ಜ.5 ರಿಂದ ಬೀದರ್ ನಲ್ಲಿ 4 ದಿನಗಳ ಕಾಲ ‘ಪಂಚರತ್ನ ರಥಯಾತ್ರೆ’ : ಬಂಡೆಪ್ಪ ಕಾಶೆಂಪುರ್

ಪ್ರಾದೇಶಿಕ ಪಕ್ಷಗಳ ವಿಷಯದಲ್ಲಿ ಮೈತ್ರಿಗೆ ‘ಮೈಂಡ್ ಓಪನ್’ ಇದೆ

Team Udayavani, Jan 2, 2023, 2:59 PM IST

jds

ಬೀದರ್ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಹಮ್ಮಿಕೊಂಡಿರುವ ಎರಡನೇ ಹಂತದ ‘ಪಂಚರತ್ನ ರಥಯಾತ್ರೆ’ಗೆ ಜ.5 ರಂದು ಬೀದರನಲ್ಲಿ ಚಾಲನೆ ನೀಡಲಾಗುತ್ತಿದ್ದು, ನಾಲ್ಕು ದಿನಗಳ ಕಾಲ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ್ ಹೇಳಿದರು.

ನ. 18 ರಂದು ಆರಂಭಗೊಂಡಿರುವ ರಥಯಾತ್ರೆ ನ. 30 ರವರೆಗೆ ರಾಜ್ಯದ ೩೮ ಕ್ಷೇತ್ರಗಳಲ್ಲಿ ಸಂಚರಿಸಿದ್ದು, ಜ. 5 ರಿಂದ 8 ರವರೆಗೆ ಬೀದರ ಜಿಲ್ಲೆಯಲ್ಲಿ ಸಂಚರಿಸಿ ಆಳಂದ ಮೂಲಕ ಕಲ್ಬುರ್ಗಿ ಜಿಲ್ಲೆಗೆ ತೆರಳಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸೇರಿದಂತೆ ಪ್ರಮುಖ ನಾಯಕರು ಕುಮಾರಸ್ವಾಮಿ ಅವರಿಗೆ ಸಾಥ್ ನೀಡುವರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಪಂಚ ಸೂತ್ರಗಳೊಂದಿಗೆ ಯಾತ್ರೆಯನ್ನು ನಡೆಸಲಾಗುತ್ತಿದೆ. ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ರೈತ ಚೈತನ್ಯ, ಯುವ ನವ ಮಾರ್ಗ- ಮಹಿಳಾ ಸಬಲೀಕರಣ ಹಾಗೂ ವಸತಿಯ ಆಸರೆ ಸೇರಿ ೫ ಉದ್ದೇಶಗಳನ್ನು ಹೊಂದಲಾಗಿದೆ. ಜೆಡಿಎಸ್‌ಗೆ ಪೂರ್ಣ ಬಹುಮತ ನೀಡಿದರೆ ಐದು ವರ್ಷದ ಆಡಳಿತ ಅವಧಿಯಲ್ಲಿ ಪಂಚ ಸೂತ್ರಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೇವೆ. ಇಲ್ಲವಾದರೆ ಪಕ್ಷಕ್ಕೆ ಬೀಗ ಹಾಕುತ್ತೇವೆ ಎಂಬ ಆಶ್ವಾಸನೆಯನ್ನು ಯಾತ್ರೆ ಮೂಲಕ ನೀಡುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರ ಸಿಕ್ಕಿದಾಗಲೆಲ್ಲ ನೀರಾವರಿ ಯೋಜನೆ, ರೈತರ ಸಾಲ ಮನ್ನಾ ಸೇರಿ ಜನಪರ ಕೆಲಸಗಳನ್ನು ಮಾಡಿದೆ. ಕಾಂಗ್ರೆಸ್ ಭಾರತ ಜೋಡೋ ಮತ್ತು ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಸಿದ್ದು, ಜನರಿಗೆ ಯಾವುದೇ ಸ್ಪಷ್ಟ ಸಂದೇಶ ನೀಡಿಲ್ಲ. ಆಡಳಿತಾರೂಢ ಬಿಜೆಪಿ ತನ್ನ ಕೆಲಸಗಳ ಮೂಲಕ ಮಾತಾಡಬೇಕಿತ್ತು. ಕೇವಲ ಪರ್ಸಂಟೇಜ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆದರೆ, 2023 ರಲ್ಲಿ ಜನತಾ ದಳಕ್ಕೆ ಪೂರ್ಣ ಬಹುಮತ ನೀಡಿದರೆ ನಾವು ಏನು ಮಾಡುತ್ತೇವೆ ಎಂಬುದನ್ನು ಚುನಾವಣೆಗೆ ಮೊದಲು ಹೇಳುತ್ತಿದ್ದೇವೆ. ಇದು ದೇಶದಲ್ಲೇ ಪ್ರಥಮ ಎನ್ನಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪುರ, ವಕ್ತಾರ ಅಶೋಕಕುಮಾರ ಕರಂಜಿ, ಪ್ರಮುಖರಾದ ಅಸುದುದ್ದೀನ್, ಮಾರುತಿ ಬೌದ್ಧೆ, ಸಜ್ಜಾದ್, ರಾಜಶೇಖರ ಜವಳೆ ಮತ್ತು ಅಶೋಕ ಕೊಡಗೆ ಮತ್ತಿತರರಿದ್ದರು.

