ಮಕ್ಕಳ ಕೊರೊನಾ ಲಸಿಕಾಕರಣಕ್ಕೆ ಉತ್ತಮ ಸ್ಪಂದನೆ


Team Udayavani, Jan 4, 2022, 5:22 PM IST

28covid

ಬೀದರ: ಕೋವಿಡ್‌ ಸೋಂಕಿನ ಮೂರನೇ ಆತಂಕ ಹಿನ್ನಲೆ ಹದಿಹರೆಯದ ಮಕ್ಕಳಿಗೆ ಜೀವ ರಕ್ಷಕ ಲಸಿಕಾ ಮೇಳಕ್ಕೆ ಸೋಮವಾರ ಚಾಲನೆ ದೊರೆತಿದ್ದು, ಗಡಿನಾಡು ಬೀದರನಲ್ಲಿ ಮೊದಲ ದಿನ ಶೇ.26.76ರಷ್ಟು ಲಸಿಕಾಕರಣ ಆಗಿದೆ.

450 ತಂಡಗಳು ಶಿಸ್ತು ಬದ್ದವಾಗಿ 15 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಕಾರ್ಯೋನ್ಮುಖವಾಗಿವೆ. ಸೋಂಕಿನ ಆರ್ಭಟದ ಜತೆಗೆ ಒಮಿಕ್ರಾನ್‌ ಹೊಸ ತಳಿಯ ಭೀತಿ ಸಹ ಹೆಚ್ಚಿದೆ. ಸದ್ಯ ಸೋಂಕಿನಿಂದ ಜೀವ ಉಳಿಸಿಕೊಳ್ಳಲು ಲಸಿಕೆಯೇ ಮಾರ್ಗ.

ಇನ್ನೂ ಮುಂದಿನ ಎರಡ್ಮೂರು ತಿಂಗಳಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಸೇರಿ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವರಿಂದ ಮಕ್ಕಳಿಗೆ ಲಸಿಕೆ ನೀಡುವುದು ಬಹಳ ಮುಖ್ಯವಾಗಿದೆ. ಹೀಗಾಗಿ ಲಸಿಕಾಕರಣಕ್ಕೆ ಒತ್ತು ಕೊಡುತ್ತಿರುವ ಸರ್ಕಾರ 15 ರಿಂದ 18 ವರ್ಷದೊಳಗಿನ ಆರೋಗ್ಯವಂತ ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಕಾಳಜಿ ವಹಿಸಿದೆ.

2007ರ ಜ.1ಕ್ಕಿಂತ ಮೊದಲು ಜನಿಸಿರುವ ಮಕ್ಕಳಿಗೆ ಸೋಮವಾರದಿಂದ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿಯೇ ಆರೋಗ್ಯ ಇಲಾಖೆ ಕ್ಯಾಂಪ್‌ ನಡೆಸಿ ಲಸಿಕಾಕರಣ ಆರಂಭಿಸಿವೆ. ಜಿಲ್ಲೆಯಲ್ಲಿ ಒಟ್ಟು 1,05,083 ಗುರಿ ನೀಡಲಾಗಿದೆ. ಅದರಂತೆ ಮೊದಲ ದಿನ ಶೇ.50 ಸಾವಿರ ಲಸಿಕೆ ಗುರಿ ಹಾಕಿಕೊಂಡಿದ್ದು, ಅದರಲ್ಲಿ 28,120 ಲಸಿಕಾಕರಣ ಆಗಿದೆ.

ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು, ವಿವಿಧ ವಸತಿ ಶಾಲೆಗಳು, ಐಟಿಐ, ಪ್ಯಾರಾಮೆಡಿಕಲ್‌, ಪಾಲಿಟೆಕ್ನಿಕ್‌, ನರ್ಸಿಂಗ್‌, ಡಿಪಾರ್ಮ್, ಡಿಪ್ಲೋಮಾ ಕೋರ್ಸ್‌ಗಳನ್ನು ಓದುವ ವಿದ್ಯಾರ್ಥಿಗಳಿಗೆ ವ್ಯಾಕ್ಸಿನೇಶನ್‌ ಶುರುವಾಗಿದ್ದು, ಮಕ್ಕಳು ಸರತಿ ಸಾಲಿನಲ್ಲಿ ಬಂದು ಲಸಿಕೆ ಪಡೆದುಕೊಂಡರು.

ಲಸಿಕೆ ಪಡೆದವರಲ್ಲಿ ಯಾವುದೇ ಬದಲಾವಣೆ ಆಗಿರುವುದು ವರದಿಯಾಗಿಲ್ಲ. ಲಸಿಕಾಕರಣಕ್ಕಾಗಿ ಶಾಲೆ- ಕಾಲೇಜುಗಳಲ್ಲಿ ವ್ಯಾಕ್ಸಿನ್‌ ಪರಿಕರಗಳು, ಲಸಿಕಾಕರಣ ಮತ್ತು ನಂತರ ವಿಶ್ರಾಂತಿ ಹೀಗೆ ಮೂರು ಕೊಠಡಿಗಳ ವ್ಯವಸ್ಥೆ ಮಾಡಲಾಗಿದ್ದು, ಪಾಲಕರಿಂದ ಸಹಿವುಳ್ಳ ಒಪ್ಪಿಗೆ ಪತ್ರ ಪಡೆದ ನಂತರವೇ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ.

ಬೀದರ ಜಿಲ್ಲೆಯಲ್ಲಿ ಸದ್ಯ 75 ಸಾವಿರ ಕೋವ್ಯಾಕ್ಸಿನ್‌ ಡೋಸ್‌ ಲಭ್ಯ ಇದೆ. ಇನ್ನುಳಿದ ಡೋಸ್‌ಗಳು ಶೀಘ್ರ ಬರಲಿದೆ. ಮೂರ್‍ನಾಲ್ಕು ದಿನಗಳಲ್ಲಿ ಸಂಪೂರ್ಣ ಮಕ್ಕಳಿಗೆ ವ್ಯಾಕ್ಸಿನೇಶನ್‌ ಮುಗಿಸಲು ಜಿಲ್ಲಾಡಳಿತ ತಯ್ನಾರಿ ಮಾಡಿಕೊಂಡಿದೆ.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.