗಲು ನಿರ್ಮಿಸಿದ ಪರ್ಯಾಯ ಮಾರ್ಗದಲ್ಲಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಜಿಲ್ಲಾಧಿ ಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರಸ್ತೆಯಲ್ಲಿನ ಜಮಖಂಡಿ ಸೇತುವೆ ಹಾಳಾಗಿರುವುದನ್ನು ಕೂಡ ಜಿಲ್ಲಾಧಿಕಾರಿ ವೀಕ್ಷಿಸಿದರು.
ಬೆಳೆ ಹಾನಿ ಪರಿಶೀಲನೆ: ಜಿಲ್ಲಾಧಿಕಾರಿಗಳು ಹುಲಸೂರ ತಾಲೂಕಿನಲ್ಲಿ ಪ್ರವಾಸ ಕೈಗೊಂಡ ವೇಳೆಯಲ್ಲಿ ಹುಲಸೂರ ವಾರ್ಡ್-1ಗೆ ಭೇಟಿ ನೀಡಿದರು. ವಿಪರೀತ ಮಳೆ ಬಂದು ವಾರ್ಡ್ ನಲ್ಲಿ ಹಾನಿಯಾಗಿರುವುದನ್ನು ವರದಿ ಮಾಡಿ ಪರಿಹಾರೋಪಾಯ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತೀವ್ರ ಮಳೆಯಿಂದಾಗಿ ಹುಲಸೂರ, ಭಾಲ್ಕಿ ತಾಲೂಕುಗಳ ವ್ಯಾಪ್ತಿಯ ಜಮೀನುಗಳಲ್ಲಿ ಉಂಟಾದ ಬೆಳೆಹಾನಿ ವೀಕ್ಷಿಸಿದರು. ವಿಪರೀತ ಮಳೆಯಿಂದಾಗಿ ಜಮೀನೊಂದರಲ್ಲಿನ ತೊಗರಿ ಬೆಳೆ ಕೊಚ್ಚಿ ಹೋಗಿರುವುದರ ಬಗ್ಗೆ ಜಿಲ್ಲಾ ಧಿಕಾರಿಗಳು ಮಾಹಿತಿ ಪಡೆದರು. ಬೆಳೆಹಾನಿ ಅನುಭವಿಸಿದ ರೈತರಿಗೆ ಸಮರ್ಪಕ ಪರಿಹಾರ ಸಿಗಬೇಕು. ಇದಕ್ಕೆ ಸಂಬಂಧಿಸಿದ ಕಾರ್ಯ ತೀವ್ರ ಗತಿಯಲ್ಲಿ ನಡೆಯಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕಟ್ಟಡದ ಸ್ಥಳ ಪರಿವೀಕ್ಷಣೆ: ಹುಲಸೂರ ಮಿನಿವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಕೆಲವು ಪ್ರಸ್ತಾವನೆಗಳು ಬಂದಿರುವುದಾಗಿ ಇದೇ ವೇಳೆ ಅಧಿಕಾರಿಗಳು ಜಿಲ್ಲಾಧಿ ಕಾರಿಗಳಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾಕಾರಿಗಳು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣದ ಸ್ಥಳ ಪರಿವೀಕ್ಷಣೆ ನಡೆಸಿದರು. ಈ ವೇಳೆ ಹುಲಸೂರ ತಾಪಂ ಅಧ್ಯಕ್ಷ ಸಿದ್ರಾಮ, ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗರ, ಬಸವಕಲ್ಯಾಣ ತಾಪಂ ಇಒ ಬೀರಸಿಂಗ್, ಜಿ.ಪಂ ಸದಸ್ಯ ಸುಧೀರ ಕಾಡಾದಿ, ಪ್ರಮುಖರಾದ ಅನೀಲ ಭೂಸಾರೆ, ಲತಾ ಹಾರಕೂಡೆ ಹಾಗೂ ಇತರರು ಇದ್ದರು.
Ad
India, the Guru of Unity: ಏಕತೆಯ ಗುರು ಭಾರತ
Kidnapped: ಮಾಲಿಯಲ್ಲಿ ಶಸ್ತ್ರಸಜ್ಜಿತರಿಂದ ಮೂವರು ಭಾರತೀಯರ ಅಪಹರಣ… ಇನ್ನೂ ಸಿಗದ ಸುಳಿವು
Bharamasagara:ಯೂರಿಯಾ ಗೊಬ್ಬರಕ್ಕಾಗಿ ಬೆಳ್ಳಂಬೆಳಗ್ಗೆ ಸೊಸೈಟಿ ಮುಂದೆ ಕ್ಯೂನಿಂತಿರುವ ರೈತರು
Video: ಟೇಕ್ ಆಫ್ ಆಗುತ್ತಿದ್ದಂತೆ ಪತನಗೊಂಡ ಲಘು ವಿಮಾನ…
Veteran actress B.Saroja Devi: ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ವಿಧಿವಶ
You seem to have an Ad Blocker on.
To continue reading, please turn it off or whitelist Udayavani.