ಪಂಚರತ್ನ ಯಾತ್ರೆ ಸಂಚಾರ

ಬೀದರನಲ್ಲಿ ಜ. ೫ರಂದು ಮಧ್ಯಾಹ್ನ ಜೆಡಿಎಸ್ ಪಂಚರಥ ಯಾತ್ರೆಗೆ ಚಾಲನೆ ಸಿಗಲಿದ್ದು, ಬಳಿಕ ನಗರದಾದ್ಯಂತ ಸಂಚರಿಸಲಿದೆ. ಬಳಿಕ ಸಾಯಂಕಾಲ ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು, ಅಲ್ಲಿಂದ ಜನವಾಡಾ ತೆರಳಿ ವಾಸ್ತವ್ಯ ಮಾಡಲಾಗುವುದು. ಜ.6 ರಂದು ಅಮಾಪುರ, ಮನ್ನಳ್ಳಿ, ಬೆಮಳಖೇಡನಲ್ಲಿ ಸಂಚರಿಸಿ, ಮನ್ನಾಎಖ್ಖೆಳ್ಳಿಯಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ನಡೆಸಿ ನಿರ್ಣಾದಲ್ಲಿ ವಾಸ್ತವ್ಯ ಮಾಡಲಾಗುವುದು. ನ.7 ರಂದು ಹುಮನಾಬಾದ್ ನಲ್ಲಿ ಬಹಿರಂಗ ಸಭೆ, ಗಡಿ ಭಾಗದಲ್ಲಿ ವಾಸ್ತವ್ಯ ಮತ್ತು ನ. ೮ರಂದು ಬಸವಕಲ್ಯಾಣದಲ್ಲಿ ಸಾರ್ವಜನಿಕ ಸಭೆ ನಡೆಸಿ ಮೋರ್ಖಂಡಿಯಲ್ಲಿ ವಾಸ್ತವ್ಯ ಮಾಡಿ ಮರು ದಿನ ಕಲ್ಬುರ್ಗಿಯ ಆಳಂದಕ್ಕೆ ಪ್ರವೇಶಿಸಲಿದೆ.

ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ?

ಬಿಜೆಪಿ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಜತೆಗೆ ಯಾವುದೇ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಆದರೆ, ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ವಿಷಯದಲ್ಲಿ ‘ಮೈಂಡ್ ಓಪನ್’ ಇದೆ ಎಂದು ಹೇಳುವ ಮೂಲಕ ಶಾಸಕ ಬಂಡೆಪ್ಪ ಕಾಶೆಂಪುರ್ ಮೈತ್ರಿಯ ಸುಳಿವು ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವ ಇಲ್ಲ. ಪಂಚರಥ ಯಾತ್ರೆ ಹಿನ್ನಲೆ ಜೆಡಿಎಸ್ ಪಕ್ಷ ಪ್ರಬಲವಾಗಿದೆ ಎಂಬುದು ಕೇಂದ್ರ ಸಚಿವ ಅಮಿತ್ ಶಾ ಅರಿತಿದ್ದಾರೆ. ಹಾಗಾಗಿ ಹೆದರಿ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಆಶ್ಚರ್ಯ ಪಡುವಂತೆ ಜೆಡಿಎಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ ಕಾಶೆಂಪುರ್, ರಾಜ್ಯದಲ್ಲಿ ಸಾಕಷ್ಟು ಪ್ರಾದೇಶಿಕ ಪಕ್ಷಗಳು ಬಂದು, ಮುಚ್ಚಿ ಹೋಗಿವೆ. ಜನತಾ ದಳ ಮಾತ್ರ ಗಟ್ಟಿಯಾಗಿ ಉಳಿದಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದಲೂ ನಮಗೆ ಯಾವುದೇ ಸಮಸ್ಯೆ ಆಗದು ಎಂದರು.

