

Team Udayavani, Dec 14, 2020, 6:40 PM IST
ಹುಮನಾಬಾದ: ಕಪ್ಪರಗಾಂವ ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕರಿಸಿದ ಕುರಿತು ಹಾಗೂ ಗ್ರಾಮದಲ್ಲಿ ಪಂಚಾಯಿತಿ ಕೇಂದ್ರವಾಗಿ ಮಾಡುವಂತೆ ಒತ್ತಾಯಿಸಿ ರವಿವಾರ ಶಾಸಕ ರಾಜಶೇಖರಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶಾಸಕರ ಭವನದಲ್ಲಿ ಭೇಟಿಯಾದ ಗ್ರಾಮಸ್ಥರು, ಪಂಚಾಯಿತಿ ಕೆಲಸಗಳಿಗಾಗಿ ಗ್ರಾಮಸ್ಥರು ಸುಮಾರು 10 ಕಿ.ಮೀ ದೂರ ಅಲೆಯುವ ಸ್ಥಿತಿ ಇದೆ. ನಂದಗಾವ ಗ್ರಾಮಕ್ಕೆ ನೇರವಾಗಿ ತೆರಳುವವಾಹನಗಳ ಸೇವೆ ಇಲ್ಲ. ಖಾಸಗಿ ವಾಹನಗಳಮೂಲಕ ಹುಡಗಿ ಗ್ರಾಮಕ್ಕೆ ತೆರಳಿ, ನಂತರಅಲ್ಲಿಂದ ಆಟೋ ಮೂಲಕ ನಂದಗಾಂವ ಗ್ರಾಮಕ್ಕೆ ಹೋಗಬೇಕಾದ ಸ್ಥಿತಿ ಇದ್ದು, ಕಪ್ಪರಗಾಂವ ಗ್ರಾಮದಲ್ಲಿಯೇ ಪಂಚಾಯಿತಿಕೇಂದ್ರವಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರ ಬೇಡಿಕೆ ಆಲಿಸಿದ ಶಾಸಕ ರಾಜಶೇಖರ ಪಾಟೀಲ,ಈ ಕುರಿತು ಮುಖ್ಯಮಂತ್ರಿಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುವೆ. ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ ಕುರಿತು ಗಮನ ಸೆಳೆಯುವ ಮೂಲಕ ನ್ಯಾಯ ಒದಗಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಎಲ್ಲ ಗ್ರಾಮಗಳಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು,ಕಪ್ಪರಗಾಂವ ಗ್ರಾಮದಲ್ಲಿಯೂ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.
Ad
Bidar: ‘ಅಕ್ಕ ಪಡೆ’ ರಾಜ್ಯಾದ್ಯಂತ ವಿಸ್ತರಣೆಗೆ ಸಿದ್ಧತೆ
ಗೃಹಲಕ್ಷ್ಮಿ ಸಂಘಗಳ ರಚನೆಗೆ ಚಿಂತನೆ: ಸ್ತ್ರೀ ಆರ್ಥಿಕ ಬಲಕ್ಕಾಗಿ ಯೋಜನೆ :ಸಚಿವೆ ಹೆಬ್ಬಾಳಕರ್
Bidar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳಗೊಳಿಸಲು ಕ್ರಮ ಕೈಗೊಳ್ಳಿ: ಹೆಬ್ಬಾಳ್ಕರ್
Bidar: ರವಿಕುಮಾರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಿರುವ ಅವಮಾನ: ಹೆಬ್ಬಾಳಕರ್ ಟೀಕೆ
Bidar; ವಾಹನ ಬಾವಿಗೆ ಬಿದ್ದು ಇಬ್ಬರು ಸಾ*ವು,ತಾಯಿಗೂ ಹೃದಯಾಘಾತ!
You seem to have an Ad Blocker on.
To continue reading, please turn it off or whitelist Udayavani.