
ವಸತಿ ಯೋಜನೆಯಲ್ಲಿ ಖಂಡ್ರೆ ಅವ್ಯವಹಾರ
Team Udayavani, Sep 26, 2020, 6:05 PM IST

ಭಾಲ್ಕಿ: ಶಾಸಕ ಈಶ್ವರ ಖಂಡ್ರೆ ತಮ್ಮ ಅಕ್ರಮ ಮುಚ್ಚಿಕೊಳ್ಳಲು ಮನೆ ಕಟ್ಟಿಕೊಂಡ ಅರ್ಹ ಫಲಾನುಭವಿಗಳಿಗೆ ಹಣ ದೊರಕದಂತೆ ಮಾಡುತ್ತಿರುವುದು ಖಂಡನೀಯ ಎಂದು ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠ ರಾಜ್ಯ ಸಂಚಾಲಕ ಡಿ.ಕೆ.ಸಿದ್ರಾಮ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 2018ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಶಾಸಕ ಈಶ್ವರ ಖಂಡ್ರೆ ವಿವಿಧ ಯೋಜನೆಗಳಡಿ ಮಂಜೂರಾದ ಮನೆಗಳನ್ನು ಪಿಡಿಒಗಳ ಮೇಲೆ ಒತ್ತಡ ಹೇರಿ ವಸತಿ ರಹಿತರನ್ನು ಬಿಟ್ಟು ಮನೆ ಇರುವವರಿಗೆ ಹಂಚಿಕೆ ಮಾಡಿ ಅವ್ಯವಹಾರ ಎಸಗಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದ ಮೇಲೆ ವ್ರಥಾ ಆರೋಪ ಮಾಡುತ್ತಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಹಣ ಸಿಗದಂತೆ ಮಾಡಿರುವ ಅವರಿಗೆ ತಾಲೂಕಿನಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಜಿಲ್ಲೆಯ ಬೇರೆ ತಾಲೂಕಿನಲ್ಲಿವಸತಿ ಯೋಜನೆ ಎಲ್ಲ ಫಲಾನುಭವಿಗಳಿಗೆ ಹಣ ದೊರೆತಿದೆ. ಆದರೆ ಭಾಲ್ಕಿ ತಾಲೂಕಿನ ವಸತಿ ಯೋಜನೆ ಹಣ ದೊರೆಯದಿರುವುದಕ್ಕೆ ಶಾಸಕ ಈಶ್ವರ ಖಂಡ್ರೆಯವರೇ ನೇರ ಹೊಣೆ. ಆದರೆ ವಿನಾಕಾರಣ ಬಿಜೆಪಿ ಸರ್ಕಾರವನ್ನು ದೂರುತ್ತಾ ಜನರ ಹಾದಿ ತಪ್ಪಿಸುತ್ತಿದ್ದಾರೆ. ತಕ್ಷಣವೇ ಅಕ್ರಮವಾಗಿ ಕಟ್ಟಿರುವ ಮನೆಗಳ ತನಿಖೆಗೆ ಅವಕಾಶ ಮಾಡಿಕೊಟ್ಟು ನಿಜವಾದ ಫಲಾನುಭವಿಗಳಿಗೆ ಹಣ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಸರ್ಕಾರದ ಮುಂದೆ ಹಳೆ ಸವಾಲು! ಕೈ ಆಡಳಿತದಲ್ಲಿ ನಿರೀಕ್ಷೆ ಈಡೇರಲಿ

ಗೆದ್ದ ಬಳಿಕ ಕೇಂದ್ರ ಸಚಿವ ಖೂಬಾ ವಿರುದ್ಧ ಪ್ರಭು ಚೌಹಾಣ್ ಆಕ್ರೋಶ, ಕಣ್ಣೀರು

Karnataka polls: ತಾಳಿ ಕಟ್ಟಿದ ಬಳಿಕ ಮದುವೆ ಉಡುಪಿನಲ್ಲೇ ಮತಗಟ್ಟೆಗೆ ಬಂದ ವರ

ಜೆಡಿಎಸ್ ಗೆದ್ದರೆ ಗೋಹತ್ಯೆ ನಿಷೇಧ ತೆರವು: ಸಿಎಂ ಇಬ್ರಾಹಿಂ

BJP ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುಪಿ ಮಾದರಿ ಆಡಳಿತ: ಯತ್ನಾಳ್