ಟಾಪ್ ನ್ಯೂಸ್

tdy-11

ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ: ಎಚ್.ವಿಶ್ವನಾಥ್

Roopesh shetty’s Tulu movie Circus movie song released

ರೂಪೇಶ್ ಶೆಟ್ಟಿ ನಿರ್ದೇಶನದ ‘ಸರ್ಕಸ್’ ಚಿತ್ರದ ಹಾಡು ಬಿಡುಗಡೆ; ಜೂ. 23 ರಂದು ಸಿನಿಮಾ ತೆರೆಗೆ

ನರೇಂದ್ರ ಮೋದಿ

ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ

tdy-8

ಗಂಗಾವತಿ: ದಾಖಲೆ ಇಲ್ಲದೇ 60 ಲಕ್ಷ ರೂ.ಸಾಗಾಟ; ನಗದು ಸಮೇತ ಕಾರು ವಶಕ್ಕೆ

Aram arvind swamy first look released

‘ಆರಾಮ್‌ ಅರವಿಂದ್‌ ಸ್ವಾಮಿ‘ ಫ‌ಸ್ಟ್‌ ಲುಕ್‌ ರಿಲೀಸ್‌

ಬಾತ್ ರೂಮ್‌ ನಲ್ಲಿ ಏಕಾಏಕಿ ಕುಸಿದು ಬಿದ್ದು ಖ್ಯಾತ ನಟಿ ನೀಲು ಕೊಹ್ಲಿ ಅವರ ಪತಿ ಮೃತ್ಯು

ಬಾತ್ ರೂಮ್‌ ನಲ್ಲಿ ಏಕಾಏಕಿ ಕುಸಿದು ಬಿದ್ದು ಖ್ಯಾತ ನಟಿ ನೀಲು ಕೊಹ್ಲಿ ಅವರ ಪತಿ ಮೃತ್ಯು

Health Article: ಒಂದು ಬಾಟಲ್ ಬಿಯರ್ ಕುಡಿದ್ರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವೇ?

Health: ಒಂದು ಬಾಟಲ್ ಬಿಯರ್/ 1 ಪೆಗ್ ಕುಡಿಯೋದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮ ಗೊತ್ತಾ?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-11

ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ: ಎಚ್.ವಿಶ್ವನಾಥ್

ನರೇಂದ್ರ ಮೋದಿ

ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ

tdy-8

ಗಂಗಾವತಿ: ದಾಖಲೆ ಇಲ್ಲದೇ 60 ಲಕ್ಷ ರೂ.ಸಾಗಾಟ; ನಗದು ಸಮೇತ ಕಾರು ವಶಕ್ಕೆ

ಕರಾವಳಿ ಪಡೆಯಲು ಕೈ ಕಸರತ್ತು; ಹಲವು ಹೊಸಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್

ಕರಾವಳಿ ಪಡೆಯಲು ಕೈ ಕಸರತ್ತು; ಹಲವು ಹೊಸಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್

tdy-3

ವಿಧಾನಸಭೆ ಚುನಾವಣೆ: ಕಾಂಗ್ರೆಸ್‌ ನ ಮೊದಲ ಪಟ್ಟಿ ರಿಲೀಸ್

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

tdy-11

ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ: ಎಚ್.ವಿಶ್ವನಾಥ್

tdy-10

ಸೋಲಾರ್‌ ಪ್ಲಾಂಟ್‌ ಹೆಸರಲ್ಲಿ ವಂಚನೆ: ಸೆರೆ

Roopesh shetty’s Tulu movie Circus movie song released

ರೂಪೇಶ್ ಶೆಟ್ಟಿ ನಿರ್ದೇಶನದ ‘ಸರ್ಕಸ್’ ಚಿತ್ರದ ಹಾಡು ಬಿಡುಗಡೆ; ಜೂ. 23 ರಂದು ಸಿನಿಮಾ ತೆರೆಗೆ

tdy-9

ಕೆಟ್ಟ ಭವಿಷ್ಯ ಹೇಳಿದ್ದಕ್ಕೆ ಹಲ್ಲೆ: ಕೊಲೆ !

ನರೇಂದ್ರ ಮೋದಿ

ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.