ಕಾಳಸಂತೆಯಲ್ಲಿ ಅಕ್ಕಿ ಮಾರಾಟ: ವಾಹನ ಜಪ್ತಿ
Team Udayavani, Jan 25, 2022, 3:29 PM IST
ಮುದಗಲ್ಲ: ಸಮೀಪದ ಸಜ್ಜಲಗುಡ್ಡ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗಾಗಿ ಸರಕಾರ ವಿತರಣೆ ಮಾಡುತ್ತಿರುವ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿರುವಾಗ ಅಕ್ಕಿ ಮೂಟೆ ಸಮೇತ ವಾಹನವನ್ನು ಮುದಗಲ್ಲ ಪೊಲೀಸರು ಜಪ್ತಿ ಮಾಡಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.
ಠಾಣಾ ವ್ಯಾಪ್ತಿಯ ಕೊನೆಯ ಪ್ರದೇಶವಾದ ಸಜ್ಜಲಗುಡ್ಡದಲ್ಲಿ ಸರಕಾರದ ವತಿಯಿಂದ ಉಚಿತವಾಗಿ ಅಕ್ಕಿಯನ್ನು ಕುಟುಂಬಕ್ಕೆ ನೀಡಲಾಗುತ್ತಿದೆ. ಆದರೆ, ಅದೇ ಅಕ್ಕಿಯನ್ನು 10 ರೂ. ಕೆ.ಜಿ ಯಂತೆ ನಾಗರಿಕರಿಂದ ಖರೀದಿ ಮಾಡಿಕೊಂಡು ಅದಕ್ಕೆ ಪಾಲಿಷ್ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವದು ಸಾಮಾನ್ಯವಾಗಿದೆ.
ಸರಕಾರ ಕೊಟ್ಟ ಅಕ್ಕಿಯನ್ನು ನಾಗರಿಕರಿಗೆ ಹೆಚ್ಚಿನ ಹಣದ ಆಮಿಷ ತೋರಿಸಿ ಅದನ್ನು ಕಾಳಸಂತೆಗೆ ಖರೀದಿಸುವವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೆರೆ, ಪ್ರಾಕೃತಿಕ ವಿಕೋಪಗಳಲ್ಲಿ ತುರ್ತು ಪರಿಹಾರ ಕಾರ್ಯ: ಜಿಲ್ಲಾಧಿಕಾರಿ ಕರೆ
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ನಾರಾಯಣ ಗುರುಗಳ ಪಠ್ಯ ಕೈಬಿಟ್ಟರೆ ಚಳವಳಿ: ಲೋಬೋ
ಮಗಳನ್ನೇ ಹತ್ಯೆಗೈದ ಪ್ರಕರಣ : ಕೊನೆಗೂ ಇಂದ್ರಾಣಿ ಮುಖರ್ಜಿಗೆ ಜಾಮೀನು
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